ಕಾರಟಗಿ: ಪಟ್ಟಣದ ಆರ್.ಜಿ. ರಸ್ತೆಯ ಕನಕದಾಸ ವೃತ್ತದ ಬಳಿಯ ಹಳೇ ಪಶು ಚಿಕಿತ್ಸಾಲಯದ 30 ಗುಂಟೆ ಜಾಗದಲ್ಲಿ ಬೆಂಗಳೂರು ಮಹಾನಗರಿಯಲ್ಲಿನ ಮಾದರಿಯಲ್ಲೇ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಅವರು ಪಟ್ಟಣದ ಪೊಲೀಸ್ ವಸತಿ ಗೃಹಗಳ ಬಳಿ ಪಶುಪಾಲನಾ ಇಲಾಖೆಗೆ 2014-15ನೇ ಸಾಲಿನಲ್ಲಿ ಮಂಜೂರಾಗಿದ್ದ 14.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಶು ಚಿಕಿತ್ಸಾಲಯವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಮಧ್ಯವರ್ತಿ ಸ್ಥಳದಲ್ಲಿ ಜಾಗೆ ಅಭಾವವಿದ್ದ ಕಾರಣ ಕಡಿಮೇ ಜಾಗದಲ್ಲೇ ಅತ್ಯುತ್ತಮ ಬಸ್ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಬಸ್ ನಿಲ್ದಾಣದ ನೀಲನಕ್ಷೆ ತಯಾರಿಕೂಡ ನಡೆದಿದೆ. ಬಸ್ ನಿಲ್ದಾಣ ನಿರ್ಮಿಸುವ ನಿಟ್ಟಿನಲ್ಲಿ ಇತ್ತೀಚಿಗೆ ಜನನಿಬೀಡ ಪ್ರದೇಶಗಳಲ್ಲಿನ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ.
ಇದನ್ನೂ ಓದಿ:5 ಅಡಿ 7 ಅಂಗುಲಕ್ಕೆ ಶತದಿನದ ಸಂಭ್ರಮ
ಅಲ್ಲದೇ ಕಾರಟಗಿ ತಾಲೂಕು ಕೇಂದ್ರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮಿನಿ ವಿಧಾನಸೌಧ, ನೂತನ ಬಸ್ ನಿಲ್ದಾಣ, ಕೆರೆ ಅಭಿವೃದ್ಧಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿದ್ಧಪಡಿಸುತ್ತಿರುವ ನೀಲನಕ್ಷೆ ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ. ಕೆರೆ ಅಭಿವೃದ್ಧಿಗಾಗಿ ಜಿಲ್ಲಾ ಧಿಕಾರಿ ಸೇರಿ ವಿವಿಧ ಇಲಾಖೆ ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಜಾಗದ ಲಭ್ಯತೆ ಇನ್ನಿತರ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಕರೆಯ ಸುತ್ತ ಜೌಗು ನೀರು ನಿಲ್ಲದಂತೆ 2 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿಗೂ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾರಟಗಿ ಅಭಿವೃದ್ಧಿ ಹೇಗಿರಬೇಕು ಎಂಬುದರ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಅಧಿಕಾರಿಗಳ ಮನವಿ: ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ| ಮಹೇಂದ್ರ ಸುಬೇದಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರಟಗಿ ತಾಲೂಕಾಧ್ಯಕ್ಷ ಸರ್ದಾರ್ ಅಲಿ ಕಾರಟಗಿ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ್ದು, ಇಲ್ಲಿ ಒಟ್ಟು 12 ಜನ ಸಿಬ್ಬಂದಿ ಅವಶ್ಯಕತೆಯಿದ್ದು, ಒಬ್ಬರೂ ಕಾಯಂ ಸಿಬ್ಬಂದಿ ಇಲ್ಲದಿರುವ ಕುರಿತು ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶರಣೇಶ ಸಾಲೋಣಿ, ಮುಖ್ಯಾ ಧಿಕಾರಿ ಡಾ| ಎನ್. ಶಿವಲಿಂಗಪ್ಪ, ಪಶು ವೈದ್ಯಾ ಧಿಕಾರಿ ಡಾ| ಆಕಾಶ್, ಪಶು ವೈದ್ಯಕೀಯ ಪರೀಕ್ಷಕ ಕನಕಪ್ಪ ಮುಖಂಡರಾದ ಚನ್ನಬಸಪ್ಪ ಸುಂಕದ್, ಶರಣಪ್ಪ ಗದ್ದಿ ಇತರರು ಇದ್ದರು.