ಬೆಂಗಳೂರು: ಟಿ.ನರಸೀಪುರದಲ್ಲಿ ಇತ್ತೀಚೆಗೆ ಕೊಲೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಶ್ರದ್ಧಾಂಜಲಿ ಸಭೆಗೆ ಷರತ್ತುಬದ್ಧ ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿದೆ.
ಬಸವರಾಜ ಪಾಟೀಲ್ ಯತ್ನಾಳ್, ಶ್ರೀರಾಮುಲು, ಚಕ್ರವರ್ತಿ ಸೂಲಿಬೆಲೆ, ಎನ್. ಮಹೇಶ್ ಭಾಗವಹಿಸುವ ಶ್ರದ್ಧಾಂಜಲಿ ಸಭೆಗೆ ಹೈಕೋರ್ಟ್ ಅನುಮತಿ ನೀಡಿದೆ. ಸ್ಥಳೀಯ ತಹಸೀಲ್ದಾರ್ ಅವರು ಶ್ರದ್ಧಾಂಜಲಿ ಸಭೆಗೆ ಅನುಮತಿ ನಿರಾಕರಿಸಿದ್ದರು.
ಗುಂಜಾನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಇಂದು (ಮಂಗಳವಾರ) ಸಂಜೆ 4 ರಿಂದ 6 ಗಂಟೆಯೊಳಗೆ ಸಭೆ ನಡೆಸಬಹುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಹೈಕೋರ್ಟ್ ಸೂಚಿಸಿದೆ. ಆಯೋಜಕರಿಂದ ಬಾಂಡ್ ಬರೆಸಿಕೊಳ್ಳಲು ಹೈಕೋರ್ಟ್ ಸೂಚನೆ ನೀಡಿದೆ.
ಇದನ್ನೂ ಓದಿ:45 ವರ್ಷದಲ್ಲೇ ಮೊದಲು; ಐತಿಹಾಸಿಕ ತಾಜ್ ಮಹಲ್ ಗೋಡೆಗಳಿಗೆ ಅಪ್ಪಳಿಸಿದ ಯಮುನಾ!
ಸಭೆಗೆ ಅನುಮತಿ ನಿರಾಕರಿಸಿದನ್ನು ಪ್ರಶ್ನಿಸಿ ಶ್ರೀ ವೀರಾಂಜನೇಯ ಧರ್ಮ ಜಾಗೃತಿ ಬಳಗ ರಿಟ್ ಸಲ್ಲಿಸಿತ್ತು. ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.