Advertisement

ಹೆಸ್ಕಾಂ ಅಧಿಕಾರಿಗಳೇ ಎಚ್ಚರ ವಹಿಸಿ

01:01 PM Jul 05, 2019 | Suhan S |

ನವಲಗುಂದ: ಕಬ್ಬಿಣದ ವಿದ್ಯುತ್‌ ಕಂಬಗಳನ್ನು ಬದಲಾಯಿಸಬೇಕೆಂಬ ಸರ್ಕಾರದ ಸುತ್ತೋಲೆ ಇದ್ದರೂ ಹೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಜನನಿಬಿಡ ಪ್ರದೇಶಗಳಲ್ಲಿ ಕಬ್ಬಿಣದ ಕಂಬಗಳು ಇನ್ನೂ ಹಾಗೇ ಉಳಿದುಕೊಂಡಿವೆ.

Advertisement

ಪಟ್ಟಣದ ಭೋವಿ ಓಣಿಯಲ್ಲಿ ನಾಲ್ಕು ಕಬ್ಬಿಣದ ಕಂಬಗಳು ರಸ್ತೆಯಂಚಿನಲ್ಲಿವೆ. ಅವುಗಳನ್ನು ಬದಲಾಯಿಸುವ ಕೆಲಸಕ್ಕೆ ಹೆಸ್ಕಾಂ ಅಧಿಕಾರಿಗಳು ಮನಸ್ಸು ಮಾಡಿಲ್ಲ. ನಾಲ್ಕು ಕಬ್ಬಿಣದ ಕಂಬಗಳಲ್ಲಿ ಕೆಲವೊಂದು ಕೆಳಭಾಗದಲ್ಲಿಯೇ ತುಕ್ಕು ಹಿಡಿದು ಬೀಳುವ ಪರಿಸ್ಥಿತಿಯಲ್ಲಿವೆ. ಒಂದು ಕಂಬ ಮನೆ ಪಕ್ಕಕ್ಕೇ ಇದ್ದು, ಚಿಕ್ಕ ಮಕ್ಕಳು, ಸಾರ್ವಜನಿಕರಿಗೆ ತೊಂದರೆ ತಪ್ಪಿದ್ದಲ್ಲ. ಹೆಸ್ಕಾಂ ಅಧಿಕಾರಿಗಳು ಯಾವುದೇ ಪ್ರಾಣಹಾನಿ ಸಂಭವಿಸುವುದಕ್ಕಿಂತ ಮುಂಚೆಯೇ ಎಚ್ಚರ ವಹಿಸಬೇಕಿದೆ. ಪಟ್ಟಣ ಮಾತ್ರವಲ್ಲದೇ ತಾಲೂಕಿನಲ್ಲಿ ಕೆಲವೆಡೆ ಕಬ್ಬಿಣದ ವಿದ್ಯುತ್‌ ಕಂಬಗಳು ಹಾಗೇ ಉಳಿದಿದ್ದು, ಬದಲಾವಣೆಗೆ ತುರ್ತು ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next