Advertisement

ತಿಂಗಳಲ್ಲಿ ವಾರ್ಡ್‌ ಸಮಿತಿ ರಚಿಸಲು ಹೈ ತಾಕೀತು

12:32 PM Apr 25, 2017 | |

ಬೆಂಗಳೂರು: ಮುಂದಿನ ಒಂದು ತಿಂಗಳಲ್ಲಿ ವಾರ್ಡ್‌ ಕಮಿಟಿ ರಚಿಸಿ ವರದಿ ನೀಡುವಂತೆ ಬಿಬಿಂಎಪಿಗೆ ಹೈಕೋರ್ಟ್‌ ತಾಕೀತು ಮಾಡಿದೆ. ವಾರ್ಡ್‌ ಕಮಿಟಿ ರಚನೆ ವಿಳಂಬ ಹಾಗೂ ಗುತ್ತಿಗೆ ಪೌರಕಾರ್ಮಿಕರ ಬೇಡಿಕೆಗಳ ಕುರಿತು ಸಲ್ಲಿಕೆಯಾಗಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಅಶೋಕ್‌ ಬಿ. ಹಿಂಚಿಗೇರಿ

Advertisement

ಹಾಗೂ ನ್ಯಾ. ಕೆ.ಎಸ್‌ ಮುದ್ಗಲ್‌ ಅವರಿದ್ದ ವಿಭಾಗೀಯ ಪೀಠ, ವಿಚಾರಣೆಗೆ ಹಾಜರಾಗಿದ್ದ ಬಿಬಿಎಂಪಿ ವಾರ್ಡ್‌ ಕಮಿಟಿ ರಚನೆ ವಿಶೇಷ ಆಯುಕ್ತ ಸಫ‌ìರಾಜ್‌ ಖಾನ್‌ ಅವರಿಗೆ, ಮುಂದಿನ ಒಂದು ತಿಂಗಳಲ್ಲಿ ಕಡ್ಡಾಯವಾಗಿ ವಾರ್ಡ್‌ ಕಮಿಟಿ ರಚಿಸಬೇಕು ಎಂದು ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘದ ಪರ ವಕೀಲರು, ಬಿಬಿಎಂಪಿ ಪೌರಕಾರ್ಮಿಕರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸದೇ ಬೇಕಾಬಿಟ್ಟಿ ನಡೆಸಿಕೊಳ್ಳುತ್ತಿದೆ. ಹೀಗಾಗಿ ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಬಗ್ಗೆ ನಿಯಮಾವಳಿಯೊಂದನ್ನು ರೂಪಿಸುವಂತೆ ನಿರ್ದೇಶಿಸಬೇಕು ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಪೌರಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳಬೇಕು, ಕನಿಷ್ಟ ಅವರು ಕೆಲಸ ಮಾಡುವಾಗ ಕೈಗವಸು, ಶೂ ಮತ್ತಿತರ ಪರಿಕರಗಳನ್ನು ನೀಡಿ  ಅವರ  ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿತು.

ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌
ಬೆಂಗಳೂರು: ರಾಜಾಜಿನಗರದ 16ನೇ ಕ್ರಾಸ್‌ನಲ್ಲಿರುವ ಸಾರ್ವಜನಿಕ ಉದ್ಯಾನವನದ ಸಮೀಪದ ಜಾಗವನ್ನು ಡಂಪಿಂಗ್‌ ಯಾರ್ಡ್‌ ಮಾಡಿರುವ ಬಿಬಿಎಂಪಿ ಕ್ರಮ ಪ್ರಶ್ನಿಸಿ ಸ್ಥಳೀಯರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಈ ಕುರಿತು ಸ್ಥಳೀಯ ನಿವಾಸಿ ಸೀತಾರಾಮ ಶೆಟ್ಟಿ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾ. ಪಿ.ಎಸ್‌ ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ, ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿದೆ. ರಾಜಾಜಿ ನಗರ 5ನೇ ಬ್ಲಾಕ್‌, 16ನೇ ಕ್ರಾಸ್‌ನಲ್ಲಿರುವ ಉದ್ಯಾನವನ ಪಕ್ಕದ ಜಾಗವನ್ನು ಪಾಲಿಕೆ ಕಸ ವಿಲೇವಾರಿ ಸ್ಥಳವಾಗಿಸಿದೆ. ಕಸದಿಂದ ದುರ್ವಾಸನೆ ಬರುತ್ತಿದ್ದು, ಉದ್ಯಾನಕ್ಕೆ ಬರುವ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. 

ಅಲ್ಲದೆ ಸ್ಥಳೀಯರು ಹಾಗೂ ಸಮೀಪದ ನ್ಯಾಶನಲ್‌ ಪಬ್ಲಿಕ್‌ ಶಾಲೆಯ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕಸ ಸುರಿಯುವ ಸ್ಥಳ ಬದಲಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪಾಲಿಕೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ದೂರಿರುವ ಅರ್ಜಿದಾರರು, ಉದ್ಯಾನದ ಬಳಿ ಕಸ ಸುರಿಯುವುದನ್ನು ಕೂಡಲೇ ನಿಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next