ವಿಜಯಪುರ: ಮೈದುಂಬಿ ನಿಂತಿರುವ ಆಲಮಟ್ಟಿ ಶಾಸ್ತ್ರೀ ಸಾಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಗಂಗಾಪೂಜೆ ನೆರವೇರಿಸಿ ಕೃಷ್ಣೆಗೆ ಬಾಗಿನ ಅರ್ಪಣೆಗೆ ಕ್ಷಣ ಗಣನೆ ಆರಂಭವಾಗಿದೆ.
ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಡ್ಯಾಂನ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಭರ್ತಿಯಾದ ಹಿನ್ನಲೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸುವ ಸಿಎಂ ಕಾರ್ಯಕ್ರಮಕ್ಕಾಗಿ ಡ್ಯಾಂನಲ್ಲಿ ಸಕಲ ಸಿದ್ದತೆ, ಡ್ಯಾಂ ಪ್ರವೇಶ ದ್ವಾರದಲ್ಲಿ ಪೊಲೀಸ್ ಭಾರಿ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪಾಸ್ ಇದ್ದವರಿಗೆ ಮಾತ್ರ ಪರಿಶೀಲನೆ ಬಳಿಕ ಪ್ರವೇಶ ಕಟ್ಟು ನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ. ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ:ಅಫ್ಘಾನ್ ನಲ್ಲಿ ನಡೆಯುತ್ತಿರುವ ಘಟನೆಗಳು ಮನುಷ್ಯರು ತಲೆತಗ್ಗಿಸುವಂತಿದೆ: ಈಶ್ವರಪ್ಪ
ಉತ್ತರ ವಲಯ ಐಜಿಪಿ ಎನ್ ಸತೀಶಕುಮಾರ, ವಿಜಯಪುರ ಎಸ್ಪಿ ಆನಂದ ಕುಮಾರ ಬಾಗಲಕೋಟ ಎಸ್ಪಿ ಲೊಕೇಶ ಜಗಲಾಸರ್, ವಿಜಯಪುರ ಎಎಸ್ಪಿ ರಾಮ್ ಅರಸಿದ್ದಿ 5 ಡಿಎಸ್ಪಿ, 12 ಇನ್ಸಪೆಕ್ಟರ್, 30 ಪಿಎಸ್ಐ 250 ಇತರೆ ಸಿಬ್ಬಂದಿ, ಐಅರ್ಬಿ 4 ತುಕಡಿ, ಡಿಎಆರ್ 5 ತುಕಡಿ, ಕೆಎಸ್ಆರ್ಪಿ 4. ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ವಿಜಯಪುರ ಡಿಸಿ ಸುನಿಲಕುಮಾರ, ಬಾಗಲಕೋಟೆ ಡಿಸಿ ಕ್ಯಾಪ್ಟನ್ ರಾಜೇಂದ್ರ ಹಾಜರಿದ್ದಾರೆ.
ಶಾಸ್ತ್ರೀ ಸಾಗರಕ್ಕೆ ಅಲಂಕಾರ: ಬಾಗಿನದ ಹಿನ್ನೆಲೆಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರವನ್ನು ಹೂಗಳಿಂದ ಅಲಂಕಾರ ಮಾಡಲಾಗಿದೆ. ಡ್ಯಾಂ ಇನ್ನು ಕೆಲವೇ ನಿಮಿಷಗಳಲ್ಲಿ ವಿಶೆಷ ಹೆಲಿಕಾಪ್ಟರ್ ಮೂಲಕ ಮುಖ್ಯಮಂತ್ರಿ ಆಗಮಿಸಲಿದ್ದು, ಕೃಷ್ಣೆಯ ಗಂಗಾ ಪೂಜೆ, ಬಾಗಿನ ಅರ್ಪಣೆಗೆ ಕ್ಷಣ ಗಣನೆ ಆರಂಭಗೊಂಡಿದೆ.