Advertisement

High Court; ಗೃಹಸ್ಥರ ಲಿವ್‌ ಇನ್‌ ಸಂಬಂಧ ಸರಿಯಲ್ಲ

12:28 AM Jul 28, 2024 | Team Udayavani |

ಚಂಡೀಗಢ: ವಿವಾಹಿತರು ಬೇರೊಬ್ಬರ ಜತೆ ಲಿವ್‌ ಇನ್‌ನಲ್ಲಿ ಇರುವುದನ್ನು ಪ್ರೋತ್ಸಾಹಿಸುವುದು ತಪ್ಪು ಮತ್ತು ಇದು ದ್ವಿಪತ್ನಿತ್ವಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಪಂಜಾಬ್‌-ಹರಿಯಾಣ ಹೈಕೋರ್ಟ್‌ ಅಭಿ ಪ್ರಾಯಪಟ್ಟಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಸಂದೀಪ್‌ ಮೌದ್ಗಿ ಲ್‌ ಅವರಿದ್ದ ಪೀಠ, ಮದುವೆಯಾಗುವುದಕ್ಕಾಗಿ ಮನೆ ಬಿಟ್ಟು ಬರುವುದು, ಪೋಷಕರು ಗೌರವದಿಂದ ಬದುಕುವ ಹಕ್ಕನ್ನು ಕಸಿದುಕೊಂಡಂತೆ ಎಂದಿದೆ. 40 ಹಾಗೂ 44 ವರ್ಷದ ಇಬ್ಬರು ವ್ಯಕ್ತಿಗಳ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್‌ ಹೀಗೆ ಹೇಳಿದೆ. ಈ ಇಬ್ಬರೂ ವಿವಾಹಿತರಾಗಿದ್ದರೂ, ಮತ್ತೂಂದು ಲಿವ್‌ ಇನ್‌ ಸಂಬಂಧದಲ್ಲಿದ್ದರು. ಹೀಗಾಗಿ ಕುಟುಂಬದವರಿಂದ ರಕ್ಷಣೆಯನ್ನು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next