Advertisement

15ರಿಂದ ಆರೆಸ್ಸೆಸ್‌ನ ಉನ್ನತ ಮಟ್ಟದ ಸಭೆ

11:11 PM Mar 10, 2020 | Team Udayavani |

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ರೂಪಿಸುವ ಮಹತ್ವದ ವಾರ್ಷಿಕ ಅಧಿವೇಶನವಾದ ಅಖೀಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್‌) ಮಾರ್ಚ್‌ 15, 16, 17ರಂದು ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ ಈವರೆಗೆ ಆರು ಎಬಿಪಿಎಸ್‌ ಜರುಗಿದ್ದು, ಈ ಸಭೆ ಏಳನೇಯದ್ದಾಗಿದೆ.

Advertisement

ಆರೆಸ್ಸೆಸ್‌ನ ಸರಸಂಘಚಾಲಕರಾದ ಡಾ. ಮೋಹನ್‌ ಭಾಗವತ್‌ ಮತ್ತು ಸರಕಾರ್ಯವಾಹರಾದ ಸುರೇಶ್‌ (ಭಯ್ನಾಜೀ) ಜೋಷಿಯವರು ಸಭೆಯ ಕಲಾಪಗಳನ್ನು ನಡೆಸುತ್ತಾರೆ. ಅಧಿವೇಶನದಲ್ಲಿ ಆರೆಸ್ಸೆಸ್‌ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ 35ಕ್ಕೂ ಹೆಚ್ಚು ಸಂಘಟನೆಗಳ 1,400 ಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ಆರೆಸ್ಸೆಸ್‌ ಪ್ರಕಟಣೆ ತಿಳಿಸಿದೆ. ಆರೆಸ್ಸೆಸ್‌ ಹಾಗೂ ವಿವಿಧ ಸಂಘಟನೆಗಳ ವಾರ್ಷಿಕ ವರದಿ, ಸಂಘಟನೆಯ ವಿಸ್ತಾರ, ಹೊಸ ಆಯಾಮಗಳು, ಕಾರ್ಯಕ್ರಮಗಳು, ಮುಂಬರುವ ವರ್ಷದ ಯೋಜನೆ ಇತ್ಯಾದಿ ವಿಷಯಗಳು ಈ ಸಭೆಯಲ್ಲಿ ಚರ್ಚೆಯಾಗಲಿವೆ.

ಜತೆಗೆ, ಈ ಸಭೆಯಲ್ಲಿ ರಾಷ್ಟ್ರೀಯ ಮಹತ್ವವುಳ್ಳ ಕೆಲವು ವಿಷಯಗಳ ಕುರಿತಾಗಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್‌ ಶಾ ಸಹಿತವಾಗಿ ಬಿಜೆಪಿಯ ರಾಷ್ಟ್ರೀಯ ಪ್ರಮುಖರಲ್ಲಿ ಕೆಲವರು, ವಿಶ್ವ ಹಿಂದೂಪರಿಷತ್‌, ವನವಾಸಿ ಕಲ್ಯಾಣ, ಸೇವಾ ಭಾರತಿ, ವಿದ್ಯಾಭಾರತಿ ಹೀಗೆ ಆರೆಸ್ಸೆಸ್‌ನ ಪರಿವಾರ ಸಂಘಟನೆಗಳ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರಮುಖರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next