Advertisement

ಸಮಸ್ಯೆಗೆ ಸ್ಪಂದಿಸಲು ಹೆಸ್ಕಾಂ ಸಿದ್ಧ: ಶೇಖರ

11:05 AM Jul 21, 2019 | Suhan S |

ಅಥಣಿ: ಗ್ರಾಹಕ ಮತ್ತು ರೈತರ ಕುಂದು-ಕೊರತೆಗಳನ್ನು ಸರಿ ಪಡಿಸುವುದು ಹೆಸ್ಕಾಂನ ಕರ್ತವ್ಯವಾಗಿದ್ದು, ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಿದ್ಧ ಎಂದು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯ ಕಾರ್ಯನಿರ್ವಾಹಕ ಇಂಜಿನಿಯರ್‌ ಶೇಖರ ಬಹುರೂಪಿ ಹೇಳಿದರು.

Advertisement

ಹುಬ್ಬಳ್ಳಿ ವಿದ್ಯತ್‌ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನಾ ಅಥಣಿ ವಿಭಾಗದಲ್ಲಿ ಗ್ರಾಹಕರ ಕುಂದು-ಕೊರತೆ ಮತ್ತು ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

ಹೆಸ್ಕಾಂ ನಿಗಮದಿಂದ ವಿದ್ಯುತಿನ ಕುರಿತು ಮತ್ತು ಇದಕ್ಕೆ ಸಂಬಂಧಿಸಿದಂತೆ ಇನ್ನಿತರ ಯಾವುದೇ ಕೆಲಸಗಳಿಗೆ ನಿಗಮ ಮತ್ತು ಅಧಿಕಾರಿಗಳು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ಮುಂದೆಯೂ ಮಾಡುತ್ತಾರೆ. ನಿಗಮದವರಿಗೆ ಸಾರ್ವಜನಿಕರ ಮತ್ತು ರೈತರ ಸಹಕಾರ ಅಗತ್ಯವಾಗಿದೆ ಎಂದರು.

ಗ್ರಾಹಕರು ವಿದ್ಯುತ್‌ ಸಂಬಂಧಿತ ಸಮಸ್ಯೆಗಳನ್ನು ನಮ್ಮ ಬಳಿ ತೆಗೆದುಕೊಂಡು ಬಂದರೆ ಅಂಥವರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವುದರ ಜತೆಗೆ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.

ವಿದ್ಯುತ್‌ ಕಂಬಗಳಿಗೆ ಅಳವಡಿಸಿದ ಹಳೆ ವಾಯರ್‌ಗಳನ್ನು ಬದಲಾವಣೆ ಮಾಡಬೇಕು. ಮಾರ್ಗದಾಳಗಳು ಸ್ಥಾನಿಕ ಸ್ಥಳದಲ್ಲಿ ಇರುವಂತಾಗಬೇಕು. ಅಪಾಯ ಹಾಗೂ ಮುರಿಯುವ ಸ್ಥಿತಿಯಲ್ಲಿರುವ ವಿದ್ಯುತ್‌ ಕಂಬಗಳನ್ನು ತಕ್ಷಣ ಬದಲಾವಣೆ ಮಾಡಬೇಕು. ಪಟ್ಟಣದಲ್ಲಿರುವ ವಿದ್ಯುತ್‌ ಸಮಸ್ಯೆಗಳನ್ನು ಪರಿಹರಿಸುವಂತೆ ಸಭೆಯಲ್ಲಿದ್ದ ರೈತ ಮುಖಂಡರು ಒತ್ತಾಯಿಸಿದರು.

Advertisement

ಈ ವೇಳೆ ಅಧಿಕಾರಿಗಳಾದ ಎಸ್‌.ಎ. ಪಾರ್ಥನಹಳ್ಳಿ, ಎನ್‌.ಬಿ. ನೇಮನ್ನವರ, ವಿ.ಎ. ಘನಿ, ಟಕ್ಕನ್ನರ, ಮಲಕ್ಕಪ್ಪ, ಪಾರೀಶ ಶಿವಣ್ಣವರ, ಎಂ.ಸಿ. ತಾಂಬೂಳಿ, ರಾಜು ಜಂಬಗಿ ಸೇರಿದಂತೆ ಅನೇಕ ರೈತರು ಮತ್ತು ಗ್ರಾಹಕರು ಇದ್ದರು.

ನಾಳೆ ಹೆಸ್ಕಾಂ ಗ್ರಾಹಕರ ಸಭೆ:

 ಹೆಸ್ಕಾಂ ಗ್ರಾಮೀಣ ಉಪ ವಿಭಾಗ-2ರ ಬಾಳೇಕುಂದ್ರಿ ಶಾಖೆ ವ್ಯಾಪ್ತಿಗೆ ಬರುವ ಗ್ರಾಮಗಳ ಗ್ರಾಹಕರ ಸಭೆಯನ್ನು ಜು.22ರಂದು ಬೆಳಿಗ್ಗೆ 10ಗಂಟೆಗೆೆ ಪಂತ ಬಾಳೇಕುಂದ್ರಿಯ ಪಂತ ನಗರದ ಶಿವಾಲಯ ಮಂದಿರದಲ್ಲಿ ಆಯೋಜಿಸಲಾಗಿದೆ. ಮೊದಗಾ, ಪಂತ ಬಾಳೇಕುಂದ್ರಿ, ಹೋಣ್ಣಿಹಾಳ, ಸುಳೆಭಾವಿ, ಮಾರಿಹಾಳ ಕರಡಿಗುದ್ದಿ, ಸಾಂಬ್ರಾ, ತಾರಿಹಾಳ, ಚಂದನ ಹೊಸುರ, ಮಾವಿನಕಟ್ಟಿ, ಯದ್ದಲಭಾವಿಹಟ್ಟಿ, ಬಾಳೇಕುಂದ್ರಿ ಕೆಎಚ್ ಹಾಗೂ ಹಲಗಾ, ಬಸ್ತವಾಡ, ಕೊಂಡಸಕೊಪ್ಪ, ಶಗನಮಟ್ಟಿ, ಮಾಸ್ತಮರ್ಡಿ, ಬಸರಿಕಟ್ಟಿ, ಶಿಂಡೊಳ್ಳಿ, ಮುತಗಾ, ನಿಲಜಿ ಗ್ರಾಮದ ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next