Advertisement
ಪೊಲೀಸ್ ಇನ್ಸಪೆಕ್ಟರ್ ನೀಡಿರುವ ನೋಟೀಸ್ ರದ್ದುಗೊಳಿಸುವಂತೆ ಕಂಪೆನಿಯ ಸಿಇಒ ಆಶೀಶ್ ದೀಕ್ಷಿತ್ ಹಾಗೂ ಮತ್ತಿಬ್ಬರು ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧದ ಪೊಲೀಸ್ ನೋಟೀಸ್‌ಗೆ ಮುಂದಿನ ವಿಚಾರಣೆಯವರೆಗೆ ತಡೆಯಾಜ್ಞೆ ನೀಡಿ ಜೂನ್ 5ಕ್ಕೆ ಮುಂದೂಡಿತು.
ಇಂದಿರಾನಗರದ ನಿವಾಸಿ ಶೀತಲ್. ಆರ್ ಎಂಬವವರು ನೀಡಿದ ದೂರಿನ ಅನ್ವಯ ರಾಮಮೂರ್ತಿ ನಗರ ಠಾಣೆ ಇನ್ಸಪೆಕ್ಟರ್, ಮೇ 24ರಂದು ಕಂಪೆನಿಯ ಸಿಇಒ, ಆಶೀಶ್ ದೀಕ್ಷಿತ್, ಸಿಎಫ್ಒ ವಿನಯ್ ಬೋಪತ್ಕರ್ ಹಾಗೂ ಹಣಕಾಸು ಅಧಿಕಾರಿ ವಿಕಾಸ್ ಅಗರ್‌ವಾಲ್‌ಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ದೂರು ನೀಡಿರುವ ಶೀತಲ್ ಅವರ ಪತಿ ಅರುಣ್ ರಾಮಮೂರ್ತಿ ನಮ್ಮ ಸಂಸ್ಥೆಯ ಮಾಜಿ ಉದ್ಯೋಗಿ. ಅಧಿಕಾರ ದುರ್ಬಳಕೆ ಹಿನ್ನೆಲೆಯಲ್ಲಿ 2014ರಲ್ಲಿ ಮಹದೇವಪುರ ಠಾಣೆಯಲ್ಲಿ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿದ್ದರೂ ಶೀತಲ್ ಸಲ್ಲಿಸಿರುವ ದೂರಿನ ಅನ್ವಯ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ಅಧಿಕಾರಿ ನೋಟೀಸ್ ಕಳುಹಿಸಿರುವುದು ಕಾನೂನು ಬಾಹಿರ ಎಂದು ಕಂಪನಿ ಪರ ವಕೀಲರು ವಾದ ಮಂಡಿಸಿದ್ದರು.