Advertisement

ಸ್ಮಾರ್ಟ್‌ ಕ್ಲಾಸ್‌ನಿಂದ ಹೈಟೆಕ್‌ ಶಿಕ್ಷಣ ಲಭ್ಯ

12:35 PM Feb 03, 2018 | Team Udayavani |

ಅಫಜಲಪುರ: ಖಾಸಗಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳಿವೆ, ಅಲ್ಲಿ ಹೆಚ್ಚಿನ ಡೊನೆಶನ್‌ ತುಂಬಿ ಶಾಲೆಗೆ ಹೋಗುವುದಕ್ಕೆ ಬಡ ರೈತರ ಮಕ್ಕಳಿಗೆ ಕಷ್ಟಸಾಧ್ಯ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿಯೂ ಸ್ಮಾರ್ಟ್‌ ಕ್ಲಾಸ್‌ ಅಳವಡಿಕೆಯಿಂದ ವಿದ್ಯಾರ್ಥಿಗಳು ಹೈಟೆಕ್‌ ಶಿಕ್ಷಣ ಪಡೆ‌ದುಕೊಳ್ಳಬಹುದು ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.

Advertisement

ತಾಲೂಕಿನ ತೆಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಲ್ಟೋ ಕಂಪನಿ, ಟೆಲ್ಕೋ ಸೋಲಾರ್‌ ಲಿಮಿಟೆಡ್‌ ಗುಲಬರ್ಗಾ, ಗ್ರಾಪಂ ತೆಲ್ಲೂರ, ಇ ಶಾಲಾ ಆಡಳಿತ ಮಂಡಳಿ ಸಹಯೋಗದಲ್ಲಿ 5, 6 ಮತ್ತು 7ನೇ ತರಗತಿಗಳಿಗೆ ಹೈಟೆಕ್‌ ಶಿಕ್ಷಣ
ಕಲ್ಪಿಸುವ ನಿಟ್ಟಿನಲ್ಲಿ ಸ್ಮಾರ್ಟ್‌ ಕ್ಲಾಸ್‌ ಮಾದರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದೆ. ಸರ್ಕಾರದ ಅನುದಾನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ ತೋರಿಸುವ ಕಾಲ ಈಗ ಹೋಗಿದೆ. ಸರ್ಕಾರಿ ಶಾಲೆಗಳು ಕೂಡ ಹೈಟೆಕ್‌ ಆಗುತ್ತಿವೆ. ಬರುವ ದಿನಗಳಲ್ಲಿ
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೂ ಮೊದಲು ತಾಲೂಕಿನ ಬಂದರವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್‌ ಅಳವಡಿಸಲಾಗಿತ್ತು. ಈಗ ಪ್ರಾಥಮಿಕ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ತೆಲ್ಲೂರ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಅಳವಡಿಸಲಾಗಿದೆ ಎಂದರು. ಬಿಇಒ ವಸಂತ ರಾಠೊಡ ಮಾತನಾಡಿ, ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

ಶಾಸಕರು ಕೂಡ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು. ತಾಪಂ ಸದಸ್ಯೆ ಪಾರ್ವತಿ ಶಂಕರ ಕಣ್ಣಿ, ಗ್ರಾಪಂ ಅದ್ಯಕ್ಷ ಮಹಾಂತಪ್ಪ ಹುಮ್ಮನ್‌, ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ಮಾಜಿ ತಾಪಂ ಅಧ್ಯಕ್ಷ ಶಿವಪುತ್ರಪ್ಪ ಕರೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಬಿಆರ್‌ಸಿ ಸುಧಾಕರ ನಾಯಕ, ಮುಖ್ಯಶಿಕ್ಷಕಿ ದೇವಮ್ಮ
ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next