ಡ್ರಮ್ ಸ್ಟಿಕ್ ಎಂದು ಇಂಗ್ಲಿಷ್ ನಲ್ಲಿ ಕರೆಯಲ್ಪಡುವ ನುಗ್ಗೆ ಕಾಯಿ ಬಳಕೆ ದಕ್ಷಿಣ ಭಾರತದ ಅಡುಗೆ ಶೈಲಿಯಲ್ಲಿ ಸಾಮಾನ್ಯ. ಹೆಚ್ಚು ಪೌಷ್ಟಿಕತೆಯನ್ನು ಹೊಂದಿರುವ ತರಕಾ ರಿಗಳಲ್ಲಿ ನುಗ್ಗೆಕಾಯಿಗೆ ಪ್ರಮುಖ ಸ್ಥಾನವಿದೆ. ನುಗ್ಗೆ ಕಾಯಿ ಮರದ ಸೊಪ್ಪು, ಹೂವು, ಬೀಜಗಳು ಅಡುಗೆಯಲ್ಲಿ ಮಾತ್ರ ವಲ್ಲ ರಕ್ತ, ದೃಷ್ಟಿ, ಮೂಳೆ, ಚರ್ಮ , ಹೃದಯ ಸಂಬಂಧಿ ಮತ್ತು ಇನ್ನೂ ಹಲವಾರು ಕಾಯಿಲೆಗಳಿಗೆ ಔಷಧ ವಾ ಗಿಯೂ ಬಳಕೆಯಲ್ಲಿದೆ.
ಹೆಚ್ಚು ಪೋಷಕಾಂಶ ಭರಿತವಾದ ನುಗ್ಗೆ, ನುಗ್ಗೆ ಸೊಪ್ಪು ಎಲ್ಲ ಕಾಲದಲ್ಲಿಯೂ ನಿರಂತರವಾಗಿ ದೊರೆಯುತ್ತದೆ. ಮನೆಯ ಹಿತ್ತಲಲ್ಲಿ ಹೆಚ್ಚಿನ ಯಾವುದೇ
ಆರೈಕೆ ಇಲ್ಲದೆ ಸುಲಭವಾಗಿ ಬೆಳೆಸಬಹುದು. ಹೆಚ್ಚು ನೀರೂ ಬೇಕಾಗಿಲ್ಲ. ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಜೂನ್, ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿ ದರೆ ಉತ್ತಮ.
ಇದರಲ್ಲಿ ಧನರಾಜ, ಪಿ.ಕೆ. ಎಂ1,2, ಭಾಗ್ಯ (ಕೆ.ಡಿ. ಎಂ.01) ತಳಿಗಳಿವೆ. 6×6, 8×6, 8×8 ಅಥವಾ 10×8 ಅಡಿ ಅಂತ ರದಲ್ಲಿ 10×8 ಅಥವಾ ಒಂದೂವರೆ ಅಡಿ ಗುಂಡಿ ತೆಗೆದು ಮೇಲ್ಮಣ್ಣು ಹಾಗೂ ಹಟ್ಟಿ ಗೊಬ್ಬರ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಒಂದು ಸಸಿ ಅಥವಾ ಎರಡು ಬೀಜಗಳನ್ನು ನೆಡಬೇಕು. ಆರಂಭದಲ್ಲಿ ಕಂಬಳಿ ಹುಳುಗಳ ಬಾಧೆ ಇರು ವುದರಿಂದ ಸೂಕ್ತ ಸಂರಕ್ಷಣೆ ಅಗತ್ಯ.
ಸಸಿ ಬೆಳೆಯುವಾಗ ಗಾಳಿಯ ರಭಸಕ್ಕೆ ಬೀಳದಂತೆ ಕೋಲುಗಳನ್ನು ಕಟ್ಟಬೇಕು. ವರ್ಷದಲ್ಲಿ ಮೂರು ಬಾರಿ ಸಾವಯವ ಗೊಬ್ಬರ ಬಳಸಿದರೆ ಉತ್ತಮ
ಫಸಲು ಕೈ ಸೇರುತ್ತದೆ. ಸಸಿ, ಬಿತ್ತನೆ ಬೀಜವನ್ನು ಪಾಟ್ ನಲ್ಲಿ ಹಾಕಿಯೂ ಬೆಳೆಸಬಹುದು. ಸ್ವಲ್ಪ ಬೆಳೆದ ಮೇಲೆ ಸ್ಥಳ ವಿರುವಲ್ಲಿ ನೆಟ್ಟು ಆರೈಕೆ ಮಾಡಬಹುದು.
ಆದರೆ ಸ್ಥಳಾಂತರಿಸುವಾಗ ಸ್ವಲ್ಪ ಮುಂಜಾಗ್ರತೆ ವಹಿಸುವುದು ಅಗತ್ಯ. ನುಗ್ಗೆಯನ್ನು ಟೊಮೆಟೋ, ಬದನೆ, ಬೆಂಡೆ, ಕ್ಯಾರೆಟ್, ಎಲೆ ಕೋಸು, ಮೂಲಂಗಿ, ಸೌತೆ ಯೊಂದಿಗೆ ಅಂತರ ಬೆಳೆಯಾಗಿ ಬೆಳೆಸಬಹುದು. ನುಗ್ಗೆ ಬೆಳೆಯನ್ನು ಹೇನು, ಕಪ್ಪು, ಬೂದು ಕಂಬಳಿ ಹುಳು, ಕಾಯಿ ನೊಣ, ಬೇರು ಹುಳು, ಕಾಂಡ ಕೊರಕ ಹೆಚ್ಚಾಗಿ ಕಾಡುತ್ತದೆ.
ಹೀಗಾಗಿ ಮುನ್ನೆಚ್ಚರಿಕೆ ಅಗತ್ಯ. ನುಗ್ಗೆ ನಾಟಿ ಮಾಡಿದ 6- 8 ತಿಂಗಳಲ್ಲಿ ಕಾಯಿ ಕಟಾವಿಗೆ ಬರುವುದು. ಕಾಯಿಗಳು ಪೂರ್ಣವಾಗಿ ಬೆಳೆದು ಗೆರೆಗಳಿಂದ ತುಂಬಿಕೊಂಡಾಗ ಗಾಢ ಹಸುರು ಬಣ್ಣವಿರುವಾಗ ಕಟಾವು ಮಾಡಬಹುದು. ಪ್ರತಿ ಗಿಡಕ್ಕೆ 300 ರಿಂದ 500 ಕಾಯಿಗಳಷ್ಟು ಇಳುವರಿಯನ್ನು
ಪಡೆಯಬಹುದು. ಕೊಯ್ಲಿನ ಅನಂತರ ಕಾಯಿಗಳನ್ನು ಶೇ. 8-10ರಷ್ಟು ರಂಧ್ರವಿರುವ ಪಾಲಿಥಿನ್ ಚೀಲಗಳಲ್ಲಿ ಸುಮಾರು 10-12 ದಿನಗಳವರೆಗೆ ಸಂಗ್ರ
ಹಿಸಿಡಬಹುದು.