Advertisement
ಈ ನಡುವೆ ಅಮೆರಿಕಾ ಅಪಾಯದ ಎಚ್ಚರಿಕೆಯನ್ನು ನೀಡಿದ್ದು, ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರಲು ತನ್ನ ನಾಗರಿಕರಿಗೆ ಸೂಚಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
Related Articles
Advertisement
ಕಾಬೂಲ್‌ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯಿಂದ ಹೊರಡಿಸಲಾದ ಭದ್ರತಾ ಎಚ್ಚರಿಕೆಯ ಪ್ರಕಾರ, ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಈ ಸಮಯದಲ್ಲಿ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸದಂತೆ ಅಮೆರಿಕಾ ನಾಗರಿಕರಿಗೆ ಸೂಚಿಸಿದೆ.
ಕಾಬೂಲ್‌ನ ವಿಮಾನ ನಿಲ್ದಾಣದ ಹೊರಗಿನ ಗೇಟ್‌ನಲ್ಲಿ ಯುಎಸ್ ನಾಗರಿಕರು ಬೆದರಿಕೆಗಳ ಕಾರಣದಿಂದ “ತಕ್ಷಣವೇ” ಹೊರಹೋಗುವಂತೆ ವಿದೇಶಾಂಗ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಇದಲ್ಲದೆ ಕಾಬೂಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ ಹೊರಡಿಸಲಾದ ಭದ್ರತಾ ಎಚ್ಚರಿಕೆಯಲ್ಲಿ, ಎಬಿ ಗೇಟ್, ಈಸ್ಟ್ ಗೇಟ್ ಅಥವಾ ಉತ್ತರ ಗೇಟ್ ನಲ್ಲಿರುವ ಯುಎಸ್ ನಾಗರಿಕರು ತಕ್ಷಣವೇ ಆ ಸ್ಥಳಗಳನ್ನೂ ತೊರೆಯುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ವಿದೇಶಿ ಪ್ರಜೆಗಳ ಮೇಲೆ ತಾಲಿಬಾನ್ ದಾಳಿ
ಕಾಬೂಲ್ ವಿಮಾನ ನಿಲ್ದಾಣದ ಹೊರ ಭಾಗದಲ್ಲಿರುವ ವಿದೇಶಿ ಪ್ರಜೆಗಳ ಮೇಲೆ ತಾಲಿಬಾನ್ ಉಗ್ರರು ದಾಳಿ ಮಾಡುತ್ತಿದ್ದಾರೆ. ಇದೇ ಕಾರಣದಿಂದಾಗಿ ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಕಾಬೂಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಮೊಘಲರು ದುಷ್ಟರಲ್ಲ…ನಿಜವಾಗಿ ಈ ದೇಶ ಕಟ್ಟಿದ್ದು ಮೊಘಲರು: ನಿರ್ದೇಶಕ ಕಬೀರ್ ಖಾನ್