Advertisement

ದಿನ ಭವಿಷ್ಯ

08:13 AM Sep 10, 2021 | Team Udayavani |

ಮೇಷ: ಧೈರ್ಯ ಸಾಹಸ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿ. ಚರ್ಚೆಗೆ ಅವಕಾಶ ಮಾಡದಿರಿ. ಆರೋಗ್ಯ ವೃದ್ಧಿ. ನಿರೀಕ್ಷಿತ ಸ್ಥಾನ ಗೌರವಾದಿ ಪ್ರಾಪ್ತಿ. ಉತ್ತಮ ಧನಾರ್ಜನೆ. ವಾಹನಭೂಮಿಆಸ್ತಿವಿಚಾರದಲ್ಲಿ ಅಭಿವೃದ್ಧಿಯ ಬದಲಾವಣೆ

Advertisement

ವೃಷಭ: ಸ್ಥಿರ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಾದಿಗಳಲ್ಲಿ ಹೆಚ್ಚಿನ ಸ್ಥಾನಮಾನ ಗೌರವಾದಿಗಳು ಸಂಭವಿಸುವುವು. ಧನಾರ್ಜನೆಗೆ ಸರಿಯಾಗಿ ಖಚಿನ ದಾರಿ. ಸ್ವಾವಲಂಬನೆಯಿಂದಕಾರ್ಯ ಸಾಧಿಸಿದ ತೃಪ್ತಿ.

ಮಿಥುನ: ಜವಾಬ್ದಾರಿಯುತವಾದ ಉದ್ಯೋಗ ವ್ಯವಹಾರ. ಉತ್ತಮ ಧನಾರ್ಜನೆ ಹಾಗೂ ಅಧಿಕ ಲಾಭ ಸಂಗ್ರಹ. ಗುರುಹಿರಿಯರಿಂದ ಸರಿಯಾದ ಮಾರ್ಗದರ್ಶನ. ಅಧ್ಯಯನಶೀಲರಿಗೆ ವಿಪುಲ ಅವಕಾಶ. ಸಾಂಸಾರಿಕ ಸುಖವೃದ್ಧಿ

ಕರ್ಕ: ಭೂಮಿ ವಾಹನ ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಬಂಧುಬಳಗದವರಿಂದ ಪ್ರೋತ್ಸಾಹ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ಉತ್ತಮ ಧನ ಸಂಪಾದನೆ. ಗುರುಹಿರಿಯರ ಆರೋಗ್ಯ ಗಮನಿಸಿ. ಮನೆಯಲ್ಲಿ ಸಂತಸ

ಸಿಂಹ: ಆರೋಗ್ಯ ವೃದ್ಧಿ. ಹಲಾವರು ಗೊಂದಲಗಳಿಗೆ ಮುಕ್ತಿ ಕಾಣುವ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಧನಾರ್ಜನೆ. ಗೃಹೋಪಕರಣ ವಸ್ತುಗಳ ಸಂಗ್ರಹ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದಿಂದ ಸ್ಥಾನ ಪ್ರಾಪ್ತಿ.

Advertisement

ಕನ್ಯಾ: ದೀರ್ಘ‌ ಪ್ರಯಾಣ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೊಂದಾಣಿಕೆ ಅಗತ್ಯ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಪ್ರಗತಿ ಸಾಧಿಸಿರಿ. ಧನಾರ್ಜನೆಗೆ ಕೊರತೆಯಾಗದು. ಸಾಂಸಾರಿಕ ಸುಖವೃದ್ಧಿ. ಗುರುಹಿರಿಯರ ಆರೋಗ್ಯ ವೃದ್ಧಿ.

ತುಲಾ: ನಾನಾರೀತಿಯಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾದಿ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ಪರಸ್ಪರ ಪ್ರೋತ್ಸಾಹ ಸಹಕಾರ. ಉತ್ತಮ ಧನಾರ್ಜನೆ.ಅಧ್ಯಯನಶೀಲರಿಗೆಅನುಕೂಲಕರವಾತಾವರಣ

ವೃಶ್ಚಿಕ: ಆರೋಗ್ಯದ ಬಗ್ಗೆ ಉದಾಸೀನ ಸಲ್ಲದು. ದೈಹಿಕ ಶ್ರಮ ಅಧಿಕವಾದ್ದರಿಂದ ದೇಹಾಯಾಸ ತೋರೀತು. ದೀರ್ಘ‌ ಪ್ರಯಾಣ ಸಂಭವ. ಮನೆಯಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ.

ಧನು: ನಿರೀಕ್ಷೆಗೂ ಮೀರಿದ ಧನಾರ್ಜನೆ. ಉತ್ತಮ ವಾಕ್‌ಚತುರತೆಯಿಂದ ಕಾರ್ಯ ಸಾಧನೆ. ಗುರುಹಿರಿಯರ ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಸಣ್ಣ ಪ್ರಯಾಣ ಸಂಭವ. ಹೆಚ್ಚಿನ ಬದಲಾವಣೆಗೆ ಅವಕಾಶ. ದಾಂಪತ್ಯ ತೃಪ್ತಿದಾಯಕ.

ಮಕರ: ದೇಶ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ದೀರ್ಘ‌ ಸಂಚಾರ ಸಂಭವ. ಗೌರವಾದಿ ಪ್ರಾಪ್ತಿ. ಕೌಟುಂಬಿಕ ಸುಖ ವೃದ್ಧಿ. ಗೃಹೋಪಕರಣ ವಸ್ತುಗಳಿಗೆ ಖರ್ಚು. ಅಧ್ಯಯನಶೀಲರಿಗೆ ವಿಪುಲ ಅವಕಾಶ. ಆರೋಗ್ಯದಲ್ಲಿ ಪ್ರಗತಿ.

ಕುಂಭ: ಉತ್ತಮ ದೈಹಿಕ ಆರೋಗ್ಯ. ಧನಾರ್ಜನೆಗೆ ಸರಿಸಮವಾದ ಖರ್ಚು.ಆಸ್ತಿವಿಚಾರಗಳಲ್ಲಿಮುನ್ನಡೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಜವಾಬ್ದಾರಿ. ಗುರುಹಿರಿಯರಿಂದ ಉತ್ತಮ ಪ್ರೋತ್ಸಾಹ ಸಹಕಾರ ಮಾರ್ಗದರ್ಶನದ ಲಾಭ.

ಮೀನ: ಮನೆಯಲ್ಲಿ ಸಂತಸದ ವಾತಾವರಣ. ದೇವತಾಕಾರ್ಯಗಳಲ್ಲಿ ಆಸಕ್ತಿ. ದೂರದ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಗುರುಗಳ ಸಹಕಾರ ಮಾರ್ಗದರ್ಶನದ ಸುಖ. ಬೃಹತ್‌ ಸಮಯದಿಂದ ವಿಳಂಬಿತ ಕಾರ್ಯಗಳಲ್ಲಿ ಪ್ರಗತಿ.

Advertisement

Udayavani is now on Telegram. Click here to join our channel and stay updated with the latest news.

Next