Advertisement

ಹೆರಾಯಿನ್‌ ವಶ ಪ್ರಮಾಣ ಶೇ. 37 ಸಾವಿರ ಏರಿಕೆ

07:44 PM Dec 11, 2021 | Team Udayavani |

ನವದೆಹಲಿ: ದೇಶದಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಹೆರಾಯಿನ್‌ ವಶಪಡಿಸಿಕೊಳ್ಳುವ ಪ್ರಮಾಣ ಶೇ.37,000ಕ್ಕೆ ಏರಿಕೆಯಾಗಿದೆ.

Advertisement

ವಶಪಡಿಸಿಕೊಳ್ಳುವ ಪ್ರಮಾಣ 2018ರಲ್ಲಿ 8 ಕೆಜಿ ಇದ್ದದ್ದು, ಪ್ರಸಕ್ತ ವರ್ಷಕ್ಕೆ 3 ಸಾವಿರ ಕೆಜಿಗೆ ಏರಿಕೆಯಾಗಿದೆ.

ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ಮತ್ತು ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ)ಯ ಅಧಿಕಾರಿಗಳ ಪ್ರಕಾರ ತಾಲಿಬಾನ್‌ ಉಗ್ರರ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳು ದೇಶಕ್ಕೆ ಬರುತ್ತವೆ. ಇಲ್ಲಿಂದ ಜಗತ್ತಿನ ಇತರ ಭಾಗಗಳಿಗೆ ವ್ಯವಸ್ಥಿತವಾಗಿ ಪೂರೈಕೆಯಾಗುತ್ತಿದೆ. ಹೀಗಾಗಿ, ದೇಶ ಮಾದಕ ವಸ್ತುಗಳ ಪೂರೈಕೆಯ ರಹದಾರಿಯಾಗುವಂತಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ “ನ್ಯೂಸ್‌ 18′ ವರದಿ ಮಾಡಿದೆ.

ರಾಜ್ಯಗಳ ಮಟ್ಟದಲ್ಲಿನ ತನಿಖಾ ಸಂಸ್ಥೆಗಳೂ ಕೂಡ ಸ್ಥಳೀಯ ಮಟ್ಟದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಹೆಚ್ಚಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ ಎಂದು ಡಿಆರ್‌ಐ ಮತ್ತು ಎನ್‌ಸಿಬಿಯ ಹಿರಿಯ ಅಧಿಕಾರಿಗಳೇ ಹೇಳಿಕೊಂಡಿದ್ದಾರೆ ಎಂದು ಚಾನೆಲ್‌ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಫೀಮು ಬೆಳೆಯಲಾಗುತ್ತಿರುವುದೇ ಕಳ್ಳಸಾಗಣೆ ಹೆಚ್ಚಾಗಿರುವುದಕ್ಕೆ ಕಾರಣ. ವಿಶ್ವಸಂಸ್ಥೆಯ ಮಾದಕ ವಸ್ತುಗಳ ಮತ್ತು ಅಪರಾಧಗಳ ಮೇಲೆ ನಿಗಾ ಇರಿಸುವ ವಿಭಾಗ ನಡೆಸಿದ ಅಧ್ಯಯನದ ಪ್ರಕಾರ ಒಂದು ವರ್ಷದ ಅವಧಿಯಲ್ಲಿ ಅಫಿಮು ಬೆಳೆಯುವ ಪ್ರಮಾಣ ಅಫ್ಘಾನಿಸ್ತಾನದಲ್ಲಿ ಹೆಚ್ಚಾಗಿದೆ.

Advertisement

ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆ ಜಾರಿ ಖಚಿತ: ಈಶ್ವರಪ್ಪ

ಕಂದಾಯ ಗುಪ್ತಚರ ನಿರ್ದೇಶನಾಲಯ ನೀಡಿದ ಮಾಹಿತಿ ಪ್ರಕಾರ 2018-19ನೇ ಸಾಲಿನಲ್ಲಿ 7.98 ಕೆಜಿ ಹೆರಾಯ್ನ ವಶಪಡಿಸಿಕೊಳ್ಳಲಾಗಿತ್ತು. 2019-20ನೇ ಸಾಲಿನಲ್ಲಿ ಅದರ ಪ್ರಮಾಣ ಶೇ.27ಕ್ಕೆ ಹೆಚ್ಚಾಯಿತು. 2020-21ನೇ ಸಾಲಿನಲ್ಲಿ ಶೇ.2000 ಪ್ರಮಾಣಕ್ಕೆ ಏರಿಕೆಯಾಗಿದೆ-ಅಂದರೆ 202 ಕೆಜಿ ವಶ ಪಡಿಸಲಾಗಿದೆ.

ಭಾರತವೇ ಏಕೆ?
ಪಂಜಾಬ್‌ನ ನಿವೃತ್ತ ಡಿಜಿಪಿ ಶಶಿಕಾಂತ್‌ ಶರ್ಮಾ ಅವರ ಪ್ರಕಾರ ಇರಾನ್‌ ಮತ್ತು ಇರಾನ್‌ಗಳು ಹಿಂದಿನ ಸಂದರ್ಭಗಳಲ್ಲಿ ಮಾದಕ ವಸ್ತುಗಳ ಸಾಗಣೆಗೆ ಅತ್ಯುತ್ತಮ ರಹದಾರಿಯಾಗಿತ್ತು. ಈ ದಾರಿಗಳಲ್ಲಿ ಲೂಟಿ ಹೆಚ್ಚಾಯಿತು ಮತ್ತು ಆ ಎರಡು ದೇಶಗಳ ಮೇಲೆ ದಿಗ್ಬಂಧನ ವಿಧಿಸಿದ ಬಳಿಕ ಕಡಿಮೆಯಾಯಿತು. ಮತ್ತೊಂದು ಅಂಶವೆಂದರೆ ಪಾಕಿಸ್ತಾನ ಆ ದೇಶಗಳ ಜತೆಗೆ ಹೊಂದಿರುವ ಉತ್ತಮ ಬಾಂಧವ್ಯ ಕಳೆದುಕೊಳ್ಳಲು ತಯಾರಿಲ್ಲ. ಹೀಗಾಗಿ, ಅದರ ಮೂಲಕವೂ ದೇಶಕ್ಕೆ ಮಾದಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ. ಭಾರತದ ಮೂಲಕ ರವಾನೆಯಾಗುವ ಮಾದಕ ವಸ್ತುಗಳು ಐರೋಪ್ಯ ಒಕ್ಕೂಟಕ್ಕೆ ಕೊನೆಯದಾಗಿ ತಲುಪುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next