Advertisement

ಹೀರೋ ಇಂಡಿಯಾ ಗಾಲ್ಫ್ ಪಂದ್ಯಾವಳಿ ರದ್ದು

11:56 PM Jul 03, 2020 | Sriram |

ಹೊಸದಿಲ್ಲಿ: ಕೋವಿಡ್‌-19 ಹಿನ್ನೆಲೆಯಲ್ಲಿ 2020ರ ಹೀರೋ ಇಂಡಿಯನ್‌ ಓಪನ್‌ ಪುರುಷರ ಗಾಲ್ಫ್ ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ.

Advertisement

ಆಟಗಾರರ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಲ್ಲಿ ಈ ವರ್ಷದ ಕೂಟವನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಇಂಡಿಯನ್‌ ಗಾಲ್ಫ್ ಯೂನಿಯನ್‌ ಅಧ್ಯಕ್ಷ ದೇವಾಂಗ್‌ ಶಾ ಪ್ರಕಟಿಸಿದರು.

ಈ ಪಂದ್ಯಾವಳಿ ಮಾರ್ಚ್‌ 19ರಿಂದ 22ರ ತನಕ ಗುರ್ಗಾಂವ್‌ನಲ್ಲಿ ನಡೆಯಬೇಕಿತ್ತು. ಆಗ ಕೊರೊನಾ ಹೆಚ್ಚಲಾರಂಭಿಸಿದ ಕಾರಣ ಕೂಟವನ್ನು ಮುಂದೂಡಲಾಯಿತು. ಈಗ ಪಂದ್ಯಾವಳಿಯನ್ನೇ ಕೈಬಿಡಲು ನಿರ್ಧರಿಸಲಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next