Advertisement
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ಗಳ ನಿರ್ಗಮನ ಪಥ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೇರೆ ಇಲಾಖೆಗಳ ಸಿಬ್ಬಂದಿಗೆ ದೊರಕುವ ವೇತನ-ಸೌಲಭ್ಯಗಳು ಪೊಲೀಸರಿಗಿಲ್ಲ. ಈ ಹಿನ್ನೆಲೆಯಲ್ಲಿ ಔರಾದಕರ ಸಮಿತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡುವ ಮೂಲಕ ಪೊಲೀಸರಿಗೆ ಸಮಾನ ವೇತನ-ಸೌಲಭ್ಯ ನೀಡಲು ಬದ್ಧವಾಗಿದೆ. ಈ ಕುರಿತು ಮುಖ್ಯಮಂತ್ರಿಗಳೂ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
Related Articles
Advertisement
ಧಾರವಾಡ: ಲಿಂಗಾಯತ ಧರ್ಮ ನನ್ನ ಅಸ್ಮಿತೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ಮಂಗಳವಾರ ಅವರು ಮುರುಘಾಮಠಕ್ಕೆ ಭೇಟಿ ನೀಡಿದರು. ಅವರನ್ನು ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸತ್ಕರಿಸಿದರು. ಈ ವೇಳೆ ಜತೆಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರೊಂದಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕುರಿತಂತೆ ಕೆಲ ಹೊತ್ತು ಸಚಿವರು ಚರ್ಚಿಸಿದರು. ಇದಾದ ಬಳಿಕ ಶ್ರೀಮಠದಲ್ಲೇ ಮಧ್ಯಾಹ್ನ ಭೋಜನ ಸವಿದರು. ಈ ವೇಳೆ ಮಾತನಾಡಿದ ಸಚಿವರು, ಲಿಂಗಾಯತ ಧರ್ಮದ ವಿಚಾರ, ಹೋರಾಟ ಜೀವಂತವಾಗಿದೆ. ಈ ಹೋರಾಟ ಈಗ ಕಾನೂನಾತ್ಮಕವಾಗಿ ಮುಂದುವರಿಯುತ್ತದೆ. ಾಜ್ಯದ ಗೃಹ ಸಚಿವನಾಗಿ ನಾನು ಈ ಹೋರಾಟದಲ್ಲಿ ಭಾಗಿಯಾಗಲ್ಲ. ಆದರೆ ಲಿಂಗಾಯತ ಧರ್ಮ ನನ್ನ ಅಸ್ಮಿತೆ ಆಗಿದೆ ಎಂದರು.
ಶೀಘ್ರವೇ ಕಂಪ್ಲಿ ಶಾಸಕ ಗಣೇಶ ಬಂಧನ
ಹುಬ್ಬಳ್ಳಿ: ಶಾಸಕರಾದ ಗಣೇಶ ಹಾಗೂ ಆನಂದ್ ಸಿಂಗ್ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಗಣೇಶ ಬಂಧನಕ್ಕೆ ವ್ಯಾಪಕ ಪ್ರಯತ್ನ ನಡೆಸಲಾಗುತ್ತಿದೆ. ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಗಣೇಶ ಅವರು ಆನಂದ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅವರ ಮೇಲೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿದ್ದಾರೆ. ಅವರ ಬಂಧನಕ್ಕೆ ಪೊಲೀಸ್ ಹಾಗೂ ಗೃಹ ಇಲಾಖೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾನೂನಿಗಿಂತ ದೊಡ್ಡವರ್ಯಾರು ಇಲ್ಲ. ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದರು. ಬಿಜೆಪಿಗೆ ಹೋಗಲ್ಲ: ಯಾವ ಶಾಸಕರೂ ರಾಜೀನಾಮೆ ಕೊಟ್ಟು ಬಿಜೆಪಿ ಸೇರಲ್ಲ. ರಮೇಶ ಜಾರಕಿಹೊಳಿ, ನಾಗೇಂದ್ರ, ಉಮೇಶ ಜಾಧವ ಸೇರಿ ಎಲ್ಲರೂ ನಮ್ಮ ಜತೆ ಇದ್ದಾರೆ. ಬಿಜೆಪಿಯವರು ಅಧಿಕಾರ ಪಡೆಯುತ್ತೇವೆಂದು ಹಗಲು ಕನಸು ಕಾಣುತ್ತಿದ್ದಾರೆ. ಅದ್ಯಾವುದೂ ಈಡೇರಲ್ಲ ಎಂದರು.