Advertisement

ಪ್ಯಾಸೆಂಜರ್‌ ರೈಲು ಆರಂಭಕ್ಕೆ ಹಿಂದೇಟು

12:11 AM Jan 11, 2021 | Team Udayavani |

ಮಂಗಳೂರು: ಕಾಸರಗೋಡು- ಮಂಗಳೂರು ಮತ್ತು ಮಡಗಾಂವ್‌ – ಮಂಗ ಳೂರು ಮಧ್ಯೆ ಸಂಚರಿಸುತ್ತಿದ್ದ ಪ್ಯಾಸೆಂಜರ್‌ ರೈಲುಗಳನ್ನು ಪುನರಾರಂಭಿಸಲು ರೈಲ್ವೇ ಮಂಡಳಿ ಇನ್ನೂ ಅನುಮತಿ ನೀಡಿಲ್ಲ. ಇದರಿಂದ ಕರಾವಳಿ ಭಾಗದ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಕೋವಿಡ್ ಅಡ್ಡಿ :

ಕಡಿಮೆಯಾಗಿ ಜನ ಜೀವನ ಬಹು ತೇಕ ಸಹಜ ಸ್ಥಿತಿಯತ್ತ ಮರಳುತ್ತಿದೆ. ಸ್ಥಗಿತ ಗೊಂಡಿರುವ ರೈಲುಗಳನ್ನು ವಿಶೇಷ ರೈಲು ಗಳಾಗಿ ಓಡಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಈ ಹಿಂದೆ ಇದ್ದ ಏಳು ಸಬರ್ಬನ್‌ ರೈಲು ಗಳನ್ನು ಡಿ. 8ರಿಂದ ಪ್ರಾರಂಭಿಸಲಾಗಿದೆ. ಆದರೆ ಕಾಸರಗೋಡು ಮತ್ತು ರಾಜ್ಯದ ಕರಾವಳಿಯ ಜನರಿಗೆ ಅತೀ ಉಪಯುಕ್ತವಾಗಿದ್ದ ಮತ್ತು ತೀರಾ ಅವಶ್ಯವಾಗಿರುವ ಪ್ಯಾಸೆಂಜರ್‌ ರೈಲುಗಳನ್ನು ಪುನರಾರಂಭಿಸಲು ರೈಲ್ವೇ ಮಂಡಳಿ ಹಿಂದೇಟು ಹಾಕುತ್ತಿದೆ. ಇದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ಲರಿಗೂ ಅನುಕೂಲಕರ :

ಮಂಗಳೂರು-ಮಡಗಾಂವ್‌ ಡೆಮು, ಪ್ಯಾಸೆಂಜರ್‌ ರೈಲುಗಳು ಈ ಭಾಗದವರಿಗೆ ಉಪಯುಕ್ತವಾಗಿದ್ದವು.

Advertisement

ಮಡಗಾಂವ್‌-ಮಂಗಳೂರು ಸೆಂಟ್ರಲ್‌ ಡೆಮು :

ಪ್ರಯಾಣ: ಬೆಳಗ್ಗೆ 5ಕ್ಕೆ ಮಡಗಾಂವ್‌ನಿಂದ ಹೊರಟು ಮಧ್ಯಾಹ್ನ 12.05ಕ್ಕೆ ಮಂಗಳೂರು ಸೆಂಟ್ರಲ್‌.

ಮರುಪ್ರಯಾಣ: ಅಪರಾಹ್ನ 2.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ರಾತ್ರಿ 10.30ಕ್ಕೆ ಮಡಗಾಂವ್‌

ಮಂಗಳೂರು-ಮಡಗಾಂವ್‌ ಪ್ಯಾಸೆಂಜರ್‌ ರೈಲು :

ಪ್ರಯಾಣ: ಬೆಳಗ್ಗೆ 5.30ಕ್ಕೆ ಮಂಗಳೂರಿನಿಂದ ಹೊರಟು ಅಪರಾಹ್ನ 12.40ಕ್ಕೆ ಮಡಗಾಂವ್‌.

ಮರುಪ್ರಯಾಣ: ಅಪರಾಹ್ನ 1ಕ್ಕೆ ಮಡಗಾಂವ್‌ನಿಂದ ಹೊರಟು ರಾತ್ರಿ 9.20ಕ್ಕೆ ಮಂಗಳೂರು.

ಪ್ರಯೋಜನ: ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯೋಗಿಗಳು.

ಪ್ರಯಾಣಿಕರಿಗೆ ಆರ್ಥಿಕ ಹೊರೆ :

ಚೆರ್ವತ್ತೂರು -ಮಂಗಳೂರು, ಕಣ್ಣೂರು- ಮಂಗಳೂರು ಪ್ಯಾಸೆಂಜರ್‌ ರೈಲುಗಳು ವಿದ್ಯಾರ್ಥಿ ಗಳಿಗೆ,ಉದ್ಯೋಗಿಗಳಿಗೆ, ವ್ಯಾಪಾರ, ವ್ಯವಹಾರ ಉದ್ದೇಶಕ್ಕೆ ಬರುವವರಿಗೆ ಅನುಕೂಲಕರವಾಗಿತ್ತು. ಆದರೆ ಪ್ಯಾಸೆಂಜರ್‌ ರೈಲುಗಳು ಆರಂಭಗೊಳ್ಳದೆ ವಿದ್ಯಾರ್ಥಿಗಳು ಹೆಚ್ಚು ಹಣ ವ್ಯಯಿಸಿ ಬಸ್‌ ಸಂಚಾರ ನಡೆಸಬೇಕಿದೆ. ಇಲ್ಲವಾದರೆ ಮಂಗಳೂರಿನಲ್ಲೇ ಹಾಸ್ಟೆಲ್‌, ಪಿಜಿಗಳಲ್ಲಿ ಉಳಿಯುವ ಪರಿಸ್ಥಿತಿ ಎದುರಾಗಿದೆ. ಈ ಮಾರ್ಗದಲ್ಲಿ ಕೆಲವು ವಿಶೇಷ ರೈಲುಗಳು ಸಂಚರಿಸುತ್ತಿವೆ ಯಾದರೂ ಸೀಮಿತ ನಿಲ್ದಾಣಗಳಲ್ಲಷ್ಟೇ ನಿಲುಗಡೆ ಹೊಂದಿವೆ. ಅವುಗಳಿಗೆ ಕೌಂಟರ್‌ ಟಿಕೆಟ್‌ ಸಿಗುವುದಿಲ್ಲ.

ಕಾಸರಗೋಡಿನಿಂದ ಮಂಗಳೂರಿಗೆ ದಿನಂಪ್ರತಿ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಪ್ಯಾಸೆಂಜರ್‌ ರೈಲುಗಳನ್ನೇ ಆಶ್ರಯಿಸಿದ್ದರು. ಸಾರ್ವಜನಿಕರಿಗೂ ಪ್ರಯೋಜನಕಾರಿಯಾಗಿತ್ತು. ಈಗ ಶಾಲೆ-ಕಾಲೇಜುಗಳು ಆರಂಭಗೊಂಡಿವೆ. ಸದ್ಯದಲ್ಲೇ ಪಾಲಾ^ಟ್‌ ವಿಭಾಗದ ರೈಲ್ವೇ ಬಳಕೆದಾರರ ಸಮಿತಿ ಸಭೆ ನಡೆಯುವ ಸಾಧ್ಯತೆಗಳಿದ್ದು, ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಈ ರೈಲುಗಳ ಸಂಚಾರವನ್ನು ಕೂಡಲೇ ಮರು ಆರಂಭಿಸುವಂತೆ ಬೇಡಿಕೆ ಮಂಡಿಸುತ್ತೇನೆ.  - ಹನುಮಂತ ಕಾಮತ್‌, ಪಾಲ್ಘಾಟ್‌ ವಿಭಾಗ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next