Advertisement

ರೀ, ಸ್ವಲ್ಪ ಇಲ್ನೋಡಿ..!‌ಕೃಷಿ ಬೆಳಕು; ರೈತರ ಪಾಲಿನ ಹೊಂಬೆಳಕು

02:40 PM Jul 31, 2023 | Team Udayavani |

ಸಾವಯವ ಕೃಷಿ, ನೈಸರ್ಗಿಕ ಬೇಸಾಯ, ಹೈನುಗಾರಿಕೆ, ಅರಣ್ಯ ಕೃಷಿ ಕುರಿತು ಒಲವು ಹೊಂದಿರುವವರಿಗೆ ನೈಜ ಮಾಹಿತಿ ಹಾಗೂ ಸಲಹೆ ನೀಡುವ ಯುಟ್ಯೂಬ್‌ ಚಾನೆಲ್‌ ಒಂದಿದೆ. ಅದರ ಹೆಸರೇ “ಕೃಷಿ ಬೆಳಕು’ ಯೂಟ್ಯೂಬ್‌ ಚಾನೆಲ್‌.

Advertisement

ಮೂಲತಃ ಶಿವಮೊಗ್ಗದವರಾದ ಬಾಬು ಅವರು 2020ರಲ್ಲಿ ಈ ಚಾನೆಲ್‌ ಅನ್ನು ಆರಂಭಿಸಿದರು. ಸದ್ಯ 2.2 ಲಕ್ಷ ಮಂದಿ ಸಬ್‌ಸೆð„ಬರ್‌ಗಳನ್ನು ಹೊಂದಿದ್ದು, ಇದುವರೆಗೆ 380 ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ. ಈ ಚಾನೆಲ್‌ನಲ್ಲಿ ಗಾಣದ ಎಣ್ಣೆ ತಯಾರಿಕೆ, ಸ್ವದೇಶಿ ಮತ್ತು ವಿದೇಶಿ ತಳಿಯ ವಿವಿಧ ಹಣ್ಣುಗಳನ್ನು ಬೆಳೆಯುವುದು ಹೇಗೆ? ಕುರಿ, ಮೇಕೆ, ನಾಟಿ ಕೋಳಿ, ಹಂದಿ ಸಾಕಾಣಿಕೆ ಮಾಡು­ವುದು ಹೇಗೆ ಎಂಬುದನ್ನು ವಿವರಿಸುವ ಸಾಕಷ್ಟು ವಿಡಿಯೋಗಳಿವೆ.

ಸಿರಿಧಾನ್ಯ, ಸಹಜ ಕೃಷಿ, ಸಾವಯವ ಕೃಷಿ ಚಟುವಟಿಕೆಗಳ ಬಗ್ಗೆಯೂ ಉತ್ತಮ ಮಾಹಿತಿ­ಯನ್ನು ಈ ಚಾನೆಲ್‌ ಒದಗಿಸುತ್ತಿದೆ. ಈ ಚಾನೆಲ್‌ನ ವಿಶೇಷ ಏನೆಂದರೆ- ನೇರವಾಗಿ ತೋಟಗಳಿಗೆ ಭೇಟಿ ನೀಡಿ ರೈತರಿಂದಲೇ ವಿಚಾರಗಳನ್ನು ಪ್ರಚುರ­ಪಡಿಸು­ತ್ತಾರೆ. ರೈತರ ಸಮಗ್ರ ಅಭಿವೃದ್ಧಿ, ಯುವಕರು ಬೇಸಾಯದಲ್ಲಿ ತೊಡಗಿಕೊಂಡು ಸುಸ್ಥಿರ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವುದು, ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಕೃಷಿ ಸಾಧಕರು, ವಿಜ್ಞಾನಿಗಳು ಹಾಗೂ ತಜ್ಞರಿಂದ ಸಮಗ್ರ ಮಾಹಿತಿ ಒದಗಿಸುವುದೇ ಈ ಚಾನೆಲ್‌ನ ಮುಖ್ಯ ಉದ್ದೇಶವಾಗಿದೆ.

*ಪರಮ್‌ ಆರುಂಡಿ

Advertisement

Udayavani is now on Telegram. Click here to join our channel and stay updated with the latest news.

Next