Advertisement
ಹಾಯ್ ನಾನ್ನ ಚಿತ್ರ ಗಂಡ- ಹೆಂಡತಿ, ಮಗಳು, ಅತ್ತೆ -ಮಾವ, ಸ್ನೇಹಿತರೆಂಬ ಸಂಬಂಧಗಳ ಮಹತ್ವವನ್ನು ಪ್ರೇಕ್ಷಕರಿಗೆ ತಿಳಿಯಪಡಿಸುತ್ತದೆ.ತೆಲುಗಿನ ನಟ ನಾನಿ ಅವರು ತಂದೆಯ ಪಾತ್ರದಲ್ಲಿ , ಗಂಡನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ.
Related Articles
Advertisement
ಹಾಯ್ ನಾನ್ನ ಚಿತ್ರದ ಸಂಗೀತ ಇಂಪಾಗಿದ್ದು, ಹೊಸತನದಿಂದ ಕೂಡಿದೆ, ಸಂಗೀತ ನಿರ್ದೇಶಕ ಖುಷಿ ಚಿತ್ರದ ಹೇಮೆಶ್ ಸಂಗೀತ ಚಿತ್ರದ ಯಶಸ್ಸಿಗೆ ಮತ್ತೂಂದು ಪ್ರಮುಖ ಅಂಶವೆಂದರೆ ತಪ್ಪಾ³ಗಲಾರದು. ಪ್ರೀತಿಸಿ ಮದುವೆಯಾದ ಜೋಡಿ ಸಣ್ಣ ಮನಸ್ತಾಪದಿಂದ ದೂರಾಗಿ, ಅಪಘಾತದಲ್ಲಿ ನೆನಪು ಕಳೆದುಕೊಳ್ಳುವ ನಾಯಕಿ ಮತ್ತೂಮ್ಮೆ ಎರಡನೆ ಬಾರಿ ನಾಯಕನ ಕತೆ ಕೇಳಿ, ಮುಗ್ಧ ಮಗುವಿನ ಪ್ರೀತಿಗಾಗಿ ತನ್ನ ಗಂಡನ್ನನೇ ಪ್ರೀತಿಸುವ ಕಥೆ ಹೊಸದಾಗಿದೆ.
ಹಾಯ್ ನಾನ್ನ ಚಿತ್ರ ಹೊಸತನದಿಂದ ಕೂಡಿದ್ದು, ಸದಭಿರುಚಿಯ ಪ್ರೇಕ್ಷಕರರಿಗೆ ಮನೋರಂಜನೆ ನೀಡುವುದು ಖಾತ್ರಿ. ಭಾವನೆಗಳಿಗೆ ಭಾಷೆಯ ಹಂಗು ಇರುವುದಿಲ್ಲ. ಕೌಟುಂಬಿಕ ಚಿತ್ರವಾದ ಹಾಯ್ ನಾನಿ ಗಂಡ -ಹೆಂಡತಿ- ಮಗುವಿನ ನಡುವೆಯಿರುವ ಭಾವನೆಗಳ ಕುರಿತಾದ ಚಿತ್ರವಾಗಿದ್ದು, ಇದನ್ನು ನೋಡುವ ಮೂಲಕ ಸಮಾಜದಲ್ಲಿನ ವಿವಾಹ ವಿಚ್ಛೇದನ ಮನಸ್ಸು ಮಾಡುವ ಇತ್ತೀಚಿನ ಜನಾಂಗಕ್ಕೆ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಅನ್ಯೂನ್ಯವಾಗಿದ್ದರೆ ಎಲ್ಲವೂ ಸಾಧ್ಯವೆಂಬ ಒಂದೊಳ್ಳೆ ಸಾಮಾಜಿಕ ಸಂದೇಶ ನೀಡುವ ಸಿನೆಮಾ ಇದಾಗಿದೆ.
-ರಾಸುಮ ಭಟ್
ವಿ.ವಿ., ಚಿಕ್ಕಮಗಳೂರು