Advertisement
1. ಹೆಸರುಕಾಳಿನ ಜ್ಯೂಸ್ಬೇಕಾಗುವ ಸಾಮಗ್ರಿ: ಹೆಸರುಕಾಳು-1 ಕಪ್, ತೆಂಗಿನತುರಿ-1/2 ಕಪ್, ಬೆಲ್ಲದ ತುರಿ-1/2 ಕಪ್, ಪುದಿನಾ ಸೊಪ್ಪು-8 ಕಡ್ಡಿ, ಏಲಕ್ಕಿ ಪುಡಿ-1/2 ಚಮಚ, ಲಿಂಬೆರಸ-1 ಚಮಚ, ಉಪ್ಪು-1/2 ಚಮಚ
ಬೇಕಾಗುವ ಸಾಮಗ್ರಿ: ಹೆಸರು ಕಾಳು-2 ಕಪ್, ಅರಿಶಿನ-1/4 ಚಮಚ, ಹುಣಸೆ ರಸ-1/4 ಕಪ್, ರಸಂ ಪುಡಿ-3 ಚಮಚ, ಬೆಲ್ಲದ ತುರಿ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಜೀರಿಗೆ-1 ಚಮಚ, ತೆಂಗಿನ ತುರಿ-1/4 ಕಪ್, ಕೊತ್ತಂಬರಿ ಸೊಪ್ಪು-3 ಚಮಚ.
Related Articles
Advertisement
3. ಹೆಸರು ಕಾಳು ಪರೋಟಬೇಕಾಗುವ ಸಾಮಗ್ರಿ: ಹೆಸರು ಕಾಳು-1/2 ಕಪ್, ಗೋಧಿ ಹಿಟ್ಟು-3 ಕಪ್, ಕೊತ್ತಂಬರಿ ಸೊಪ್ಪು-4 ಚಮಚ, ಗರಂ ಮಸಾಲೆ ಪುಡಿ-3 ಚಮಚ, ಜೀರಿಗೆ ಪುಡಿ-2 ಚಮಚ, ಎಣ್ಣೆ-1 ಕಪ್, ಉಪ್ಪು-ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಹೆಸರುಕಾಳನ್ನು ಬೇಯಿಸಿ, ಅರೆದು, ಗೋಧಿ ಹಿಟ್ಟು, ಅರ್ಧ ಕಪ್ ಎಣ್ಣೆ, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ ಪುಡಿ, ಜೀರಿಗೆ ಪುಡಿ, ಉಪ್ಪು, ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಹಿಟ್ಟಿನಿಂದ ಚಿಕ್ಕ ಉಂಡೆ ಮಾಡಿ, ಚಪಾತಿಯಾಕಾರದಲ್ಲಿ ಲಟ್ಟಿಸಿ. ಕಾವಲಿಯ ಮೇಲೆ, ಎಣ್ಣೆ ಇಲ್ಲವೇ ಬೆಣ್ಣೆ ಸವರಿ, ಎರಡೂ ಬದಿಗಳನ್ನು ಬೇಯಿಸಿದರೆ, ಹೆಸರುಕಾಳಿನ ಪರೋಟ ತಯಾರು. 4. ಹೆಸರು ಕಾಳಿನ ಬರ್ಫಿ
ಬೇಕಾಗುವ ಸಾಮಗ್ರಿ: ಮೊಳಕೆ ಕಟ್ಟಿದ ಹೆಸರು ಕಾಳು-1/2 ಕಪ್, ಸಕ್ಕರೆ-1/2 ಕಪ್, ತೆಂಗಿನ ತುರಿ-1 ಕಪ್, ಹಾಲು-1/2 ಕಪ್, ಏಲಕ್ಕಿ ಪುಡಿ-1/2 ಚಮಚ, ತುಪ್ಪ-1/2 ಕಪ್, ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಬಾದಾಮಿ. ಮಾಡುವ ವಿಧಾನ: ಮೊಳಕೆ ಕಟ್ಟಿದ ಹೆಸರುಕಾಳನ್ನು ಬೇಯಿಸಿ, ತರಿತರಿಯಾಗಿರುವಂತೆ ಅರೆಯಿರಿ. ಬಾಣಲೆಯಲ್ಲಿ ಮೂರು ಚಮಚ ತುಪ್ಪ ಕಾಯಿಸಿ, ಅರೆದಿಟ್ಟ ಹೆಸರುಕಾಳುಗಳನ್ನು ಹುರಿಯಿರಿ. ಅದಕ್ಕೆ, ತೆಂಗಿನತುರಿ, ಹಾಲು, ಸಕ್ಕರೆ ಸೇರಿಸಿ ಬಾಡಿಸಿ. ಆ ಮಿಶ್ರಣ ಗಟ್ಟಿಯಾಗುವವರೆಗೆ ನಡುನಡುವೆ ತುಪ್ಪ ಹಾಕಿ, ಮಗುಚುತ್ತಾ ಇರಿ. ಗಟ್ಟಿಯಾದ ಮೇಲೆ, ಏಲಕ್ಕಿ ಪುಡಿ, ಗೋಡಂಬಿ, ಬಾದಾಮಿ ತುಂಡುಗಳನ್ನು ಹಾಕಿ ಚೆನ್ನಾಗಿ ಬೆರೆಸಿ ಒಲೆಯಿಂದ ಕೆಳಗಿರಿಸಿ. ತುಪ್ಪ ಸವರಿದ ತಟ್ಟೆಗೆ ಮಿಶ್ರಣವನ್ನು ಸಮನಾಗಿ ಹರಡಿ. ತಣ್ಣಗಾದ ಮೇಲೆ, ಬೇಕಾದ ಆಕಾರದಲ್ಲಿ ಕತ್ತರಿಸಿ. 5. ಹೆಸರು ಕಾಳಿನ ಕಟ್ಲೆಟ್
ಬೇಕಾಗುವ ಸಾಮಗ್ರಿ: ಮೊಳಕೆ ಬಂದ ಹೆಸರು ಕಾಳು-1 ಕಪ್, ಬ್ರೆಡ್ ಸ್ಲೆ„ಸ್-6, ಅಕ್ಕಿ ಹಿಟ್ಟು-3 ಚಮಚ, ಹಸಿಮೆಣಸು- 6 ತುಂಡು, ಈರುಳ್ಳಿ-1/2 ಕಪ್, ಕೊತ್ತಂಬರಿ ಸೊಪ್ಪು, ತುರಿದ ಶುಂಠಿ-1 ಚಮಚ, ಗರಂ ಮಸಾಲ ಪುಡಿ-3 ಚಮಚ, ಉಪ್ಪು-ರುಚಿಗೆ, ಎಣ್ಣೆ-1/2 ಕಪ್, ಸಾಸಿವೆ, ಅರಿಶಿನ ಪುಡಿ, ಇಂಗು. ಮಾಡುವ ವಿಧಾನ: ಮೊಳಕೆ ಬಂದ ಹೆಸರು ಕಾಳುಗಳನ್ನು ಬೇಯಿಸಿ. ಬ್ರೆಡ್ ಸ್ಲೆ„ಸ್‌ಗಳನ್ನು ನೀರಿನಲ್ಲಿ ಅದ್ದಿ ತೆಗೆದು, ಕೈಯಿಂದ ಒತ್ತಿ ನೀರು ತೆಗೆದು, ಪುಡಿ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗು-ಅರಿಶಿನ ಹಾಕಿ ಒಗ್ಗರಣೆ ಕೊಡಿ. ಅದಕ್ಕೆ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಗರಂ ಮಸಾಲಾ ಹಾಕಿ ಚೆನ್ನಾಗಿ ಬಾಡಿಸಿ. ಪುಡಿ ಮಾಡಿಟ್ಟ ಬ್ರೆಡ್‌ಗೆ, ಬೇಯಿಸಿದ ಹೆಸರುಕಾಳು, ಬಾಡಿಸಿಟ್ಟ ತರಕಾರಿ, ಅಕ್ಕಿ ಹಿಟ್ಟು, ಉಪ್ಪು, ಶುಂಠಿ ಬೆರೆಸಿ ಚೆನ್ನಾಗಿ ಕಲಕಿ. ಈ ಮಿಶ್ರಣದಿಂದ ಲಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ, ವಡೆಯ ಆಕಾರದಲ್ಲಿ ತಟ್ಟಿ. ಕಾವಲಿಯ ಮೇಲೆ ಎಣ್ಣೆ ಸವರಿ, ಎರಡೂ ಬದಿಯನ್ನು ಹೊಂಬಣ್ಣ ಬರುವವರೆಗೆ ಬೇಯಿಸಿದರೆ ಕಟ್ಲೆಟ್ ರೆಡಿ. ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು