Advertisement

ಪರೀಕ್ಷೆಗೆ ಹಿಂದೇಟು; ಸೋಂಕು ಹೆಚ್ಚಳ

02:42 PM Oct 05, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್‌-19 ಸೋಂಕು ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಜನ ಪರೀಕ್ಷೆಗೆ ಒಳಪಡಲು ನಿರಾಕರಿಸುತ್ತಿದ್ದಾರೆ. ಇದು ಮಹಾಮಾರಿ ಮತ್ತಷ್ಟು ಹರಡಲು ಪರೋಕ್ಷವಾಗಿ ಕಾರಣವಾಗುತ್ತಿದ್ದು, ಬಿಬಿಎಂಪಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

Advertisement

ನಿತ್ಯ ದಾಖಲಾಗುವ ಸೋಂಕಿತ ಪ್ರಕರಣಗಳಿಗೆ ಹೋಲಿಸಿದರೆ, 2-3ಪಟ್ಟು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸಂಖ್ಯೆ ವರದಿ ಆಗುತ್ತಿದೆ. ಪಾಲಿಕೆ ನೀಡಿದ ಅಂಕಿ-ಅಂಶಗಳ ಪ್ರಕಾರವೇಕ್ರಮವಾಗಿ 6.76 ಲಕ್ಷ ಹಾಗೂ 8.08 ಲಕ್ಷ ಇದ್ದಾರೆ. ಇದರಲ್ಲಿ ಶೇ.50ರಷ್ಟು ಜನ ಪರೀಕ್ಷೆಗೊಳಪಡಲು ನಿರಾಕರಿಸುತ್ತಿದ್ದಾರೆ. ಈ ಪೈಕಿ ಬಹುತೇಕರು ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಹೊಂದಿದವರಾಗಿ ದ್ದಾರೆ.ಇದರಲ್ಲಿಕೆಲವರಿಗೆ ತಮಗರಿವಿಲ್ಲದೆ ಸೋಂಕು ಇರಬಹುದು ಅಥವಾ ಇಲ್ಲದೆಯೂ ಇರಬಹುದು. ಅದು ಪರೀಕ್ಷೆಯಿಂದ ದೃಢಪಡಬೇಕಿದೆ.

ಒಂದು ವೇಳೆ ಪಾಸಿಟಿವ್‌ ಇದ್ದರೆ, ಗೊತ್ತಿಲ್ಲದೆ ಅವರೆಲ್ಲಾ “ಸೋಂಕು ವಾಹಕ’ರಾಗುತ್ತಾರೆ. ಆಗತಮ್ಮವರಿಗೇ ವೈರಸ್‌ ತಗಲುವಿಕೆಗೆ ಕಾರಣವಾಗಬಹುದು. ಇದೇ ಕಾರಣಕ್ಕೆ ಪ್ರತಿ ದಿನ ನಿಯಂತ್ರಣ ಕೊಠಡಿ, ವೈದ್ಯಕೀಯ ಸಿಬ್ಬಂದಿ ಸೇರಿ ಕೊರೊನಾ ವಾರಿಯರ್‌ಗಳು ಪಾಲಿಕೆ ವ್ಯಾಪ್ತಿಗೆ ಬರುವ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಕರೆ ಮಾಡಿ, “ಪರೀಕ್ಷೆಗೆ ಗಂಟಲು ಮಾದರಿ ನೀಡಿದ್ದೀರಾ? ನೀಡಿಲ್ಲದಿದ್ದರೆ, ದಯವಿಟ್ಟು ಪರೀಕ್ಷೆಗೊಳ ಪಡಬೇಕು’ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಸಂಪರ್ಕಿತರು “ನಮಗೇನೂ ಲಕ್ಷಣಗಳಿಲ್ಲ. ನಮಗ್ಯಾಕೆ ಗಂಟುಬಿದ್ದಿದ್ದೀರಾ?’, “ನೀವೇನೂ ಮನೆ ಕಡೆ ಬರಬೇಡಿ, ನಾವೇ ಬಂದು ಟೆಸ್ಟ್‌ ಮಾಡಿಸಿಕೊಳ್ತೀವಿ’,”ಖಾಸಗಿಪ್ರಯೋಗಾಲಯದಲ್ಲಿ ಈಗಾಗಲೇ ಮಾದರಿ ಕೊಟ್ಟಿದ್ದು, ವರದಿ ಬಂದ್ಮೇಲೆ ತಿಳಿಸ್ತೀವಿ. ನೀವೇನೂ ಕರೆ ಮಾಡಬೇಡಿ’ ಎಂದು ಖಾರವಾಗಿ ಉತ್ತರಿಸುತ್ತಿದ್ದಾರೆ. ಇದನ್ನು ನಿರ್ವಹಿಸುವುದು ಬಿಬಿಎಂಪಿ ಅಧಿಕಾರಿಗಳಿಗೆ ಸವಾಲಾಗುತ್ತಿದೆ.

ಯಾವ ವರ್ಗ ಹೆಚ್ಚು?: ಹೀಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರು ಸಿದ್ಧ ಉಡುಪು ತಯಾರಿಕೆ ಕಾರ್ಖಾನೆಗಳು, ನಿರ್ಮಾಣ ಕಾಮಗಾರಿಯಲ್ಲಿನ ಕಾರ್ಮಿಕರು, ಬೀದಿ ಬದಿ ಮತ್ತು ಮಳಿಗೆಗಳಲ್ಲಿನ ವ್ಯಾಪಾರಿಗಳು ಇದ್ದಾರೆ. ನಿತ್ಯ ಸಾವಿರಾರು ಕರೆ ಮಾಡಲಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಜನರೇ ಮುಂದಾಗಿಲ್ಲ. ಒತ್ತಾಯಪೂರ್ವಕ ಪರೀಕ್ಷೆ ಆಗುವುದಿಲ್ಲ. ನಿಯಮದ ಪ್ರಕಾರ ವಾರದಲ್ಲಿ ಮೂರು ಬಾರಿ ಕರೆ ಮಾಡಬೇಕಾಗುತ್ತದೆ. ಪ್ರಕರಣಗಳು ಹೆಚ್ಚಿರುವುದರಿಂದ 14 ದಿನಗಳಲ್ಲಿ 3 ಬಾರಿ ಕರೆ ಮಾಡಿ, ಆರೋಗ್ಯ ವಿಚಾರಿಸಲಾಗುತ್ತಿದೆ. ಹೊರಗಡೆ ಎಲ್ಲಿಯೂ ಹೋಗಬಾರದು ಎಂದು ಸೂಚಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ. ಪರೀಕ್ಷೆಗೊಳಪಡದಿದ್ದರೆ ಸಂಪರ್ಕಿತರಿಗೆ ಸಮಸ್ಯೆ

ಆಗದಿರಬಹುದು. ಆದರೆ, ಅವರಲ್ಲಿ ಯಾರಿಗಾದರೂ ಸೋಂಕು ತಗುಲಿದ್ದರೆ, ಹಿರಿಯ ನಾಗರಿಕರು ಅಥವಾ ಮಕ್ಕಳು ಇರುತ್ತಾರೆ. ಆಗ ಆ ವರ್ಗಕ್ಕೆ ಸಮಸ್ಯೆ ಆಗಬಹುದು. ಹಾಗಾಗಿ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮೊಬೈಲ್‌ ಸಂಖ್ಯೆ ದಾಖಲಿಸಿಕೊಂಡು, ಜಿಪಿಎಸ್‌ ಮೂಲಕ ನಿಗಾ ಇಡಲಾಗಿದೆ. ಇದು ಕೂಡ ಸಮರ್ಪಕವಾಗಿ ಆಗುತ್ತಿಲ್ಲ. ಯಾಕೆಂದರೆ, ಕೆಲವರು ತಪ್ಪು ನಂಬರ್‌ ಅಥವಾ ಕಾಯಂ ಆಗಿ ಮನೆಯಲ್ಲಿರುವ ಸಂಖ್ಯೆ ಕೊಟ್ಟಿರುತ್ತಾರೆ. ಇನ್ನು ಹಲವರು ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿರುತ್ತಾರೆ. ಅಂತಹವರ ಟ್ರ್ಯಾಕ್‌ ಕಂಡುಹಿಡಿಯುವುದು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

Advertisement

ದುಡಿಮೆಗೆಕತ್ತರಿ ಭಯ? : ಸಂಪರ್ಕಿತರು, ರೋಗದ ಲಕ್ಷಣಗಳಿರುವವರು ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದಕ್ಕೆ ದುಡಿಮೆಗೆ ಕತ್ತರಿ ಬೀಳುತ್ತದೆ ಎನ್ನುವುದು ಪ್ರಮುಖ ಕಾರಣವಾಗಿದೆ. ಸಂಪರ್ಕಿತರಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗ ದೊಡ್ಡ ಸಂಖ್ಯೆ ಇದೆ. ನಿತ್ಯ ದುಡಿದು ಜೀವನ ನಡೆಸುವವರಾಗಿದ್ದಾರೆ. ಒಂದು ವೇಳೆ ವರದಿ ಪಾಸಿಟಿವ್‌ ಬಂದರೆ, ಎರಡು ವಾರ ಕ್ವಾರಂಟೈನ್‌ ಮಾಡಲಾಗುತ್ತದೆ. ಆಗ, ಕೆಲಸಕ್ಕೆ ಹೋಗದಿದ್ದರೆ ಮನೆ ನಡೆಸುವುದುಹೇಗೆ? ಅಗತ್ಯವಸ್ತುಗಳಿಗೆ ಏನು ಮಾಡುವುದು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಪಾಲಿಕೆಯಿಂದ ಅಗತ್ಯವಸ್ತುಗಳ ಪೂರೈಕೆ ಮಾಡಲಾಗುವುದು ಎಂದು ಹೇಳಿದರೂ, ಅದರ ಮೇಲೆ ನಂಬಿಕೆ ಇರುವುದಿಲ್ಲ. ಇನ್ನು ಕೆಲವರಿಗೆ ಕೆಲಸದ ಒತ್ತಡ ಇರುತ್ತದೆ. ಈಗಾಗಲೇ ಲಾಕ್‌ ಡೌನ್‌ನಿಂದ ಕೆಲ ಕಾರ್ಖಾನೆಗಳು ನಷ್ಟದಲ್ಲಿವೆ. ಈ ಹಿನ್ನೆಲೆಯಲ್ಲಿ ಪಾಸಿಟಿವ್‌ ಬಂದವರಿಗೆ 14 ದಿನಗಟ್ಟಲೆ ರಜೆಗೆ ಅಪಸ್ವರ ಕೇಳಿಬರುತ್ತದೆ. ಅಲ್ಲದೆ, ಕಾರ್ಮಿಕರಿಗೂ ಕೆಲಸದ ಹೊರೆ ಹೆಚ್ಚುತ್ತದೆ. ಕೆಲಸದಿಂದ ತೆಗೆದುಹಾಕಬಹುದು ಎಂಬ ಭಯವೂ ಇರುತ್ತದೆ. ಇದೆಲ್ಲವೂ ಹಿಂದೇಟಿಗೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಪರೀಕ್ಷೆಗೆ ನಿರಾಕರಿಸುತ್ತಿರುವವರನ್ನು ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ನಿಯಮಿತವಾಗಿ ಕರೆ ಮಾಡಿ, ಪರೀಕ್ಷೆ ಮಾಡಿಸಿಕೊಳ್ಳದಿದ್ದರೆ ಆಗಬಹುದಾದ ಸಮಸ್ಯೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.ಕೆಲವರು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಎನ್‌.ಮಂಜುನಾಥ ಪ್ರಸಾದ್‌, ಆಯುಕ್ತರು, ಬಿಬಿಎಂಪಿ

 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next