Advertisement

ವಿದ್ಯುತ್‌ ಉತ್ಪಾದಕ ಕಂಪನಿಗಳಿಗೆ ಸಕಾಲದಲ್ಲಿ ಹಣ ಪಾವತಿಸಿ: ಹೈ-ಕೋರ್ಟ್‌ ಸೂಚನೆ

10:31 AM Dec 13, 2021 | Team Udayavani |

 ಬೆಂಗಳೂರು: ರಾಜ್ಯ ಸರ್ಕಾರ ಸ್ವಾಮ್ಯದ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂಗಳು) ವಿದ್ಯುತ್‌ ಉತ್ಪಾದಕ ಕಂಪನಿಗಳ ಸದ್ಯದ ಬಾಕಿಯನ್ನು ಶೀಘ್ರ ಪಾವತಿಸಬೇಕು ಎಂದು ಆದೇಶಿಸಿರುವ ಹೈಕೋರ್ಟ್‌, ಇನ್ನು ಮುಂದೆ ಉತ್ಪಾದಕ ಕಂಪನಿಗಳಿಗೆ ಎಸ್ಕಾಂಗಳ ನಿಯಮಿತವಾಗಿ ಮತ್ತ ಸಕಾಲದಲ್ಲಿ ಹಣ ಪಾವತಿಸಬೇಕು ಎಂದು ಸೂಚಿಸಿದೆ.

Advertisement

ಹೆಸ್ಕಾಂ ಮತ್ತು ಜೆಸ್ಕಾಂ ಕಂಪನಿಗಳು ಸುಮಾರು 250 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿವೆ ಎಂದು ರಿನೀವ್‌ ಪವರ್‌ ಲಿಮಿಟೆಡ್‌ ಮತ್ತು ಇತರೆ ಖಾಸಗಿ ಕಂಪನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ಏಸಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಎಲ್ಲ ಎಸ್ಕಾಂಗಳು ತಮ್ಮ ಬಾಧ್ಯತೆಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ಸಕಾಲದಲ್ಲಿ ಬಾಕಿ ಪಾವತಿಸದಿರುವುದು ಸರಿಯಲ್ಲ .

ಇನ್ನು ಮುಂದೆ ವಿದ್ಯುತ್‌ ಖರೀದಿ ಒಪ್ಪಂದ (ಪಿಪಿಎ) ಪ್ರಕಾರ ಪ್ರತಿ ತಿಂಗಳು ಎಸ್ಕಾಂಗಳು ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ಖರೀದಿ ಮಾಡಿರುವ ವಿದ್ಯುತ್‌ನ ಬಿಲ್‌ ಪಾವತಿಸಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ;- ರಸ್ಸೆಲ್ ವೈಫರ್ – ಹಾವಿನ ಮರಿಗಳ ರಕ್ಷಣೆ

ವಿದ್ಯುತ್‌ ಸರಬರಾಜು ಕಂಪನಿಗಳು ಪಿಪಿಎ ಅನ್ವಯ ತಮ್ಮ ಕರ್ತವ್ಯ, ಹಕ್ಕು ಮತ್ತು ಬಾಧ್ಯತೆಗಳನ್ನು ನಿರ್ವಹಿಸಬೇಕು ಎಂದು ಹೇಳಿರುವ ನ್ಯಾಯಪೀಠ, ಹುಬ್ಬಳ್ಳಿ ವಿದ್ಯುತ್‌ ಪೂರೈಕೆ ಕಂಪನಿ ನಿಯಮತಿ (ಹೆಸ್ಕಾಂ) ಮತ್ತು ಗುಲ್ಬರ್ಗಾ ವಿದ್ಯುತ್‌ ಪೂರೈಕೆ ಕಂಪನಿ (ಜೆಸ್ಕಾಂ) ಪವನ ಮತ್ತು ಸೌರಶಕ್ತಿ ಖರೀದಿಸಿ ಅದಕ್ಕೆ ಸಕಾಲದಲ್ಲಿ ಹಣ ಪಾವತಿ ಮಾಡುವಲ್ಲಿ ನಿರಂತರವಾಗಿ ವಿಫಲವಾಗಿದೆ ಎಂದು ಹೇಳಿದೆ.

Advertisement

ಕೇಂದ್ರ ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯ ಏಪ್ರಿಲ್‌ 2020ರಲ್ಲಿ ಎಲ್ಲ ಎಸ್ಕಾಂಗಳು ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ಉಳಿಸಿಕೊಂಡಿರುವ ಬಾಕಿ ಹಣವನ್ನು ಪಾವತಿಸುವಂತೆ ಸೂಚಿಸಿದ್ದರೂ ಸಹ ಜೆಸ್ಕಾಂ ಮತ್ತು ಹೆಸ್ಕಾಂ ಪಾವತಿ ಮಾಡಿಲ್ಲ ಎಂದು ಅರ್ಜಿದಾರ ಕಂಪನಿಗಳು ವಾದಿಸಿದ್ದವು.

ಆದರೆ, ಪಿಪಿಎ ಒಪಂದದನ್ವಯ ಹಣ ಪಾವತಿಸದಿರುವುದರ ವಿರುದ್ಧ ಮೊದಲು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬೇಕಿತ್ತು. ಆದರೆ ಕಂಪನಿಗಳು ಏಕಾಏಕಿ ಕೋರ್ಟ್‌ ಮೆಟ್ಟಿಲೇರಿರುವುದು ಸರಿಯಲ್ಲ ಎಂದು ಎಸ್ಕಾಂಗಳು ವಾದಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next