Advertisement

ಹರ್ಷ ಕೊಲೆ: ಜೈಲಿನ ಗೋಡೆಗೆ ತಲೆ ಜಜ್ಜಿಕೊಂಡು ಆರೋಪಿಗಳ ಹೈಡ್ರಾಮಾ

09:54 AM Apr 28, 2022 | Team Udayavani |

ಬೆಂಗಳೂರು: ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐದು ಮಂದಿ ಆರೋಪಿಗಳು ರಾಷ್ಟ್ರೀಯ ತನಿಖಾ ದಳ(ಎ ನ್‌ಐಎ)ದ ಅಧಿಕಾರಿಗಳ ಜತೆ ರಂಜಾನ್‌ ಮುಗಿಯುವ ತನಕ ಹೋಗುವುದಿಲ್ಲ ಎಂದು ಹೈಡ್ರಾಮಾ ಸೃಷ್ಟಿಸಿದಲ್ಲದೆ, ಜೈಲಿನ ಗೋಡೆಗೆ ತಲೆ ಜಜ್ಜಿಕೊಂಡು ರಂಪಾಟ ಮಾಡಿದ್ದಾರೆ.

Advertisement

ಆದರೂ ಎನ್‌ಐಎ ಅಧಿಕಾರಿಗಳು ಆರೋಪಿಗಳಾದ ರಿಹಾನ್‌ ಶರೀಫ್, ಮೊಹಮದ್‌ ಖ್ವಾಸಿಫ್, ಅಸೀಫ್ ಉಲ್ಲಾ ಖಾನ್‌, ಸೈಯ್ಯದ್‌ ಫಾರೂಕ್‌ ಮತ್ತು ರೋಷನ್‌ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ.

ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡುವಂತೆ ಕೋರ್ಟ್‌ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆಪಡೆ ಯಲು ಹೋದಾಗ, ಅವರೊಂದಿಗೆ ಹೋಗಲು ನಿರಾಕರಿಸಿದಲ್ಲದೆ, ರಂಜಾನ್‌ ಉಪವಾಸ ಮುಗಿಯುವರೆಗೂ ಎನ್‌ಐಎ ವಶಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಗೋಡೆ ಮತ್ತು ಕಿಟಕಿಗೆ ತಲೆ ಗುದ್ದಿಕೊಂಡಿದ್ದಾರೆ.

ಇದನ್ನೂ ಓದಿ:‘ಹಿಂದಿ ರಾಷ್ಟ್ರ ಭಾಷೆ ವಿವಾದ’; ಕಿಚ್ಚ ಸುದೀಪ್ ಗೆ ಕುಮಾರಸ್ವಾಮಿ ಬೆಂಬಲ

ಕೂಡಲೇ ಜೈಲಿನ ಸಿಬ್ಬಂದಿ ಎಲ್ಲರನ್ನು ತಡೆದರು. ಆಗ ಜೈಲಿನ ಅಧಿಕಾರಿಗಳು, ಆರೋಪಿಗಳ ಪರವಾಗಿ ಮಾತನಾಡಿದ್ದಾರೆ. ಅದರಿಂದ ಬೇಸರಗೊಂಡ ಎನ್‌ಐಎ ಅಧಿಕಾರಿಗಳು, ಇದು ನ್ಯಾಯಾಲಯ ಉಲ್ಲಂಘನೆಯಾಗುತ್ತದೆ. ಒಂದು ವೇಳೆ ತಪ್ಪಾದರೆ ನೀವು ಹೊಣೆ ಎಂದು ಲಿಖೀತ ರೂಪದಲ್ಲಿ ಬರೆದುಕೊಂಡುವಂತೆ ಕೋರಿದಾಗ, ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next