Advertisement

ಹೈಟೆಕ್‌ ಮಾದರಿಯಲ್ಲಿ ಉದ್ಯಾನ ಅಭಿವೃದ್ಧಿ; ಎ.ಎಸ್‌.ಪಾಟೀಲ ನಡಹಳ್ಳಿ

05:03 PM Jan 21, 2021 | Nagendra Trasi |

ತಾಳಿಕೋಟೆ: ತಾಳಿಕೋಟೆ, ಮುದ್ದೇಬಿಹಾಳ, ನಾಲತವಾಡದಲ್ಲಿನ ಉದ್ಯಾನಗಳನ್ನು ಅಭಿವೃದ್ಧಿ ಮಾಡಿ ವಾಯು ವಿಹಾರಿಗಳ ತಾಣಗಳಾಗಿ ರೂಪಿಸಲು
ಸರ್ಕಾರದಿಂದ ಹೆಚ್ಚಿಗೆ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ, ಆಹಾರ ಮತ್ತು  ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌.
ಪಾಟೀಲ (ನಡಹಳ್ಳಿ) ಹೇಳಿದರು. ಬುಧವಾರ ಎಸ್‌.ಕೆ. ನಗರ ಬಡಾವಣೆ, ಸಜ್ಜನ ಲೇಔಟ್‌, ಆಶ್ರಯ ಕಾಲೋನಿ, ಶರಣಮುತ್ಯಾರ ದೇವಸ್ಥಾನದ ಹಿಂದುಗಡೆಯ ಪುರಸಭೆಯ ಗಾರ್ಡನ್‌ ಜಾಗೆಗಳನ್ನು ಆಲಮಟ್ಟಿ ಕೆಬಿಜೆಎನ್ನೆಲ್‌ ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಹನುಮಾನ ಮಂದಿರದಲ್ಲಿ ಆಶ್ರಯ ಕಾಲೋನಿ ನಿವಾಸಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

Advertisement

ತಾಳಿಕೋಟೆ ಪಟ್ಟಣದಲ್ಲಿ 64 ಗಾರ್ಡನ್‌ ಜಾಗೆಗಳ ಪೈಕಿ ಸದ್ಯ 5 ಗಾರ್ಡನ್‌ ಮಾಡಲಾಗುತ್ತದೆ. ಪ್ರತಿ ವರ್ಷ ಹಂತ ಹಂತವಾಗಿ ಎಲ್ಲ ಗಾರ್ಡನ್‌ ಜಾಗೆಗಳನ್ನು ಅಭಿವೃದ್ಧಿ ಮಾಡುವ ಗುರಿಯಿಟ್ಟು ಕೊಳ್ಳಲಾಗಿದೆ. ಸಜ್ಜನ ಲೇಔಟ್‌ನಲ್ಲಿರುವ ಗಾರ್ಡನ್‌ ಜಾಗೆಯಲ್ಲಿ ಅಭಿವೃದ್ದಿ ಜೊತೆಗೆ ಆಲಮಟ್ಟಿಯಲ್ಲಿರುವ ಸಂಗೀತ ಕಾರಂಜಿಯಂತೆ ಚಿಕ್ಕದಾಗಿ ಇಲ್ಲಿಯೂ ಸಂಗೀತ ಕಾರಂಜಿ ನಿರ್ಮಿಸುವ ಯೋಜನೆ ಇದೆ ಎಂದರು.

ತಾಳಿಕೋಟೆ ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಬೇಡಿಕೆಗೆ ಅನುಗುಣವಾಗಿ 10 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅದರಂತೆ
ನಮ್ಮ ಮತಕ್ಷೇತ್ರದ ಅಭಿವೃದ್ದಿಗಾಗಿ ಕೊರೊನಾ ಸಂದರ್ಭದಲ್ಲೂ 500 ಕೋಟಿಗೂ ಅಧಿಕ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ 180
ಕೋಟಿ ರೂ.ಗಳ ಕಾಮಗಾರಿ ಪ್ರಾರಂಭ ಹಂತದಲ್ಲಿವೆ. ಪ್ರತಿ ಗ್ರಾಮಗಳಿಗೂ 3ರಿಂದ 4 ಕೋಟಿ ರೂ. ರಸ್ತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಲಾಗಿದೆ
ಎಂದರು.

ತಾಳಿಕೋಟೆ ಪಟ್ಟಣಕ್ಕೆ ಇನ್ನೂ 25 ಕೋಟಿ ರೂ. ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.ಮುಖ್ಯಮಂತ್ರಿಗಳು ಆದಷ್ಟು ಬೇಗ ಅನುಮೋದನೆ ಕೊಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರವಾಹ, ಕೊರೊನಾದಂತ ಭೀಕರ ಸಂದರ್ಭದಲ್ಲೂ ನಮ್ಮ ಸರ್ಕಾರ ಅಭಿವೃದ್ಧಿ
ಕಾರ್ಯಗಳಿಗೆ ಒತ್ತು ನೀಡುತ್ತ ಬಂದಿದೆ ಎಂದರು. ಪಟ್ಟಣದಲ್ಲಿ 64 ಉದ್ಯಾನ ಜಾಗೆಗಳಿದ್ದು ಅವುಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು.
ಆಲಮಟ್ಟಿಯ ಗಾರ್ಡನ್‌ನಲ್ಲಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗಳೇ ಇಲ್ಲಿನ ಉದ್ಯಾನಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಆರು ತಿಂಗಳಲ್ಲಿ ಉದ್ಯಾನ
ಕಾಮಗಾರಿಗಳನ್ನು ಮುಗಿಸಲು ಸೂಚಿಸಿದ್ದೇನೆ ಎಂದರು.

ತಹಶೀಲ್ದಾರ್‌ ಅನಿಲಕುಮಾರ ಢವಳಗಿ, ಸಿಪಿಐ ಆನಂದ ವಾಗೊಡೆ, ಕೆಬಿಜೆಎನ್ನೆಲ್‌ ಪ್ರಾದೇಶಕ ಅರಣ್ಯಾಧಿಕಾರಿ ಮಹೇಶ ಪಾಟೀಲ, ಉಪ ವಲಯ ಅರಣ್ಯಾಧಿಕಾರಿ ಮೃತ್ಯುಂಜಯ ಬಿದರಕುಂದಿ, ಪಿಡಬುಡಿ ಅಭಿಯಂತರ ಆರ್‌.ಎನ್‌. ಹುಂಡೇಕಾರ, ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ, ಸದಸ್ಯರಾದ
ವಾಸುದೇವ ಹೆಬಸೂರ, ಮುತ್ತಪ್ಪ ಚಮಲಾಪುರ,ನಿಂಗರಾಜ ಕುಂಟೋಜಿ, ಬಿಜೆಪಿ ಮುಖಂಡರಾದ ಶಿವಶಂಕರ ಹಿರೇಮಠ, ಕಾಶೀನಾಥ ಮುರಾಳ, ಈಶ್ವರ
ಹೂಗಾರ, ಮಾನಸಿಂಗ್‌ ಕೊಕಟನೂರ, ಶಿವಾಜಿ ಶೆವಳಕರ, ವಿಠuಲ ಮೋಹಿತೆ, ಸುರೇಶ ಗುಂಡಣ್ಣವರ, ಕಕ್ಕುಸಾ ರಂಗ್ರೇಜ್‌, ಶರಣು ಗೊಟಗುಣಕಿ, ಗುರು
ಕೊಪ್ಪದ, ರವಿ ಕಟ್ಟಿಮನಿ, ರಮೇಶ ನಾಯೊಡಿ, ಗಂಗು ಕೊಕಟನೂರ, ಮಲ್ಲು ಬಟ್‌, ಶಾಂತಪ್ಪ ಹಡಪದ ಹಾಗೂ ಹಸಿರು ಸಂಪದ ಬಳಗದ ಸದಸ್ಯರು ಇದ್ದರು.

Advertisement

ಭಾರತ ಜಗತ್ತಿನ ಶ್ರೇಷ್ಠ ದೇಶಗಳ ಸಾಲಿಗೆ ನಿಲ್ಲಲು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳು ಶ್ಲಾಘನೀಯವಾಗಿವೆ. ಇಂದು ಕೊರೊನಾ ಲಸಿಕೆಗಾಗಿ ಪ್ರಬಲ ದೇಶಗಳು ನಮ್ಮ ದೇಶದ ಮುಂದೆ ಕ್ಯೂನಲ್ಲಿ ನಿಂತಿದ್ದಾರೆ. ಇಂತಹ ಪ್ರಧಾನಿಯನ್ನ ಪಡೆದ ನಾವೇ ಧನ್ಯರು.

ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next