Advertisement

Andhra: ಹಾಸ್ಟೆಲ್​ನ ಶೌಚಾಲಯದಲ್ಲಿ ಕ್ಯಾಮೆರಾ ಪತ್ತೆ… ವಿಡಿಯೋ ಸೋರಿಕೆ ಶಂಕೆ, ಪ್ರತಿಭಟನೆ

12:54 PM Aug 30, 2024 | Team Udayavani |

ಆಂಧ್ರಪ್ರದೇಶ: ಎಂಜಿನಿಯರಿಂಗ್‌ ಕಾಲೇಜಿನ ಹಾಸ್ಟೆಲ್ ವಾಶ್ ರೂಂನಲ್ಲಿ ಹಿಡೆನ್ ಕ್ಯಾಮೆರಾ ಪತ್ತೆಯಾಗಿರುವ ಘಟನೆ ಆಂದ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡ್‌ವಲ್ಲೇರು ಎಂಬಲ್ಲಿ ಬೆಳಕಿಗೆ ಬಂದಿದ್ದು ಘಟನೆಯಿಂದ ಸಿಟ್ಟಿಗೆದ್ದ ಹಾಸ್ಟೆಲ್ ವಿದ್ಯಾರ್ಥಿನಿಯರು ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

ಗುರುವಾರ ಕ್ಯಾಮೆರಾ ಇಟ್ಟಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಹಾಸ್ಟೆಲ್ ಅಧಿಕಾರಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಬಳಿ ಇರುವ ದಾಖಲೆಗಳನ್ನು ನಾಶಪಡಿಸುವಂತೆ ಆಗ್ರಹಿಸಿದ್ದಾರೆ.

ಆರೋಪಿ ಅದೇ ಕಾಲೇಜಿನ ವಿದ್ಯಾರ್ಥಿ… ?
ಇನ್ನೊಂದೆಡೆ ಕ್ಯಾಮೆರಾ ಅಳವಡಿಸಿರುವ ಕುರಿತು ಪ್ರತಿಭಟನೆ ಭುಗಿಲೆದ್ದಿರುವ ನಡುವೆ ಪೊಲೀಸರು ಅದೇ ಕಾಲೇಜಿನಲ್ಲಿ ಓದುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಅಲ್ಲದೆ ವಿಡಿಯೋಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಂಚಿರುವ ಆರೋಪ ಕೂಡ ಕೇಳಿಬಂದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲ್ಯಾಪ್ ಟಾಪ್ ನಲ್ಲಿತ್ತು ೩೦೦ಕ್ಕೂ ಅಧಿಕ ವಿಡಿಯೋ :
ಇನ್ನು ಬಂಧಿಸಲಾದ ವಿದ್ಯಾರ್ಥಿಯ ಲ್ಯಾಪ್ ಟಾಪ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ವೇಳೆ ಆತನ ಲ್ಯಾಪ್ ಟಾಪ್ ನಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ವಿಡಿಯೋಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ ಸದ್ಯ ಲ್ಯಾಪ್ ಟಾಪ್ ಪೊಲೀಸರ ವಶದಲ್ಲಿದ್ದು ಇದರ ಹಿಂದೆ ಬೇರೆ ಯಾರು ಯಾರು ಇದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ:
ಘಟನೆಗೆ ಸಂಬಂಧಿಸಿ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳಲು ಮುಂದೆ ಬಾರದೆ ಇರುವುದು ವಿದ್ಯಾರ್ಥಿನಿಯರು ಕೆರಳುವಂತೆ ಮಾಡಿದೆ ಅಲ್ಲದೆ ಆಡಳಿತ ಮಂಡಳಿ ಏನು ನಡೆದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದು ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿದೆ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ವಿದ್ಯಾರ್ಥಿಯನ್ನು ಬಂಧಿಸಿದೆ ಎಂದು ಹೇಳಿದ್ದರೂ ಆತನ ಬಂಧನ ಅಗಿದೋ ಇಲ್ಲವೋ ಇನ್ನೂ ಸ್ಪಷ್ಟಗೊಂಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:  India-Bangladesh ಗಡಿಯಲ್ಲಿ ಹಸೀನಾ ನೇತೃತ್ವದ ಅವಾಮಿ ಲೀಗ್‌ ಮುಖಂಡನ ಕೊಳೆತ ಶವ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next