Advertisement

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

08:24 PM Apr 25, 2024 | Team Udayavani |

ಬೆಂಗಳೂರು: ಉಡುಪಿ ‘ದುರ್ಗಾ ದೌಡ್‌ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋಮು ದ್ವೇಷ ಭಾಷಣ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಹಿಂದೂ ಪರ ಕಾರ್ಯಕರ್ತೆ ಕಾಜಲ್‌ ಹಿಂದುಸ್ತಾನಿ ವಿರುದ್ಧ ದಾಖಲಾಗಿರುವ ಎಫ್ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

Advertisement

2022ರ ಅಕ್ಟೋಬರ್‌ ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಭಾಷಣೆ ಮಾಡಿದ ಆರೋಪದ ಮೇಲೆ ಉಡುಪಿ ಟೌನ್‌ ಪೊಲೀಸರು  ತಮ್ಮ ವಿರುದ್ದ ದಾಖಲಿಸಿರುವ ಎಫ್ಐಆರ್‌ ರದ್ದುಗೊಳಿಸುವಂತೆ ಕೋರಿ ಕಾಜಲ್‌ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪಸನ್ನ ಅವರ ಏಕಸದಸ್ಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್‌ ಶ್ಯಾಮ್‌, ಅರ್ಜಿದಾರರು ಸಂವಿಧಾನದ 19 ನೇ ವಿಧಿಯ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಅವರು ಭಾಷಣ ಮಾಡಿದ್ದು ಯಾವುದೇ ಕೋಮು ದ್ವೇಷಕ್ಕೆ ಎಡೆಮಾಡಿಕೊಟ್ಟಿಲ್ಲ.  ಸೂಕ್ತ ಆಧಾರಗಳಿಲ್ಲದೆ ಎಫ್ಐಆರ್‌ ಅರ್ಜಿದಾರರ ವಿರುದ್ಧ ಆರೋಪ ಮಾಡಲಾಗಿದೆ.

ಸಮಾಜದಲ್ಲಿ  ಅರ್ಜಿದಾರರ ಘನತೆ ಹಾಗೂ ಖ್ಯಾತಿಗೆ ಧಕ್ಕೆ ತರುವ ನಿಟ್ಟಿನಲ್ಲಿ   ರಾಜಕೀಯ ದುರುದ್ದೇಶದಿಂದ ಪ್ರಕರಣವನ್ನು ದಾಖಲಿಸಲಾಗಿದೆ. ಐಪಿಸಿಯ ಸೆಕ್ಷನ್‌  196 (1-ಎ)(ಎ) ಅಡಿಯಲ್ಲಿ  ಸಕ್ಷಮ ಪ್ರಾಧಿಕಾರದ  ಪೂರ್ವಾನುಮತಿ  ಪಡೆಯದೇ  ಪ್ರತಿವಾದಿ ಪೊಲೀಸರು ಅರ್ಜಿದಾರರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.  ಇದೆಲ್ಲವನ್ನೂ ಪರಿಗಣಿಸಿ  ಅರ್ಜಿದಾರರ ವಿರುದ್ಧದ ಸಂಪೂರ್ಣ ವಿಚಾರಣೆಯನ್ನು  ರದ್ದುಪಡಿಗೊಳಿಸುವಂತೆ ಮನವಿ ಮಾಡಿದರು.

ಪ್ರಕರಣವೇನು?:

Advertisement

2022 ರ ಅ. 2 ರಂದು ಉಡುಪಿಯಲ್ಲಿ ಕೃಷ್ಣ ಮಠದ ಸಮೀಪ  ನಡೆದ ‘ದುರ್ಗಾ ದೌಡ್‌ ‘ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕಾಜಲ್‌ ಹಿಂದುಸ್ತಾನಿ ಮಾತನಾಡುತ್ತ ಹಿಂದು ಹೆಣ್ಣು ಮಕ್ಕಳನ್ನು ಮುಸ್ಲಿಂ ಸಮುದಾಯದವರು ಲವ್‌ ಜಿಹಾದ್‌ ನಡೆಸಿ ವಂಚಿಸುತ್ತಿದ್ದಾರೆ. ಜಿಹಾದ್‌ ಪ್ರಚೋದನೆಯಾಗಿ ಬಾಲಿವುಡ್‌  ಕಾರ್ಯಚರಿಸುತ್ತಿದೆ ಎಂದಿದರು.

ಈ ಸಂಬಂಧ  ಕೌಜಲ್‌ ಹಿಂದುಸ್ತಾನಿ ಅವರು ಒಂದು ಸಮಯದಾಯವನ್ನು ದೂಷಿಸಿ ಇನ್ನೊಂದು  ಧರ್ಮ ದವರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವಂತೆ  ಮಾತನಾಡಿದ್ದಾರೆ ಎಂದು  ಆರೋಪಿಸಿ ಉಡುಪಿ ಟೌನ್‌ ಪೊಲೀಸರು ಎಫ್ಐಆರ್‌ ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕಾಜಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next