Advertisement
ನಗರದಲ್ಲಿ ಕೆಲವೊಂದು ವೃತ್ತಗಳು ಜನರ ಗಮನ ಸೆಳೆಯುತ್ತಿವೆ. ಇಲ್ಲಿನ ಐತಿಹಾಸಿಕಕ್ಕೂ ತೊಂದರೆ ಬಾರದಂತೆ, ಆಧುನಿಕತೆಯನ್ನೂ ಅಳವಡಿಸಿಕೊಂಡು ಕೆಲವು ವೃತ್ತಗಳಅಭಿವೃದ್ಧಿ ಮಾಡಲಾಗಿದೆ. ಬಸವೇಶ್ವರವೃತ್ತ, ಅಶೋಕ ವೃತ್ತ ಹೊರತುಪಡಿಸಿದರೆ, ಗದಗ ರಸ್ತೆಯ ಲೇಬರ್ ಸರ್ಕಲ್‌ಗೆ ಹೊಸ ರೂಪ ಕೊಡಲು ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧವಾಗಿದೆ. ಈ ಲೇಬರ್ ಸರ್ಕಲ್‌ಗೆ ಲಾಲ್ ಬಹದ್ದೂರ್‌ಶಾಸ್ತ್ರಿ ವೃತ್ತ, ಸಿಂಪಿ ಲಿಂಗಣ್ಣ ವೃತ್ತ ಎಂದೆಲ್ಲ ನಾಮಾಂಕಿತದಿಂದ ಕರೆಯುತ್ತಾರೆ. ಆದರೆ ಬಹುಪಾಲು ಕಾರ್ಮಿಕ ವರ್ಗವು ಪ್ರತಿ ದಿನ ಬೆಳಗ್ಗೆ ಗ್ರಾಮೀಣ ಭಾಗದಿಂದ ಆಗಮಿಸಿ ಈ ವೃತ್ತದ ಬಳಿಯೇ ನಿಂತು ಕೆಲಸ ಹರಸಿ ಬೇರೆಡೆ ತೆರಳುವುದರಿಂದ ಲೇಬರ್ ಸರ್ಕಲ್ ಎಂದೇ ಹೆಸರು ಪಡೆದಿದೆ. ಅಲ್ಲದೇ, ಈ ವೃತ್ತದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ-63 ರಸ್ತೆ ಹಾದು ಹೋಗುವುದರಿಂದ ವಾಹನಗಳ ಸಂಚಾರವೂ ಹೆಚ್ಚಾಗುತ್ತಿದೆ.
Related Articles
Advertisement
ಸಿಸಿ ಕ್ಯಾಮೆರಾ, ಸಂಚಾರಿ ಸಿಗ್ನಲ್ ಅಳವಡಿಕೆ: ಲೇಬರ್ ಸರ್ಕಲ್ ಅಭಿವೃದ್ಧಿ ಮಾಡಿದ ಬಳಿಕ ಅತ್ಯಾಧುನಿಕ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಯಾವುದೇ ಚಟುವಟಿಕೆಯ ಮೇಲೆ ನಿಗಾ ಇರಿಸುವ ಯೋಜನೆಯೂ ಇದೆ.ಜೊತೆಗೆ ಈ ವೃತ್ತದಲ್ಲಿ ಹೆಚ್ಚಿನ ಜನದಟ್ಟಣೆ ಇದ್ದರೂ ಸಿಗ್ನಲ್‌ಗಳ ಅಳವಡಿಕೆಯಾಗಿಲ್ಲ.ಹಾಗಾಗಿ ಹೊಸ ಯೋಜನೆಯಲ್ಲಿಸಿಗ್ನಲ್‌ಗಳ ಅಳವಡಿಕೆ ಮಾಡಿ ಈಗಾಗಲೆ ಬಸವೇಶ್ವರ ವೃತ್ತ, ಅಶೋಕ ವೃತ್ತದಲ್ಲಿ ಯಾವ ರೀತಿಯ ಪೊಲೀಸ್ ಬಂದೋಬಸ್ತ್ನಡಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆಯೋ ಅದೇ ಮಾದರಿಯಲ್ಲಿಯೇ ಇಲ್ಲಿ ಸಿಗ್ನಲ್ ವ್ಯವಸ್ಥೆಗೆ ಪ್ಲಾನ್ ಮಾಡಲಾಗಿದೆ.
ಅವಶ್ಯವಿದ್ದರೆ ವೃತ್ತ ಸುತ್ತ ಅಗಲೀಕರಣ: ಪ್ರಸ್ತುತ ಲೇಬರ್ ಸರ್ಕಲ್‌ನ ನಾಲ್ಕೂ ಬದಿಯಲ್ಲಿ ಕೆಲವೊಂದು ಕಡೆ ಒತ್ತುವರಿಯಾಗಿರುವ ಕುರಿತು ಮಾತು ಕೇಳಿ ಬರುತ್ತಿದ್ದು, ವೃತ್ತ ನಿರ್ಮಾಣದ ವೇಳೆ ಅವೆಲ್ಲವನ್ನೂ ತೆರವು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಜೊತೆಗೆ ಮುಂದಿನ 20-30 ವರ್ಷಗಳ ದೂರದೃಷ್ಟಿಯಿಂದಅವಶ್ಯವಿದ್ದರೆ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ವೃತ್ತದ ನಾಲ್ಕೂ ಬದಲಿಯಲ್ಲಿಅಗಲೀಕರಣ ಮಾಡಿ ಇನ್ನಷ್ಟು ಹೈಟೆಕ್ ಮಾಡಲು ಪ್ರಾಧಿಕಾರವು ಯೋಜನೆ ಮಾಡಿಕೊಂಡಿದೆ.
ಒಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಕೆಲವು ಪ್ರಮುಖ ವೃತ್ತಗಳ ಜೊತೆಗೆ ಲೇಬರ್ ಸರ್ಕಲ್ ವೃತ್ತಕ್ಕೂ ಡಿಜಿಟಲ್ ರೂಪ ಸಿಗಲಿದೆ. ಇದರಿಂದ ಜನ ಸಂಚಾರಕ್ಕೂತುಂಬ ಅನುಕೂಲವಾಗಲಿದೆ. ಜೊತೆಗಜಿಲ್ಲಾ ಕೇಂದ್ರದಲ್ಲಿ ಈ ವೃತ್ತಕ್ಕೂ ಹೆಚ್ಚಿನ ಮನ್ನಣೆ ದೊರೆಯಲಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಲೇಬರ್ ಸರ್ಕಲ್ ಅನ್ನು ಆಧುನಿಕತೆಗೆ ತಕ್ಕಂತೆಅಭಿವೃದ್ಧಿ ಮಾಡಲು ಡಿಪಿಆರ್ ಸಿದ್ಧಪಡಿಸಲಾಗಿದೆ. ವೃತ್ತದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಸಂಚಾರಿ ಸಿಗ್ನಲ್ ವ್ಯವಸ್ಥೆ ಸೇರಿದಂತೆ ಅವಶ್ಯವಿದ್ದಲ್ಲಿಅಗಲೀಕರಣಕ್ಕೂ ಚಿಂತನೆ ನಡೆಸಿದ್ದೇವೆ. ವೃತ್ತದಲ್ಲಿ ಗಡಿಯಾರ ಅಳವಡಿಕೆಗೂ ಪ್ಲ್ಯಾನ್ ಮಾಡಿದ್ದೇವೆ. ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. -ಮಹಾಂತೇಶ ಪಾಟೀಲ್ ಮೈನಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ಕೊಪ್ಪಳ
-ದತ್ತು ಕಮ್ಮಾರ