ಮುಂಬಯಿ: ಮೊದಲ ಮಗುವಿನ ಜನನದ ಬಳಿಕ ಗಯಾನಾಕ್ಕೆ ಮರಳಿದ್ದ ರಾಜಸ್ಥಾನ ರಾಯಲ್ಸ್ ತಂಡದ ವೆಸ್ಟ್ ಇಂಡೀಸ್ ನ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಮರಳಿದ್ದು, ಕ್ವಾರಂಟೈನ್ ನಲ್ಲಿದ್ದು ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಲಿದ್ದಾರೆ.
ಶುಕ್ರವಾರ ನಡೆಯಲಿರುವ ತಮ್ಮ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದ ಪಂದ್ಯಕ್ಕೆ ಹೆಟ್ಮೆಯರ್ ಲಭ್ಯವಾಗುವ ಸಾಧ್ಯತೆ ಇದೆ. ದಿಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಗಳನ್ನು ಮಿಸ್ ಕೊಂಡಿದ್ದರು.
ಹೆಟ್ಮೆಯರ್ ಐಪಿಎಲ್ 2022 ರಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 72.75 ರ ಅದ್ಭುತ ಸರಾಸರಿ ಮತ್ತು 166.28 ಸ್ಟ್ರೈಕ್ ರೇಟ್‌ನಲ್ಲಿ 291 ರನ್ ಗಳಿಸುವ ಮೂಲಕ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.
ಪತ್ನಿ ನಿರ್ವಾಣಿ ಅವರಿಗೆ ಹೆರಿಗೆಯಾದ ವಿಚಾರ ತಿಳಿದು ಬಾಣಂತಿ ಮತ್ತು ಮಗುವನ್ನು ನೋಡುವ ಸಲುವಾಗಿ ತುರ್ತಾಗಿ ಹೆಟ್ಮೆಯರ್ ತೆರಳಿದ್ದರು.
ಲಕ್ನೋ ಸೂಪರ್ ಜೈಂಟ್ಸ್ ಅನ್ನು 24 ರನ್‌ಗಳಿಂದ ಸೋಲಿಸಿ ರಾಯಲ್ಸ್ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.