Advertisement
ಕಿಂಡಿ ಅಣೆಕಟ್ಟಿಗೆ ಗ್ರಾಮಸ್ಥರಿಂದ ಹಲಗೆಗ್ರಾಮಕ್ಕೆ ಎದುರಾಗುವ ನೀರಿನ ಸಮಸ್ಯೆಯನ್ನು ಅರಿತು, ಇತ್ತೀಚೆಗೆ ವಾರಾಹಿ ಎಡದಂಡೆ ಕಾಲುವೆ ನೀರು ಹಾಯಿಸುವಿಕೆ ಆರಂಭವಾದ ಬಳಿಕ ಹೊಳೆಯಲ್ಲಿ ಮತ್ತೆ ನೀರು ಕಾಣುತ್ತಿದ್ದು ಇದನ್ನು ಸದ್ವಿನಿಯೋಗಿಸುವ ಉದ್ದೇಶದಿಂದ ಗ್ರಾಮಸ್ಥರು ಕಿಂಡಿ ಅಣೆಕಟ್ಟಿಗೆ ಅಡ್ಡ ಹಲಗೆ ಅಳವಡಿಸಿದ್ದಾರೆ.
ಕೊರ್ಗಿ ಹಾಗೂ ಹೆಸ್ಕಾತ್ತೂರು ಗ್ರಾಮದಲ್ಲಿ ಹರಿಯುತ್ತಿರುವ ವಾರಾಹಿ ಕಾಲುವೆ ನೀರಿನಿಂದಾಗಿ ಅಚಾÉಡಿ ಗ್ರಾಮದಲ್ಲೂ ನೀರಿನ ಸೆಲೆ ಹೆಚ್ಚಾಗಿದೆ. ಹಿಂದೆ ಎಪ್ರಿಲ್ ಹಾಗೂ ಮೇ ತಿಂಗಳ ಕೊನೆಯಲ್ಲಿ ಕೆಲವು ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಹಲವು ದೂರ ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದಲೂ ಈ ಭಾಗದಲ್ಲಿ ಹರಿಯುತ್ತಿರುವ ವಾರಾಹಿ ಕಾಲುವೆಯ ನೀರು ಹಾಗೂ ಕಿಂಡಿ ಅಣಿಕಟ್ಟಿನ ಸಮರ್ಪಕವಾದ ನಿರ್ವಹಣೆಯ ಫಲವಾಗಿ ಇಲ್ಲಿನ ಕೆರೆ ಬಾವಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡಿದೆ. ಹೆಸ್ಕಾತ್ತೂರಿನ ಸುತ್ತಮುತ್ತಲಿನ ಸುಮಾರು 138 ಹಾಗೂ ಮೂಡು ಕೊರ್ಗಿಯಲ್ಲಿ ಸುಮಾರು 60ಕ್ಕೂ ಅಧಿಕ ಮನೆಗಳಿಗೆ ಹೆಸ್ಕಾತ್ತೂರು ಹೊಳೆ ಸಮೀಪದಲ್ಲಿಯೇ ನಿರ್ಮಿಸಿದ ಬಾವಿಯಿಂದ ಓವರ್ ಹೆಡ್ ಟ್ಯಾಂಕ್‌ಗಳ ಮೂಲಕ ನೀರು ಸರಬರಾಗುತ್ತಿದೆ.
Related Articles
ವಾರಾಹಿ ಕಾಲುವೆ ನೀರು ಸಮರ್ಪಕವಾಗಿ ಸಂಗ್ರಹಿಸುವ ನಿಟ್ಟಿನಿಂದ ವೈಜ್ಞಾನಿಕವಾಗಿ ಕ್ರಮ ಕೈಗೊಂಡರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ . ನೀರಿನ ಸದ್ಬಳಕೆ ಮಾಡುವಲ್ಲಿ ಗ್ರಾಮಸ್ಥರ ಪಾತ್ರ ಬಹಳ ಮುಖ್ಯವಾಗಿದೆ.
– ಸುಧಾಕರ ಶೆಟ್ಟಿ,
ಪಿಡಿಒ, ಗ್ರಾ.ಪಂ. ಕೊರ್ಗಿ
Advertisement
ಅಂತರ್ಜಲ ಮಟ್ಟ ಏರಿಕೆ ಹೊಳೆಯಲ್ಲಿ ಹರಿಯುವ ವಾರಾಹಿ ಕಾಲುವೆ ನೀರಿಗೆ ಅಡ್ಡ ಹಲಗೆ ಅಳವಡಿ ಸಿದ ಪರಿಣಾಮವಾಗಿ ಕಳೆದ 2 ವರ್ಷಗಳಿಂದ ಹೆಸ್ಕಾತ್ತೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆರೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಏರಿಕೆ ಕಂಡಿದೆ.
– ಪ್ರಕಾಶ್ ಹೆಸ್ಕಾತ್ತೂರು, ಗ್ರಾಮಸ್ಥರು