Advertisement
ಕಟ್ಟಡ ನಿರ್ಮಾಣ ವೇಳೆ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಸಂಬಂಧ ತಮ್ಮ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದು ಕೋರಿ ನಗರದ ವಾಸ್ತುಶಿಲ್ಪ ಎಂಜಿನಿಯರ್ ವಿ.ವಿಶ್ವಾಸ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ತನ್ನ ಆದೇಶದಲ್ಲಿ ಈ ರೀತಿ ಹೇಳಿದೆ.ನಗರದ ನಂದಿನಿ ಲೇಔಟ್‌ನಲ್ಲಿ ನಿವಾಸಿ ಚಂದ್ರಶೇಖರ್ ಎಂಬುವರಿಗೆ ವಿಶ್ವಾಸ್ ಮನೆಯ ಕಟ್ಟಡದ ವಿನ್ಯಾಸ ಮಾಡಿಕೊಟ್ಟಿದ್ದರು. ಅದರಂತೆ ಚಂದ್ರಶೇಖರ್ ಗುತ್ತಿಗೆದಾರರಿಗೆ ನಿರ್ಮಾಣ ಕಾಮಗಾರಿ ವಹಿಸಿದ್ದರು. 2020ರ ಅ.10ರಂದು ಮುಖೇಶ್ ಎಂಬ ಕಾರ್ಮಿಕ ವಿದ್ಯುತ್ ತಗುಲಿ ಸಾವನ್ನಪ್ಪಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 2020ರ ಅ.10ರಂದು ದುರುದೃಷ್ಟವಶಾತ್ ಆಗಿ ನಡೆದ ಘಟನೆಯಿಂದ ಓರ್ವ ಕಾರ್ಮಿಕನ ಸಾವು ಸಂಭವಿಸಿದೆ. ಮೃತನು ವಸತಿ ನಿವೇಶನದ ಮಾಲೀಕರು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಟ್ಟಿದ್ದ ಗುತ್ತಿಗೆದಾರನ ಅಧೀನದಲ್ಲಿ ಕೆಲಸ ಮಾಡುತ್ತಿದ್ದ. ಅರ್ಜಿದಾರ ವಿಶ್ವಾಸ್ ಆಗಾಗ್ಗೆ ನಿವೇಶನಕ್ಕೆ ಭೇಟಿ ನೀಡುತ್ತಿದ್ದರಷ್ಟೆ. ಮನೆಯ ಕಟ್ಟಡದ ವಿನ್ಯಾಸ ಮಾಡಿ ಮನೆ ಮಾಲೀಕರಿಗೆ ನೀಡಿದ್ದಾರೆ. ಅವರು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗಾರನಿಗೆ ವಹಿಸಿದ್ದರು.
Related Articles
Advertisement