ಅವನೊಬ್ಬ ಕಿಡ್ನ್ಯಾಪರ್ ತನ್ನ ಮೇಲಿನ ಬಾಸ್ ಕೊಡುವ ಸಂದೇಶದಂತೆ ಆತ ತನ್ನ ಇಬ್ಬರು ಸಹಚರರ ಜೊತೆ ಶ್ರೀಮಂತ ಕುಟುಂಬದ ಹಿನ್ನೆಲೆಯ ಹುಡುಗಿಯರಿಬ್ಬರನ್ನು ಅಪಹರಿಸುತ್ತಾನೆ. ಮೇಲ್ನೋಟಕ್ಕೆ ಇದೊಂದು ಅಪಹರಣ ಎಂದು ಕಾಣಿಸಿದರೂ, ಅಪಹರಣವಾದ ನಂತರ ನಿಧಾನವಾಗಿ ಅದರ ಹಿಂದಿನ ಉದ್ದೇಶ, ಅದಕ್ಕೆ ಕಾರಣವಾದ ಕಾಣದ ಕೈಗಳು, ಅದರ ಹಿಂದಿನ ನಿಗೂಢ ಜಾಲ ಹೀಗೆ ಒಂದೊಂದೇ ಎಳೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅಪಹರಣಕ್ಕೆ ಕಾರಣ ಯಾರಿರಬಹುದು ಎಂಬ ಗುಮಾನಿ ಒಬ್ಬರತ್ತ ತಿರುಗುತ್ತಿದ್ದಂತೆ, ಎದುರಾಗುವ ಮತ್ತೂಂದು ಟ್ವಿಸ್ಟ್ ಅಲ್ಲೇ ಪಕ್ಕದಲ್ಲಿರುವ ಮತ್ತೂಬ್ಬರತ್ತ ತಿರುಗುವಂತೆ ಮಾಡುತ್ತದೆ. ಹೀಗೆ “ಅವರನ್ನ ಬಿಟ್ಟು ಇವರ್ಯಾರು?’ ಎಂದು ಕಣ್ಣಾ-ಮುಚ್ಚಾಲೆ ನಡೆಯುತ್ತಲೇ ಸಿನಿಮಾ ಕ್ಲೈಮ್ಯಾಕ್ಸ್‌ಗೆ ಬಂದು ನಿಲ್ಲುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಹೈಡ್ ಆ್ಯಂಡ್ ಸೀಕ್’ ಸಿನಿಮಾದ ಒಂದು ಎಳೆ.
ಸಿನಿಮಾದ ಹೆಸರೇ ಹೇಳುವಂತೆ “ಹೈಡ್ ಆ್ಯಂಡ್ ಸೀಕ್’ ಒಂದು ಕಿಡ್ಯಾéಪಿಂಗ್ ಮಾಫಿಯಾ ಮತ್ತು ಅದನ್ನು ಬೇಧಿಸಲು ಹೊರಡುವ ಪೊಲೀಸರ ನಡುವೆ ನಡೆಯುವಂಥ ಕಣ್ಣಾ-ಮುಚ್ಚಾಲೆ ಆಟದ ಸುತ್ತ ನಡೆಯುವ ಸಿನಿಮಾ. ಒಂದು ಅಪಹರಣದ ಕಥೆಯನ್ನು ಸಸ್ಪೆನ್ಸ್ ಕಂ ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಪುನೀತ್ ನಾಗರಾಜು. ಸಿನಿಮಾದ ಕಥೆಗೆ ತಕ್ಕಂತೆ ಚಿತ್ರಕಥೆಗೂ ಇನ್ನಷ್ಟು ಓಟ ಸಿಕ್ಕಿದ್ದರೆ, “ಹೈಡ್ ಆ್ಯಂಡ್ ಸೀಕ್’ ಗೇಮ್ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು.
ಇನ್ನು ನಾಯಕ ನಟ ಅನೂಪ್ ರೇವಣ್ಣ ಡಬಲ್ ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಯಲ್ಲಿರುವ ಪಾತ್ರಕ್ಕೆ ತಕ್ಕಂತೆ ತುಂಬ ಗಂಭೀರವಾದ ಅಭಿನಯ ಅನೂಪ್ ಅವರದ್ದು. ನಾಯಕಿ ಧನ್ಯಾ ರಾಮಕುಮಾರ್ ಶ್ರೀಮಂತ ಕುಟುಂಬ ಹುಡುಗಿಯಾಗಿ ತೆರೆಮೇಲೆ ಲವಲವಿಕೆಯ ಅಭಿನಯ ನೀಡಿದ್ದಾರೆ. ಉಳಿದಂತೆ ಕೃಷ್ಣ ಹೆಬ್ಟಾಳೆ, ರಾಜೇಶ್ ನಟರಂಗ, ಬಲರಾಜವಾಡಿ, ಅರವಿಂದ ರಾವ್, ಮೈತ್ರಿ ಜಗ್ಗಿ ಮತ್ತಿತರರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಪೂರಕವಾಗಿದ್ದು, ಸಂಕಲನ ಮತ್ತು ಹಾಡುಗಳ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬ ಹುದಿತ್ತು. ಸಸ್ಪೆನ್ಸ್ ಕಂ ಥ್ರಿಲ್ಲರ್ ಸಿನಿಮಾ ಗಳನ್ನು ಇಷ್ಟಪಡುವವರು ಒಮ್ಮೆ “ಹೈಡ್ ಆ್ಯಂಡ್ ಸೀಕ್’ ಕಡೆಗೆ ಮುಖ ಮಾಡಬಹುದು.