Advertisement
ಭೂ ನ್ಯಾಯಮಂಡಳಿ 2002ರಲ್ಲಿ ನೀಡಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
Related Articles
Advertisement
ಪ್ರಕರಣವೇನು?ಕರೋಪಾಡಿ ಗ್ರಾಮದ ಡಿ. ಮಹಮದ್ ಬ್ಯಾರಿ ಅವರು ಕರ್ನಾಟಕ ಭೂ ಸುಧಾರಣೆ ಕಾಯ್ದೆ-1974ರ ಅನುಸಾರ ಗೇಣಿದಾರರು ತಮ್ಮ ಹಕ್ಕು ಸ್ಥಾಪಿಸಲು ಕಂದಾಯ ಇಲಾಖೆ ನಮೂನೆ ಫಾರಂ-7ರಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಒಂದು ಸರ್ವೇ ನಂಬರ್‌ಗೆ ಅನುಭೋಗದ ಹಕ್ಕುದಾರಿಕೆ ಕೋರಲಾಗಿತ್ತಾದರೂ, ಭೂ ನ್ಯಾಯಮಂಡಳಿಯು 3 ಸರ್ವೇ ನಂಬರ್‌ಗಳಲ್ಲೂ ಅವರಿಗೆ ಅನುಭೋಗದಾರಿಕೆ ಇದೆಯೆಂದು ತೀರ್ಪಿನಲ್ಲಿ ಹೇಳಿತ್ತು. ಇದನ್ನು ಪ್ರಶ್ನಿಸಿ ಕರೋಪಾಡಿಯ ಪಿ. ರತ್ನಾ ಹಾಗೂ ಇತರರು, ಬಂಟ್ವಾಳ ಭೂ ನ್ಯಾಯ ಮಂಡಳಿ 2002ರ ಅಕ್ಟೋಬರ್ 31ರಂದು ನೀಡಿರುವ ಆಕ್ಷೇಪಾರ್ಹ ಆದೇಶವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.