ಕಾಬೂಲ್ : ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಪಡೆ ತನ್ನ ಅಧಿಕಾರ ಹಿಡಿದಿದ್ದು, ತಾಲಿಬಾನ್ ಆಡಳಿತದ ತನ್ನ ಹೊಸ ನಾಯಕನನ್ನು ಕೂಡ ಉಗ್ರ ಪಡೆ ಘೋಷಣೆ ಮಾಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ತಾಲಿಬಾನ್ ಉಗ್ರ ಪಡೆಯ ಮುಖಂಡನಾಗಿ ಖ್ಯಾತ ಗಳಿಸಿದ್ದ ಮುಲ್ಲಾ ಹಿಬತುಲ್ಲಾ ಅಖುಂಡಜಾದ ಅಫ್ಗಾನಿಸ್ತಾನದ ಆಡಳಿತವನ್ನು ಮುನ್ನೆಡೆಸಲಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ಫುಟ್ ಬಾಲ್ ನಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ದಾಖಲೆ ಬರೆದ ರೊನಾಲ್ಡೊ
ತಾಲಿಬಾನ್ ನಲ್ಲಿ ಅಫ್ಗಾನಿಸ್ತಾನದಲ್ಲಿ ತನ್ನ ಸರ್ಕಾರ ರಚನೆ ಮುಂದಾಗಿದೆ. ಮುಲ್ಲಾ ಹಿಬತುಲ್ಲಾ ಅಖುಂಡಜಾದ ತಾಲಿಬಾನ್ ಆಡಳಿತದ ನೇತೃತ್ವವನ್ನು ವಹಿಸಲಿದ್ದಾರೆ. ಅಖುಂಡಜಾದ ಅವರ ಅಡಿಯಲ್ಲಿ ಪ್ರಧಾನ ಮಂತ್ರಿ ಅಥವಾ ರಾಷ್ಟ್ರಪತಿ ಇರಲಿದ್ದಾರೆ. ಅತಿ ಶೀಘ್ರದಲ್ಲಿ ತಾಲಿಬಾನ್ ಸರ್ಕಾರ ಆಡಳಿತ ಆರಂಭಿಸಲಿದೆ ಎಂದು ಉಗ್ರ ಪಡೆ ತಿಳಿಸಿರುವುದಾಗಿ ಅಫ್ಗಾನ್ ನ ಸುದ್ದಿ ಸಂಸ್ಥೆ ಟೋಲೋ ನ್ಯೂಸ್ ವರದಿ ಮಾಡಿದೆ.
ಈ ಬಗ್ಗೆ ಟೋಲೋ ನ್ಯೂಸ್ ಗೆ ಪ್ರತಿಕ್ರಿಯಿಸಿದ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಸದಸ್ಯ ಅನಾಮುಲ್ಲಾ ಸಮಂಗಾನಿ, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಮುಲ್ಲಾ ಹಿಬತುಲ್ಲಾ ಅಖುಂಡಜಾದ ಮುನ್ನೆಡಸಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.
ಈಗಾಗಲೇ ತಾಲಿಬಾನ್ ಅಫ್ಗಾನಿಸ್ತಾನದಲ್ಲಿ ತನ್ನ ಸರ್ಕಾರ ರಚನೆಗೆ ಗವರ್ನರ್ ನನ್ನು ಈಗಾಗಲೇ ನೇಮಕ ಮಾಡಿಕೊಂಡಿದ್ದಲ್ಲದೇ, ಪೊಲೀಸ್ ಮುಖ್ಯಸ್ಥರನ್ನು, ಪೊಲೀಸ್ ಕಮಾಂಡರ್ ಗಳನ್ನು ಕೂಡ ನೇಮಿಸಿಕೊಂಡಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಇದನ್ನೂ ಓದಿ : ಇಂದು ಸುದೀಪ್ ಬರ್ತ್‌ಡೇ: ಕೋವಿಡ್ ಆತಂಕದಿಂದ ಅದ್ಧೂರಿ ಆಚರಣೆಯಿಲ್ಲ