ಚಿಕ್ಕೋಡಿ: ಗಳತಗಾ ಹಾಗೂ ಬೋರಗಾಂವ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಪರಿಗಣಿಸಿ ಬೋರಗಾಂವ ಹಾಗೂ ಗಳಗತಾ ಕಾಲೇಜಿಗೆ ಹೆಚ್ಚುವರಿ ತರಬೇತಿ ಕೊಠಡಿಗಳು ಹಾಗೂ ಶೌಚಾಲಯ ನಿರ್ಮಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅನುದಾನ ಮಂಜೂರಾಗಿದೆ. ಗಳಗತಾ ಕಾಲೇಜಿಗೆ 1ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಶುಕ್ರವಾರ ಗಳಗತಾ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೆಚ್ಚುವರಿ ತರಬೇತಿ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ರೈತರ ಮಕ್ಕಳಿಗೆ ಶಿಕ್ಷಣದ ಲಾಭ ಸಿಗಲೆಂದು ಪ್ರಯತ್ನಿಸಲಾಗುತ್ತಿದೆ. ಗಳಗತಾ ಗ್ರಾಮದ ಕಾಲೇಜಿನಲ್ಲಿ ಗಳಗತಾ, ಬೇಡಕಿಹಾಳ, ನೇಜ, ಭಿಮಾಪುವಾಡಿ ಸೇರಿದಂತೆ ಬೇರೆ ಬೇರೆ ಭಾಗಗಳಿಂದ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ತರಬೇತಿ ಕೋಠಡಿಗಳ ತೊಂದರೆ ಇತ್ತು. ಸರಿಯಾಗಿ ಶೌಚಾಲಯಗಳು ಇರಲಿಲ್ಲ. ಸಮಸ್ಯೆಗೆ ಸ್ಪಂದಿ ಸಿ 4 ಕ್ಲಾಸ ರೂಂ, 2 ಶೌಚಾಲಗಳನ್ನು ನಿರ್ಮಿಸಲು 1 ಕೋಟಿ ಅನುದಾನ ಮಂಜೂರಾಗಿದೆ. ಈ ಹಿಂದೆ ಕೂಡ 2 ಕೊಠಡಿ ನಿರ್ಮಿಸಲು 55 ಲಕ್ಷ ಅನುದಾನ ಮಂಜೂರು ಮಾಡಲಾಗಿತ್ತು. ಈ ಕಾಮಗಾರಿ ಮುಕ್ತಾಯಗೊಂಡಿದ್ದು, ಹೊಸ ಕಾಮಗಾರಿ ಪ್ರಾರಂಭವಾಗಿದೆ ಎಂದರು.
ನಿಪ್ಪಾಣಿ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಶೀಘ್ರವೇ ಭರಿಸಲಾಗುವದು. ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಕರ ಸಮಸ್ಯೆಗಳಿಗೆ ಕೂಡ ಸ್ಪಂದಿ ಸಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇದನ್ನೂ ಓದಿ:ಕೋವ್ಯಾಕ್ಸಿನ್ ನಿಂದ ಅಡ್ಡಪರಿಣಾಮ ಸಂಭವಿಸಿದರೆ ಪರಿಹಾರ ಕೊಡುತ್ತೇವೆ; ಭಾರತ್ ಬಯೋಟೆಕ್
ಇಲಾಖೆ ಉಪನಿರ್ದೇಶಕ ಎಂ.ಎಂ. ಕಾಂಬಳೆ,ಲೋಕೋಪಯೋಗಿ ಇಲಾಖೆ ಅಭಿಯಂತ ಬಿ.ಬಿ.ಬೇಡಕಿಹಾಳೆ, ಶಿವಾನಂದ ಖೋತ, ಲಕ್ಷ್ಮಣ ಶಿಪ್ಪುರೆ, ಭರತ ನಸಲಾಪುರೆ, ಬಾಬಾಸಾಬ ಜಾಧವ, ಮಿಥುನ ಪಾಟೀಲ, ರಾಹುಲ ವಕಪೋತೆ, ಶಿವಾನಂದ ಗಿಂಡೆ, ವಿಜಯ ಸಂಗಪ್ಪಗೋಳ, ರಾವಸಾಬ ಪಾಟೀಲ, ಅಲಗೋಂಡಾ ಪಾಟೀಲ, ರಾಜು ವಿಭೂತೆ, ಅನ್ನಪೂರ್ಣ ಐಹೊಳೆ, ಇರಗೊಂಡಾ ಪಾಟೀಲ, ಪ್ರಮಿಳಾ ಪಾಟೀಲ, ಅಮರನಾಥ ಸದಲಗೆ ಸೇರಿದಂತೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಜರಿದ್ದರು. ಆರ.ಜಿ. ಸಾವೋಜಿ ಸ್ವಾಗತಿಸಿದರು. ಪ್ರಾಂಶುಪಾಲ ಎಂ.ಬಿ.ಜಾಧವ ವಂದಿಸಿದರು