Advertisement
ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂನಲ್ಲಿ ಆಯೋಜಿಸಿದ್ದ “ವಿಜ್ಞಾನ ಪ್ರದರ್ಶನ ಮತ್ತು ಸಮಾಗಮದಲ್ಲಿ ಮಾತನಾಡಿದ ಅವರು, ಈ ಮೆಗಾ ವಿಜ್ಞಾನ ಸಮಾಗಮ ಹಿಂದೆ ಮುಂಬೈ, ದೆಹಲಿ ನಗರಗಳಲ್ಲಿ ನಡೆದಿತ್ತು. ಸದ್ಯ ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಸೆಪ್ಟೆಂಬರ್ 28ರ ತನಕ ನಗರದಲ್ಲೇ ಈ ಪ್ರದರ್ಶನ ಮುಂದುವರಿಯುತ್ತದೆ. ನಂತರ ಈ ಸಮಾಗಮ ಕೊಲ್ಕತ್ತಾದಲ್ಲಿ ಮುಕ್ತಾಯವಾಗಲಿದೆ. ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡನೇ ಸರಣಿ ಪ್ರದರ್ಶನವಾಗಿರುವುದು ನಿಜಕ್ಕೂ ಸಂತೋಷ ತಂದಿದೆ. ಇದರ ಪ್ರಯೋಜನ ವಿಜ್ಞಾನ ಕ್ಷೇತ್ರದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಿಗಬೇಕಿದೆ ಎಂದರು.
Related Articles
-9 ಲಕ್ಷ ಜನ ಭಾಗವಹಿಸುವ ನಿರೀಕ್ಷೆ
-550 ಚದುರ ಅಡಿ ಜಾಗದಲ್ಲಿ ಪ್ರದರ್ಶನ
-150 ವಿಜ್ಞಾನಿಗಳು ಭಾಗಿ
-7 ವಿಜ್ಞಾನ ಯೋಜನೆಗಳ ಅನಾವರಣ
-30 ಮೀ.ದೂರದರ್ಶಕ ಸೇರಿ ಯೋಜನೆಗಳ ಮಾಹಿತಿ
Advertisement
ಹೊಸ ಯೋಜನೆಗಳು: 30 ಮೀಟರ್ ಟೆಲಿಸ್ಕೋಪ್(ಟಿಎಂಟಿ), ಇಂಟರ್‌ನ್ಯಾಷನಲ್ ಥರ್‌ವೊà ನ್ಯೂಕ್ಲಿಯರ್ ಎಕ್ಸಿಪರಿಮೆಂಟಲ್ ರಿಯಾಕ್ಟರ್(ಐಟಿಇಆರ್), ಲೈಗೊ, ಫೇರ್, ಇಂಡಿಯನ್ ಬೇಸ್ಡ್ ನ್ಯೂಟ್ರಿನೊ ಅಬ್‌ಸರ್ವವೆಟರಿ(ಐಎನ್‌ಒ), ಸ್ಕೇÌರ್ ಕಿಲೋಮೀಟರ್ ಅರ್ರೆ (ಎಸ್‌ಕೆಎ)
ಯೋಜನೆ ವಿಶೇಷತೆಗಳುಟಿಎಂಟಿ: ಸೌರ ಮಂಡಲ, ಗ್ರಹಗಳು ಹಾಗೂ ಗ್ಯಾಲಕ್ಸಿ ಸೇರಿ ಬಾಹ್ಯಾಕಾಶದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದು, ನೆಲದಿಂದಲೇ ಚಿತ್ರಗಳನ್ನು ತೆಗೆಯಲಿದೆ. ವಿಶ್ವದಲ್ಲೇ ಅತಿ ದೊಡ್ಡ ಟಿಎಂಟಿ ಯೋಜನೆ ಭಾರತದಲ್ಲಿ ರೂಪಿಸಲಾಗಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಜತೆಗೂಡಿ ಈ ಯೋಜನೆಯನ್ನು ಹೊರತಂದಿದ್ದಾರೆ. ಯೋಜನೆಗೆ 1.4 ಬಿಲಿಯನ್ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ ಈಗಾಗಲೇ 13 ಸಾವಿರ ಕೋಟಿ ರೂ.ಅನುದಾನ ನೀಡಿದೆ. ಐಎನ್‌ಒ: ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಎಲೆಕ್ಟ್ರಿನೋ ಮತ್ತು ನ್ಯೂಟ್ರಿನೊ ಬಗ್ಗೆ ಅಧ್ಯಯನ ಮಾಡಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ 1,500 ಕೋಟಿ ರೂ. ನೆರವು ನೀಡಿದೆ. ಲೈಗೊ: ಭಾರತ ಮತ್ತು ಅಮೆರಿಕಾ ವಿಜ್ಞಾನಿಗಳ ಸಹಯೋಗದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ವಿಶ್ವದಾದ್ಯಂತ ಭೂಮಿಯನ್ನು ತಲುಪುವ ಗುರುತ್ವದ ಅಲೆಗಳ ಬಗ್ಗೆ ಅಧ್ಯಯನ ಮಾಡಲಿದೆ ಆನ್ ಲೈನ್ ವೀಕ್ಷಣೆಗೆ ಅವಕಾಶ: ಈ ಮೆಗಾ ವಿಜ್ಞಾನ ಸಮಾಗಮದ ಪ್ರಮುಖ ಕಾರ್ಯಕ್ರಮಗಳನ್ನು ಆನ್ ಲೈನ್ ನಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದ್ದು, www.vigyansamagam.in ಎಂಬ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು. ಇದಲ್ಲದೆ ವಿಶ್ವೇಶ್ವರಯ್ಯ ಮ್ಯೂಸಿಯಂನ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಪೇಜ್‌ಗಳಲ್ಲೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ರಜೆ ದಿನಗಳಲ್ಲೂ ಪ್ರದರ್ಶನ: ಶನಿವಾರ, ಭಾನುವಾರಗಳು ಸೇರಿದಂತೆ ರಜೆ ದಿನಗಳಲ್ಲೂ ಈ ಸಮಾಗಮ ಪ್ರದರ್ಶನ ಮುಂದುವರಿಯಲಿದ್ದ, ಬೆಳಗ್ಗೆ 10 ರಿಂದ ಸಂಜೆ 6ರ ತನಕ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.