Advertisement

ವಾಹನಗಳಿಗೆ ಶೀಘ್ರ ಹೈ ಸೆಕ್ಯುರಿಟಿ ನಂ. ಪ್ಲೇಟ್‌!

12:54 AM Feb 24, 2019 | |

ಬೆಂಗಳೂರು: ಈಗಾಗಲೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಾಹನಗಳಿಗೆ ಅಧಿಕ ಭದ್ರತೆ ಒದಗಿಸುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ರಾಜ್ಯದಲ್ಲೂ ಏಪ್ರಿಲ್‌ ಒಂದರಿಂದ ಜಾರಿಗೆ ಬರಲಿದೆ. ವಾಹನ ಕಳ್ಳತನ ತಡೆಯಲು ಅಥವಾ ಕಳೆದ ಹೋದ ವಾಹನಗಳನ್ನು ಪತ್ತೆ ಹಚ್ಚಲು ಈ ವ್ಯವಸ್ಥೆ ಸಹಕಾರಿಯಾಗಿದೆ. ಕಳೆದ ಡಿಸೆಂಬರ್‌ನಲ್ಲೇ ಕೇಂದ್ರ ಸರ್ಕಾರ 1989ರ ಕೇಂದ್ರೀಯ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿ ತಂದು ಈ ಕಾಯ್ದೆಯನ್ನು ಜಾರಿಗೊಳಿಸಿದೆ.

Advertisement

ಹೀಗಾಗಿ ಏ.1ರ ನಂತರ ಮಾರಾಟವಾಗುವ ಎಲ್ಲಾ ವಾಹನಗಳಲ್ಲೂ ಕಡ್ಡಾಯವಾಗಿ ಈ ನಂಬರ್‌ ಪ್ಲೇಟ್‌ ಇರಲೇಬೇಕು. ಹೊಸ ವ್ಯವಸ್ಥೆಯಲ್ಲಿ ಮೂರು ನಂಬರ್‌ ಪ್ಲೇಟ್‌ಗಳಿರುತ್ತವೆ. ಅಂದರೆ, ವಾಹನದ ಹಿಂಭಾಗ, ಮುಂಭಾಗದ ಜತೆಗೆ ವಾಹನದ ಒಳಗೂ ನಂಬರ್‌ ಪ್ಲೇಟ್‌ ಇರಲಿದೆ. ಎಚ್‌ಎಸ್‌ಆರ್‌ಪಿ ಜತೆಗೆ ವಾಹನದ ಸಂಪೂರ್ಣ ಮಾಹಿತಿ ಇರುವ ಸ್ಟಿಕರ್‌ ಅನ್ನು ಅಂಟಿ ಸಲಾಗುತ್ತಿದ್ದು, ಈ ಸ್ಟಿಕ್ಕರ್‌ ಅನ್ನು ಸ್ಕ್ಯಾನ್‌ ಮಾಡಿದಾಗ ವಾಹನದ ಸಮಗ್ರ ಮಾಹಿತಿ ಲಭಿಸುತ್ತದೆ.

ಹಳೇ ವಾಹನಗಳಿಗೂ ಅವಕಾಶ: ಪ್ರಸಕ್ತ ರಸ್ತೆಯಲ್ಲಿ ಓಡಾಡುವ ವಾಹನಗಳಿಗೂ ಈ ಹೊಸ ಮಾದರಿಯ ನಂಬರ್‌ ಪ್ಲೇಟ್‌ ಅಳವಡಿಸಲು ಅವಕಾಶವಿದೆ. ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ, ವಾಹನದ ಹಳೇ ನೋಂದಣಿ ಸಂಖ್ಯೆಯನ್ನು ಕೊಟ್ಟು, ಹೊಸದನ್ನು ಪಡೆಯಬೇಕು. ಆದರೆ, ಹಳೇ ವಾಹನಗಳಿಗೆ ಬೇಕೇ ಅಥವಾ ಬೇಡವೇ ಎಂಬುದನ್ನು ತೀರ್ಮಾ ನಿಸುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಎಚ್‌ಎಸ್‌ಆರ್‌ಪಿ ಅಳವಡಿಕೆಯನ್ನು ವಾಹನ ಉತ್ಪಾದಕರು ಡೀಲರ್‌ಗಳ ಮೂಲಕ ಜಾರಿಗೊಳಿಸ ಬೇಕಾಗಿರುವುದರಿಂದ ವಾಹನ ಖರೀದಿಸುವ ಗ್ರಾಹಕರು ಇದಕ್ಕಾಗಿ ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ. ವಾಹನದ ಮೂಲ ಬೆಲೆಯ ಇನ್‌ವಾಯ್ಸನಲ್ಲಿಯೇ ಈ ನಂಬರ್‌ ಪ್ಲೇಟ್‌ನ ಖರ್ಚು ಸೇರಿರುತ್ತದೆ.

15 ವರ್ಷ ಗ್ಯಾರಂಟಿ: ಎಚ್‌ಎಸ್‌ಆರ್‌ಪಿಗೆ 15 ವರ್ಷಗಳ ಗ್ಯಾರಂಟಿ ಇದೆ. ಅದು ಒಡೆದು ಹೋದರೆ, ಅಂಕಿ ಅಂಶಗಳು ಅಳಿಸಿ ಹೋದರೆ ಅಥವಾ ಇತರ ಯಾವುದೇ ನೈಸರ್ಗಿಕ ಕಾರಣಗಳಿಂದ ಹಾನಿಗೊಳಗಾದರೆ ಅದಕ್ಕೆ  ಫಿಟ್‌ ಮಾಡಿದ ಡೀಲರ್‌ದಾರರೇ
ಜವಾಬ್ದಾರರು. 

2005 ರಲ್ಲಿ ಆದೇಶ: 2002 ರಲ್ಲಿ ಭಯೋತ್ಪಾದಕರು ನಕಲಿ ನಂಬರ್‌ ಪ್ಲೇಟ್‌ ಬಳಸಿದ ವಾಹನದಲ್ಲಿ ಬಂದು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟು ವಾಹನಗಳಿಗೆ ನಕಲಿ ಮಾಡಲಾಗದ, ಅಧಿಕ ಭದ್ರತೆ ಇರುವ ನಂಬರ್‌ ಪ್ಲೇಟ್‌ನ್ನು 2005 ರೊಳಗೆ ವಿತರಿಸಬೇಕೆಂದು ಸೂಚಿಸಿತ್ತು. ಬೆರಳೆಣಿಕೆಯ ರಾಜ್ಯಗಳು ಮಾತ್ರ ಈ ಆದೇಶವನ್ನು ಪಾಲಿಸಿದ್ದವು. ಇದೀಗ 14 ವರ್ಷಗಳ ಬಳಿಕ ಕರ್ನಾಟಕದಲ್ಲಿ ಇದು ಜಾರಿಗೆ ಬರುತ್ತಿದೆ.

Advertisement

ನಂಬರ್‌ ಪ್ಲೇಟಿನಲ್ಲಿ ಏನಿರುತ್ತೆ?

ನಕಲು ತಡೆಯಲು ಎರಡೂ ನಂಬರ್‌ ಪ್ಲೇಟ್‌ಗಳ ಮೇಲ್ಗಡೆ ಎಡ ಭಾಗದಲ್ಲಿ
ಕ್ರೋಮಿಯಂ ಆಧಾರಿತ ಹೋಲೋಗ್ರಾಂ ಅಳವಡಿಕೆ

ನೀಲಿ ಬಣ್ಣದ ಅಶೋಕ ಚಕ್ರವನ್ನು ಹೊಂದಿರುತ್ತದೆ.

ಕೆಳಗಿನ ಎಡಮೂಲೆಯಲ್ಲಿ ಹತ್ತು ಡಿಜಿಟ್‌ನ ಶಾಶ್ವತ ಗುರುತು ಸಂಖ್ಯೆ (ಪರ್ಮನೆಂಟ್‌ ಐಡೆಂಟಿಫಿಕೇಶನ್‌ ನಂಬರ್‌- ಪಿನ್‌)

„ ಅಂಕೆ ಸಂಖ್ಯೆಗಳ ಮೇಲೆ ಹೊಟ್‌ ಸ್ಟಾಂಪಿಂಗ್‌ ಫಿಲಂ ಅಂಟಿಸಲಾಗುತ್ತಿದ್ದು, ಅದರಲ್ಲಿ “ಇಂಡಿಯಾ’ ಎಂಬುದಾಗಿ ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ.

 ಈ ಎರಡು ನಂಬರ್‌ ಪ್ಲೇಟ್‌ಗಳ ಹೊರತಾಗಿ ವಾಹನದ ಒಳಗೆ ವಿಂಡ್‌ಶೀಲ್ಡ್‌ ನ ಕೆಳಗಡೆ ಎಡ ಬದಿಯಲ್ಲಿ ಕ್ರೋಮಿಯಂ ಹೋಲೋಗ್ರಾಂ ಸ್ಟಿಕರನ್ನು ಒಳಗೊಂಡ 3ನೇ ರಿಜಿಸ್ಟೇಶನ್‌ ಪ್ಲೇಟ್‌ ಅಳವಡಿಸಲಾಗುತ್ತದೆ. ರಿಜಿಸ್ಟ್ರೇಶನ್‌ ನಂಬರ್‌, ರಿಜಿಸ್ಟರ್‌ ಮಾಡಿದ ಪ್ರಾಧಿಕಾರ, ಲೇಸರ್‌ ಬ್ರಾಂಡೆಡ್‌ ಪಿನ್‌, ಎಂಜಿನ್‌ ಮತ್ತು ಚಾಸಿಸ್‌ ನಂಬರನ್ನು ಈ ಸ್ಟಿಕ್ಕರ್‌ ಹೊಂದಿರುತ್ತದೆ. „ ನಂಬರ್‌ ಪ್ಲೇಟ್‌ ಕಳವಾಗುವುದನ್ನು ತಡೆಯಲು ಹಿಂಭಾಗದ ನಂಬರ್‌ ಪ್ಲೇಟ್‌ಗೆ ಕನಿಷ್ಠ ಎರಡು ಕಳಚಲಾಗದ ಅಥವಾ ಮರು ಬಳಕೆ ಮಾಡಲಾಗದ ಸ್ನ್ಯಾಪನ್ನು ಅಳವಡಿಸಲಾಗುತ್ತದೆ. 

ಪ್ರಯೋಜನವೇನು?

ಉತ್ಪಾದನೆಯ ಹಂತದಲ್ಲಿಯೇ ವಾಹನದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿ.

ಕಳೆದು ಹೋದ/ಕದ್ದ ವಾಹನವನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ನಕಲಿ ನಂಬರ್‌ ಪ್ಲೇಟ್‌ ಹಾಕಿ ಓಡಿಸುವುದನ್ನು ತಡೆಯಬಹುದು

ರಾಜ್ಯ ಸರ್ಕಾರದಿಂದ ತೀರ್ಮಾನ ಇನ್ನೂ ಆಗಿಲ್ಲ. ಈ ವಿಚಾರದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿ ರುವುದರಿಂದ, ತೀರ್ಪು ಬಂದ ಬಳಿಕ ಅದನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಮುಂದೊಂದು ದಿನ ಹಳೇ ವಾಹನಗಳಿಗೂ ಈ ನಂಬರ್‌ ಪ್ಲೇಟ್‌ ಅಳವಡಿಸಬೇಕಾಗಬಹುದು.
 ವಿ. ಪಿ. ಇಕ್ಕೇರಿ, ರಾಜ್ಯ ಸಾರಿಗೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next