Advertisement

ಆಪ್ತ ಸಮಾಲೋಚನೆ: ನಿಮ್ಹಾನ್ಸ್‌ ಸೇವೆಗೆ ಹೈಕೋರ್ಟ್‌ ಪ್ರಶಂಸೆ

02:26 AM May 02, 2020 | Sriram |

ಬೆಂಗಳೂರು: ಕೋವಿಡ್-19 ಶಂಕಿತರು,ಸೋಂಕಿತರು, ಐಸೊಲೇಷನ್‌ ಮತ್ತು ಕ್ವಾರಂಟೈನ್‌ ಆದವರ ಸಹಿತ ಪರಿಸ್ಥಿತಿಯ ಒತ್ತಡದಿಂದಾಗಿ ಮಾನಸಿಕ ಖಿನ್ನತೆಗೊಳಗಾದ ಸಾರ್ವಜನಿಕರ ಆಪ್ತ ಸಮಾಲೋಚನೆ ಮತ್ತು ಮಾನಸಿಕ ಆರೈಕೆ ವಿಚಾರವಾಗಿ ನಿಮ್ಹಾನ್ಸ್‌ ನೀಡುತ್ತಿರುವ ಸೇವೆ ಬಗ್ಗೆ ಹೈಕೋರ್ಟ್‌ ಪ್ರಶಂಸೆ ವ್ಯಕ್ತಪಡಿಸಿದೆ.

Advertisement

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ವಿಭಾಗೀಯ ನ್ಯಾಯ ಪೀಠದ ನಿರ್ದೇಶದಂತೆ ಕೋರ್ಟ್‌ ಕಲಾಪಕ್ಕೆವೀಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದನಿಮ್ಹಾನ್ಸ್‌ನ ಉಪ ನಿರ್ದೇಶಕ (ಮಾನಸಿಕ ಆರೋಗ್ಯ) ಡಾ| ನವೀನ್‌ ಕುಮಾರ್‌ ನಿಮ್ಹಾನ್ಸ್‌ಸೇವೆಗಳ ಕುರಿತು ವಿವರಣೆ ನೀಡಿದರು.

ನಿಮ್ಹಾನ್ಸ್‌ ವತಿಯಿಂದ ಹೆಲ್ಪ್ ಲೈನ್‌ ಸ್ಥಾಪಿಸಲಾಗಿದೆ. ಅದರಲ್ಲಿ “ಸಂವಾದಾನಾತ್ಮಕ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆ’ (ಐವಿಆರ್‌ಎಸ್‌) ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ. 300 ಕಾರ್ಯಕರ್ತರು ಐವಿಆರ್‌ಎಸ್‌ ಮೂಲಕ 21 ರಾಜ್ಯಗಳಲ್ಲಿ ಯುವಕರು, ಹಿರಿಯ ನಾಗರಿಕರು, ಮಹಿಳೆಯರು ವಿವಿಧ 4 ಕೆಟಗರಿಯ ಜನರೊಂದಿಗೆ ಆಪ್ತ ಸಮಾಲೋಚನೆ ಮಾಡುತ್ತಾರೆ. 20 ಸಾವಿರ ವಲಸೆ ಕಾರ್ಮಿಕರು, 52 ಸಾವಿರ ಸಾಮಾನ್ಯ ಜನರಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ. ಎಂದು ಡಾ| ನವೀನ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next