Advertisement

ಅಜಾನ್‌ ಘೋಷಣೆಗಳಿಂದ ಇತರರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ

10:42 PM Aug 22, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಅಜಾನ್‌ ಕೂಗುವುದಕ್ಕೆ ನಿರ್ಬಂಧ ಹೇರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ಈ ವಿಚಾರವಾಗಿ ಬೆಂಗಳೂರಿನ ನಿವಾಸಿ ಆರ್‌. ಚಂದ್ರಶೇಖರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಮತ್ತು ನ್ಯಾ. ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, “ಆಜಾನ್‌ನಿಂದ ಜನರ ಮೂಲಭೂತ ಹಕ್ಕು ಮೊಟಕುಗೊಳ್ಳುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೇ ಅರ್ಜಿ ವಿಚಾರಣೆ ನಡೆಸಿಲು ನಿರಾಕರಿಸಿದ ನ್ಯಾಯಪೀಠ, ಅರ್ಜಿಯನ್ನು ವಿಲೇವಾರಿಗೊಳಿಸಿತು.

ಪ್ರಾರ್ಥನೆಗೆ ಆಜಾನ್‌ ಕೂಗುವುದು ಮುಸ್ಲಿಮರ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದ್ದರೂ, ಅದರಲ್ಲಿ ಬಳಸುವ ಅಲ್ಲಾಹು ಅಕºರ್‌ (ಅಲ್ಲಾಹನೇ ಸರ್ವಶ್ರೇಷ್ಠ) ಎಂಬ ಶಬ್ದದಿಂದ ಇತರರ ಧಾರ್ಮಿಕ ನಂಬಿಕಗಳಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ರಾಜ್ಯಾದ್ಯಂತ ಮಸೀದಿಯಲ್ಲಿ ಧ್ವನಿವರ್ಧಕ ಮೂಲಕ ಆಜಾನ್‌ ಕೂಗುವುದಕ್ಕೆ ನಿರ್ಬಂಧ ಹೇರಲು ಸರ್ಕಾರರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸುವಂತೆ ಕೋರಿದ್ದರು.

Advertisement

ಆದರೆ, ಆಜಾನ್‌ನಲ್ಲಿರು ಬರುವ ಶಬ್ದಗಳಿಂದ ಅರ್ಜಿದಾರರು ಸೇರಿದಂತೆ ಇತರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ಅರ್ಜಿದಾರರ ವಾದವನ್ನು ಒಪ್ಪದ ಹೈಕೋರ್ಟ್‌, ಸಂವಿಧಾನದ ಪರಿಚ್ಛೇದ 25(1) ಪ್ರತಿಯೊಬ್ಬ ವ್ಯಕ್ತಿಗೂ ಅವರ ಧರ್ಮದ ಆಚರಣೆ, ತೋರಿಸಿಕೊಳ್ಳುವ ಮತ್ತು ಪ್ರಚಾರ ಮಾಡುವ ಹಕ್ಕು ಇರುತ್ತದೆ. ಆದರೆ, ಇದು ಸಂಪೂರ್ಣ ಹಕ್ಕು ಅಲ್ಲ. ಕೆಲವೊಂದು ನಿಯಂತ್ರಣಗಳಿಗೆ ಒಪ್ಪಪಟ್ಟಿರುತ್ತದೆ. ಸಾರ್ವಜನಿಕ ಆದೇಶ, ನೈತಿಕತೆ ಮತ್ತು ಆರೋಗ್ಯ ಕಾರಣಗಳಿಗಾಗಿ ನಿಯಂತ್ರಿಸಬಹುದು. ಅರ್ಜಿದಾರರು ಸೇರಿದಂತೆ ಯಾರೋಬ್ಬರೂ ಸಹ ತಮ್ಮ ಧರ್ಮ ಆಚರಿಸಬಹುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಯಪಟ್ಟದೆ
ಆಜಾನ್‌ ಎಂಬುದು ಇಸ್ಲಾಂ ಧರ್ಮದವರಿಗೆ ಪ್ರಾರ್ಥನೆ ಸಲ್ಲಿಸಲು ನೀಡುವ ಕರೆಯಾಗಿದೆ. ಅರ್ಜಿದಾರರೇ ತಮ್ಮ ಅರ್ಜಿಯಲ್ಲಿ ಹೇಳಿರುವಂತೆ ಇಸ್ಲಾಂ ಧರ್ಮದ ವ್ಯಕ್ತಿಗೆ ಆಜಾನ್‌ ಎಂಬುದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ. ಆದರೆ, ಅರ್ಜಿದಾರರು ಹೇಳಿರುವಂತೆ ಆಜಾನ್‌ನಿಂದ ಅವರ ಮೂಲಭೂತ ಹಕ್ಕುಗಳು ಮೊಟಕುಗೊಂಡಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.

ಅಲ್ಲದೆ, ಧ್ವನಿವರ್ಧಕಗಳನ್ನು ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಹೊರಸೂಸಲು ಸರ್ಕಾರಿ ಪ್ರಾಧಿಕಾರಗಳು ಅನುಮತಿ ನೀಡಬಾರದು ಎಂದು ಇದೇ ವೇಳೆ ನಿರ್ದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next