Advertisement

ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ ಹೈಕೋರ್ಟ್‌ ಡಬಲ್‌ ಶಾಕ್‌

08:05 AM Jul 27, 2017 | Harsha Rao |

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪರ ಇನ್ನು ಮುಂದೆ ಯಾವುದೇ ಪ್ರಕರಣದಲ್ಲಿ ವಾದ ಮಂಡಿಸದಿರಲು ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ನಿರ್ಧರಿಸಿದ್ದಾರೆ. ಇದೇ ವೇಳೆ ತಮಗೆ ನೀಡಬೇಕಿದ್ದ 2 ಕೋಟಿ ರೂ. ಫೀಸ್‌ ಅನ್ನು ಅವರೇ ಇಟ್ಟುಕೊಳ್ಳಲಿ ಎಂದಿದ್ದಾರೆ. ಬೆನ್ನಿಗೇ ಸೂಕ್ತ ದಾಖಲೆ ಒದಗಿಸದೇ ಇರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ಗೆ ದಿಲ್ಲಿ ಹೈಕೋರ್ಟ್‌ ಹತ್ತು ಸಾವಿರ ರೂ. ದಂಡ ವಿಧಿಸಿದೆ. ಈ ಮೂಲಕ ದಿಲ್ಲಿ ಮುಖ್ಯಮಂತ್ರಿಗೆ ಭಾರಿ ಹಿನ್ನಡೆ ಯಾಗಿದೆ. ಜತೆಗೆ ಮಾನಹಾನಿ ಕಾರಕವಾಗುವಂತೆ ಮಾತನಾಡ ದಂತೆ ದಿಲ್ಲಿ ಹೈಕೋರ್ಟ್‌ ಆದೇಶ ನೀಡಿದೆ.

Advertisement

ದಿಲ್ಲಿ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ನಡುವೆ ಹುಟ್ಟಿಕೊಂಡ ಆರೋಪ-ಪ್ರತ್ಯಾರೋಪ ಈಗ ತಾರಕಕ್ಕೆ ಏರಿದೆ. ಇದರಿಂದಾಗಿ ಕೇಜ್ರಿವಾಲ್‌ ಈಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಎರಡು ಮಾನನಷ್ಟ ಮೊಕದ್ದಮೆ ಯಿಂದ ಜೇಟಿÉ ಬೇಡಿಕೆ ಇಟ್ಟಂತೆ ತಲಾ 10 ಕೋಟಿ ರೂ. (ಒಟ್ಟು 20 ಕೋಟಿ ರೂ.) ಹಾಗೂ ಜೇಠ್ಮಲಾನಿಗೆ ನೀಡಬೇಕಾದ ಫೀಸ್‌ 2 ಕೋಟಿ ಸೇರಿ ಒಟ್ಟು 22 ಕೋಟಿ ರೂ. ತೆರಬೇಕಾದ ಸಂದರ್ಭ ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next