Advertisement
ಇನ್ಮುಂದೆ ಬೈಕ್, ಕಾರ್ ಚಾಲನೆಗೆ ಡ್ರೈವಿಂಗ್ ಲೈಸನ್ಸ್ (ಡಿಎಲ್) ಪಡೆಯಬೇಕಾದರೆ ಚಾಲಕರ ನೈಪುಣ್ಯಯೇ ಪ್ರಥಮ ಮಾನದಂಡವಾಗಲಿದೆ. ಕೇವಲ ವಾಹನ ಚಾಲನೆಯನ್ನು ಕಲಿತರೆ ಸಾಲದು, ಚಾಲಕರು ಈ ಹೈಟೆಕ್ ಚಾಲನಾ ಪರೀಕ್ಷಾ ಪಥದಲ್ಲಿ ಚಾಲಕರು ತಮ್ಮ ಪ್ರಾವೀಣ್ಯ ಪ್ರದರ್ಶಿಸಬೇಕು.
Related Articles
Advertisement
ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮತ್ತು ಅಪಘಾತಗಳೂ ಸಂಭವಿಸಲು ವಾಹನ ಚಾಲನೆಯಲ್ಲಿ ಸವಾರರ ಪರಿಣತಿಯ ಕೊರತೆಯೂ ಪ್ರಮುಖ ಕಾರಣವೇ ಸರಿ. ಇದೆಲ್ಲವನ್ನು ಗಮನದಲ್ಲಿ ಇರಿಸಿಕೊಂಡು ಹಾಗೂ ಇದಕ್ಕೆ ಕಡಿವಾಣ ಹಾಕುವುದು ಹಾಗೂ ಡ್ರೈವಿಂಗ್ ಲೈಸೆನ್ಸ್ ವಿರತಣೆಯಲ್ಲಿ ಪರದರ್ಶಕತೆಯನ್ನೇ ತರುವುದೇ ಗಣಕೀಕೃತ ಚಾಲನಾ ಪರೀಕ್ಷಾ ಪಥದ ಮೂಲ ಗುರಿ.
ಎನ್‌ಇಕೆಆರ್‌ಟಿಸಿ ಸುಧಾರಣೆಗೆ ಬೇಕು ಕ್ರಮ :ನಷ್ಟದಲ್ಲಿರುವ ಎನ್‌ಇಕೆಆರ್‌ಟಿಸಿ ಸಂಸ್ಥೆ ಸುಧಾರಣೆಗೆ ಕಠಿಣ ಕ್ರಮ ಅಗತ್ಯ ಎಂಬ ಮಾತು ಸಂಸ್ಥೆಯಲ್ಲಿ ಹಾಗೂ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಕೆಲ ಅಧಿಕಾರಿಗಳಿಂದ ನೌಕರರಿಗೆ ನಡೆಯುತ್ತಿರುವ ಕಿರುಕುಳ ತಪ್ಪಿಸುವುದು, ಹತ್ತಾರು ವರ್ಷಗಳಿಂದ ಒಂದೇ ಸ್ಥಳ ಹಾಗೂ ಒಂದೇ ವಿಭಾಗದಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದು, ಡಿಪೋಗಳಲ್ಲಿ ಡಿಸೈಲ್ ಕಳ್ಳತನವಾದರೂ ಸಂಬಂಧಪಟ್ಟ ಭದ್ರತಾ ಮತ್ತು ಜಾಗೃತಾ ಇಲಾಖೆ ಕ್ರಮ ಕೈಗೊಳ್ಳದಿರುವುದು, ಕೋವಿಡ್-19ದಿಂದ ಸಾರಿಗೆ ನೌಕರರು ಒಳಗಾಗಿ ಸಂಕಷ್ಟ ಅನುಭವಿಸಿದ್ದರೂ ಸಂಸ್ಥೆಯ ಕಾರ್ಮಿಕ ಕಲ್ಯಾಣ ಇಲಾಖೆ ನಿದ್ರೆಯಿಂದ ಬಾರದಿರುವುದು, ಯಾದಗಿರಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ನಿರುಪಯುಕ್ತವಾಗಿರುವ ಸಾವಿರಾರು ಬಸ್‌ಗಳನ್ನು ವಿಲೇವಾರಿ ಮಾಡದೇ ಸಂಸ್ಥೆಗೆ ಕೋಟ್ಯಂತರ ರೂ. ನಷ್ಟ ಉಂಟು ಮಾಡುತ್ತಿರುವುದು ಹಾಗೂ ನಿರ್ವಾಹಕರು, ಚಾಲಕರು ಮತ್ತು ಮೆಕ್ಯಾನಿಕ್‌ಗಳ ರಜೆ ಮಂಜೂರಾತಿಯ ಬಯೋಮೆಟ್ರಿಕ್ ವ್ಯವಸ್ಥೆ ಕಾರ್ಯಕ್ಕೆ ತೀಲಾಂಜಲಿ ಹಾಕಿರುವುದು ಸೇರಿದಂತೆ ಇತರ ಹತ್ತಾರು ಕ್ರಮ ಕೈಗೊಂಡಲ್ಲಿ ಸಂಸ್ಥೆ ಆಡಳಿತ ಸುಧಾರಣೆಗೆ ನಾಂದಿ ಹಾಡಿದಂತಾಗುತ್ತದೆ. ಸೋಮವಾರ ಜಿಲ್ಲೆಗೆ ಸಾರಿಗೆ ಖಾತೆ ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಗಮಿಸುತ್ತಿದ್ದು, ಇವುಗಳ ಬಗ್ಗೆ ಗಮನಹರಿಸಿ ಸುಧಾರಣೆಗೆ ಖಡಕ್ ಸೂಚನೆ ಕೊಟ್ಟಲ್ಲಿ ಮಾತ್ರ ಭೇಟಿ ಸಾರ್ಥಕವೆನಿಸುತ್ತದೆ. ಅದೇ ರೀತಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಳ್ಳುತ್ತಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ಸಹ ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಈ ಎಲ್ಲ ಲೋಪಗಳನ್ನು ಅವಲೋಕಿಸಿ ಸುಧಾರಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ.