Advertisement

ಏನು ಬೇಕಾದರೂ ಪ್ರಕಟಿಸುತ್ತಾರೆ: ರಾಜೀನಾಮೆ ಸುದ್ದಿಗೆ ಬಿಹಾರ ಸಿಎಂ ನಿತೀಶ್ ಕಿಡಿ

03:32 PM Apr 04, 2022 | Team Udayavani |

ಪಾಟ್ನಾ: ರಾಜ್ಯಸಭೆಗೆ ಆಯ್ಕೆಯಾಗುವ ಸಲುವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನವನ್ನು ತ್ಯಜಿಸುವ ಕುರಿತು ಮಾಧ್ಯಮ ಊಹಾಪೋಹಗಳನ್ನು ಸೋಮವಾರ ತಳ್ಳಿಹಾಕಿದ್ದು, ”ಅವರು ಏನು ಬೇಕಾದರೂ ಪ್ರಕಟಿಸುತ್ತಾರೆ, ಅದನ್ನು ಓದಿದ ನಂತರ ನನಗೂ ಆಶ್ಚರ್ಯವಾಗುತ್ತದೆ” ಎಂದು ಹೇಳಿದ್ದಾರೆ.

Advertisement

ನಿತೀಶ್ ನಾಯಕತ್ವದ ಪಕ್ಷ ಜನತಾ ದಳ (ಯುನೈಟೆಡ್) ಕೂಡ, ಅವರು ಮೇಲ್ಮನೆಗೆ ಹೋಗುತ್ತಾರೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದೆ. ನಿತೀಶ್ ಕುಮಾರ್ ಎಲ್ಲಿಯೂ ಹೋಗುತ್ತಿಲ್ಲ ಮತ್ತು ಬಿಹಾರದ ಜನರ ಸೇವೆಯನ್ನು ಮುಂದುವರಿಸುತ್ತಾರೆ ಎಂದು ಜೆಡಿಯು ನಾಯಕ ಮತ್ತು ಬಿಹಾರ ಸಚಿವ ಸಂಜಯ್ ಕುಮಾರ್ ಝಾ ಅವರು ಟ್ವೀಟ್ ಮಾಡಿದ್ದಾರೆ.

ಸಂಸತ್ತಿನ ಮೇಲ್ಮನೆಗೆ ಕಳುಹಿಸಲು ಬಿಜೆಪಿ ಬಯಸಿದರೆ ನಿಮ್ಮ ನಿಲುವು ಏನು ಎಂಬ ಪ್ರಶ್ನೆಗೆ ಮಾರ್ಚ್ 30 ರಂದು ಕುತೂಹಲಕಾರಿಯಾಗಿ, ಕುಮಾರ್ ಅವರು ರಾಜ್ಯಸಭೆಗೆ ಹೋಗುವ ತಮ್ಮ ಆಸೆ ಇನ್ನೂ ಈಡೇರಿಲ್ಲ ಎಂದು ಹೇಳಿದ್ದರು.

ಜುಲೈನಲ್ಲಿ ಬಿಹಾರದ ಆರು ರಾಜ್ಯಸಭಾ ಸ್ಥಾನಗಳು ತೆರವಾಗುತ್ತಿದ್ದು, ಅವುಗಳಲ್ಲಿ ಎರಡು ಜೆಡಿಯು ನದ್ದಾಗಿದ್ದು, ಉಳಿದ ನಾಲ್ವರಲ್ಲಿ ಇಬ್ಬರು ಬಿಜೆಪಿ ಮತ್ತು ಒಬ್ಬರು ಆರ್‌ಜೆಡಿಯವರಾಗಿದ್ದಾರೆ. ಒಂದು ಸ್ಥಾನವು ಆರ್‌ಜೆಡಿಗೆ ಸೇರಿರುವ ಶರದ್ ಯಾದವ್‌ಗೆ ಸೇರಿದ್ದು, ಅವರನ್ನು ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅನರ್ಹಗೊಳಿಸಲಾಗಿದ್ದು, ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next