Advertisement

ಕಾರ್ಗಿಲ್‌ ವಿಜಯದ ಹೀರೋ ಇಂದು ಮಂಗಳೂರಿಗೆ

11:38 AM Apr 19, 2017 | Team Udayavani |

ಮಹಾನಗರ: ಕಾರ್ಗಿಲ್‌ ಆಪರೇಷನ್‌ ವಿಜಯದ ಹೀರೋ ಜನರಲ್‌ ವೇದ್‌ ಪ್ರಕಾಶ್‌ ಮಲಿಕ್‌ ಅವರು ಎ. 19ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. 

Advertisement

ಜನರಲ್‌ ಕಾರ್ಯಪ್ಪ ಅವರ ಬಳಿಕ ಸೇನಾ ಮುಖ್ಯಸ್ಥರಾಗಿದ್ದವರೋರ್ವರು ಮಂಗಳೂರಿಗೆ ಬರುತ್ತಿರುವುದು ಇದೇ ಮೊದಲು ಎನ್ನುವುದು ವಿಶೇಷ. ಸೇನೆಯಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸಿದ ಅವರು ಭಾರತೀಯ ಸೇನೆಯ 19ನೇ ಸೇನಾ ನಾಯಕ. 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಭಾರತೀಯ ಸೇನೆಯು ಪಾಕಿಸ್ಥಾನವನ್ನು ಹಿಮ್ಮೆಟ್ಟಿಸಿ ವಿಜಯ ಪತಾಕೆ ಹಾರಿಸಿದ್ದು ಮಲಿಕ್‌ ಅವರ ನೇತೃತ್ವದಲ್ಲಿ.  ಅದಕ್ಕಾಗಿಯೇ ಆಪರೇಷನ್‌ ವಿಜಯದ ಹೀರೋ ಎಂದೇ ಅವರನ್ನು ಕರೆಯಲಾಗುತ್ತದೆ.

ಕಿರಿ ವಯಸ್ಸಿನಲ್ಲಿ ಸೇನೆಗೆ
ಮಲಿಕ್‌ ಅವರು ಭಾರತೀಯ ಸೇನೆ ಸೇರಿದ್ದು 1959ರಲ್ಲಿ. ಆಗವರಿಗೆ 19 ವರ್ಷ. 41 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ 2,000ನೇ ಸಾಲಿನ ಸೆಪ್ಟಂಬರ್‌ 30ರಂದು ನಿವೃತ್ತಿಯಾದರು. ಅತ್ಯಂತ ಕಠಿನ ಭಾಗಗಳಲ್ಲಿ ತೆರಳಿ ಶತ್ರುಗಳೊಂದಿಗೆ ಹೋರಾಡಿದ ಹೆಮ್ಮೆ ಅವರದ್ದು. ಕೇಂದ್ರ ಸರಕಾರವು 1984ರಲ್ಲಿ ಅತಿ ವಿಶಿಷ್ಟ ಸೇವಾ ಮೆಡಲ್‌ ಮತ್ತು 1993ರಲ್ಲಿ ಪರಮ ವಿಶಿಷ್ಟ ಸೇವಾ ಮೆಡಲ್‌ ನೀಡಿ ಗೌರವಿಸಿದೆ. 

ಆಪರೇಷನ್‌ ವಿಜಯದ ನಂತರ ಎಕ್ಸೆಲೆನ್ಸ್‌ ಇನ್‌ ಲೀಡರ್‌ಶಿಪ್‌, ಡಿಸ್ಟಿಂಗ್ವಿಶ್‌x ಫೆಲೋಶಿಪ್‌, ಇನ್ಸ್‌ಟಿಟ್ಯೂಟ್‌ ಆಫ್‌ ಪ್ರçಡ್‌ ಆಫ್‌ ನೇಶನ್‌ನಂತಹ ಪ್ರಶಸ್ತಿ ಪುರಸ್ಕಾರಗಳು ಸಂದವು.

ನಾನಾ ಹುದ್ದೆ
ಮೂಲತಃ ನಾರ್ತ್‌ ವೆಸ್ಟ್‌ ಪ್ರಾಂತ್ಯದಲ್ಲಿ ಜನಿಸಿದ ಅವರು, ಅನಂತರ ಭಾರತದಲ್ಲೇ ನೆಲೆಯೂರಿ ಶಿಕ್ಷಣ ಪಡೆದರು. ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗಲೇ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಗೆ ಸೇರಿ, ಡೆಹ್ರಾಡೂನ್‌ನಲ್ಲಿ ಇಂಡಿಯನ್‌ ಮಿಲಿಟರಿ ಅಕಾಡೆಮಿಗೆ ಸೇವೆಗಾಗಿ ತೆರಳಿದರು. ಜಮ್ಮು ಕಾಶ್ಮೀರದಲ್ಲಿ ಬ್ರಿಗೇಡ್‌ ಕಮಾಂಡರ್‌, ಮೇಜರ್‌ ಜನರಲ್‌, 8ನೇ ಮೌಂಟನ್‌ ಡಿವಿಜನ್‌ ಕಮಾಂಡರ್‌ ಇತ್ಯಾದಿ ಹುದ್ದೆಗಳನ್ನು ಅಲಂಕರಿಸಿ, ಪಂಜಾಬ್‌ನಲ್ಲಿ ಲೆಫ್ಟಿನೆಂಟ್‌ ಜನರಲ್‌, 11ನೇ ಕೋರ್‌ನ ಮುಖ್ಯಸ್ಥರಾದರು. ಅನಂತರ ಭಡ್ತಿಗೊಂಡು ದಕ್ಷಿಣ ಕಮಾಂಡ್‌ನ‌ ಮುಖ್ಯಸ್ಥ, ಆರ್ಮಿಯ ವೈಸ್‌ ಚೀಫ್‌ ಆಗಿಯೂ ಕೆಲಸ ಮಾಡಿದರು. ಕಾರ್ಗಿಲ್‌ ಯುದ್ಧದ ವೇಳೆ 19ನೇ ಸೇನಾ ನಾಯಕನಾಗಿ ಸೇನೆಯನ್ನು ಮುನ್ನಡೆಸಿದರು.

Advertisement

ಸಂವಾದ ಕಾರ್ಯಕ್ರಮ
ಎ.19ರಂದು ಸಂಜೆ 6 ಗಂಟೆಗೆ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೇದ್‌ ಪ್ರಕಾಶ್‌ ಮಲಿಕ್‌ ಅವರು “ಕಾರ್ಗಿಲ್‌ ಯುದ್ಧ-1999′ ವಿಷಯದ ಕುರಿತು ವಿವರಿಸುವರು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅವರೊಂದಿಗೆ ಸಂವಾದ ನಡೆಸುವ ಅವಕಾಶವೂ ಇದ್ದು, 5.45ರ ಮೊದಲು ಸಭಾಂಗಣಕ್ಕೆ ಆಗಮಿಸಬೇಕು ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಬ್ರಿ | ಐ. ಎನ್‌. ರೈ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next