Advertisement
ಕಿಡ್ನಿ ಕಸಿ ಮಾಡಿಸಲು ತನಗೆ ಅನುಮತಿ ನೀಡಲು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಹಾಗೂ ಮಾನವ ಅಂಗಾಂಗ ಕಸಿ ಅನುಮತಿಗೆ ಅಧಿಕಾರಯುತ ಸಮಿತಿ ಮುಖ್ಯಸ್ಥರಿಗೆ ನಿರ್ದೇಶಿಸಬೇಕು.
Related Articles
Advertisement
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕ್ನಿಡಿ ಕಸಿ ಮಾಡಿಸಲು ಅನುಮತಿ ಕೋರಿ ಸಮಿತಿಗೆ ಅರ್ಜಿದಾರರು ಮನವಿ ಸಲ್ಲಿಸಬೇಕು. ಅದನ್ನು ಸಮಿತಿ ಕೂಡಲೇ ಪರಿಗಣಿಸಬೇಕು ಎಂದು ಸೂಚಿಸಿತು. ಅಲ್ಲದೇ ನೀವು ಒಬ್ಬ ವ್ಯಕ್ತಿಯ ಜೀವ ಕಾಪಾಡಬೇಕಿದೆ ಎಂದು ಸಮಿತಿ ಪರ ಹಾಜರಿದ್ದ ಸರ್ಕಾರಿ ವಕೀಲರಿಗೆ ಸಲಹೆ ನೀಡಿತು.
ಪ್ರಕರಣವೇನು?: ಮಹಮ್ಮದ್ ಝೈದ್‌ಗೆ 2012ರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು. 2013ರಲ್ಲಿ ಆತನಿಗೆ ತಾಯಿಯೇ ಕಿಡ್ನಿ ದಾನ ಮಾಡಿದ್ದರು. ಆದರೆ, 2016ರಲ್ಲಿ ಮತ್ತೆ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತ್ತು. ತೀವ್ರ ಶೋಧದ ನಂತರ ಸಂಬಂಧಿ ಮನ್ಸೂರ್ ಕಿಡ್ನಿ ದಾನ ಮಾಡಲು ಮುಂದೆ ಬಂದಿದ್ದರು.
ಆದರೆ, ಮನ್ಸೂರ್ ತಮಗೆ ಹತ್ತಿರದ ಸಂಬಂಧಿಯಲ್ಲ ಎಂಬ ಕಾರಣ ಮುಂದಿಟ್ಟು ಕಿಡ್ನಿ ಕಸಿ ಮಾಡಲು ಪ್ರತಿವಾದಿ ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ. ಆದ್ದರಿಂದ ಕಿಡ್ನಿ ಕಸಿ ಮಾಡಿಸುವುದಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರಕ್ಕೆ ಮತ್ತು ಕಿಡ್ನಿ ಕಸಿ ಮಾಡುವಂತೆ ಪ್ರತಿವಾದಿ ಆಸ್ಪತ್ರೆಗಳಿಗೆ ನಿರ್ದೇಶಿಸುವಂತೆ ಟಿಕ್ಕಿ ಝೈದ್ ಅರ್ಜಿಯಲ್ಲಿ ಕೋರಿದ್ದಾರೆ.