ಬೆಂಗಳೂರು: ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಹೈಕೋರ್ಟ್ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗಿದೆ. ನ್ಯಾಯಾಲಯದ ಕಲಾಪಗಳು ಸಾಮಾನ್ಯ ಜನರಿಗೂ ತಲುಪಬೇಕು ಎಂಬ ಸುಪ್ರೀಂಕೋರ್ಟ್ ಆಶಯದ ಮೇರೆಗೆ ಹೈಕೋರ್ಟ್ ಈ ಕ್ರಮ ಕೈಗೊಂಡಿದೆ.
ಅದರಂತೆ, ಮುಖ್ಯ ನ್ಯಾಯಮೂರ್ತಿಗಳು ಕಲಾಪ ನಡೆ ಸುವ ಹೈಕೋರ್ಟ್‌ನ ಕೋರ್ಟ್ ಹಾಲ್-1ರಲ್ಲಿ ನಡೆದ ಪ್ರಕರ ಣವೊಂದರ ವಿಚಾರಣೆಯನ್ನು ಸೋಮವಾರ ಪ್ರಾಯೋಗಿಕ ವಾಗಿ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.
ನ್ಯಾಯಾಲಯದ ಕಲಾಪಗಳು ಸಾರ್ವಜನಿಕ ವೀಕ್ಷಣೆಗೂ ಲಭ್ಯವಾಗಬೇಕು ಎಂಬಬೇಡಿಕೆ ಸಾಕಷ್ಟುಕಾಲದಿಂದಲೂ ಇದ್ದು, ಈ ಬೇಡಿಕೆಯನ್ನು ಜಾರಿಗೊಳಿಸಲು ಸ್ವತಃ ಸುಪ್ರೀಂಕೋರ್ಟ್ ಇಚ್ಛಿಸಿತ್ತು. ಅದರಂತೆ, ಇ-ಕೋರ್ಟ್ ಕಲಾಪಗಳ ಕುರಿತು ಸುಪ್ರೀಂ ಕೋರ್ಟ್ ಕೆಲದಿನಗಳಹಿಂದಷ್ಟೇ ಮಾರ್ಗಸೂಚಿ ಹೊರಡಿಸಿತ್ತು.
ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಸುಮಾರು ಒಂದು ಗಂಟೆ ಮುಖ್ಯ ನ್ಯಾ.ಎ.ಎಸ್. ಓಕಾಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠನ‚ಡೆಸಿದಬೈತಕೂಲ್‌ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಹಾಗೂ ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಯೂಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಗಿದೆ. ಈಗಾಗಲೇ ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಾಯೋಗಿಕವಾಗಿ ಕಲಾಪದ ನೇರ ಪ್ರಸಾರ ಮಾಡಲಾಗಿದೆ. ಇದೀಗ ಕರ್ನಾಟಕ ಹೈಕೋರ್ಟ್‌ನಿಂದ ನೇರ ಪ್ರಸಾರ ಮಾಡುವ ಮಹತ್ವದ ಕ್ರಮವನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ 2020ರ ಏಪ್ರಿಲ್ ನಿಂದ ಹೈಕೋರ್ಟ್‌ನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಲಾಪ ನಡೆಯುತ್ತಿರುವುದು ಗಮನಾರ್ಹ