Advertisement

ಹೀರೋ ಮೊಟೊಕಾರ್ಪ್ ನ ಎಲ್ಲಾ ದ್ವಿಚಕ್ರ ವಾಹನಗಳ ಬೆಲೆ ಜುಲೈ 1ರಿಂದ ಹೆಚ್ಚಳ.!ಮಾಹಿತಿ ಇಲ್ಲಿದೆ

05:37 PM Jun 24, 2021 | |

ನವ ದೆಹಲಿ : ಹೀರೋ ಮೊಟೊಕಾರ್ಪ್ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಜುಲೈ 1 ರಿಂದ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಈ ಬೆಲೆ ಏರಿಕೆ ಮಾದರಿ ಮತ್ತು ಮಾರುಕಟ್ಟೆಯನ್ನು ಅವಲಂಬಿಸಿರಲಿದೆ ಎಂದು ಕಂಪೆನಿ ಹೇಳಿದೆ. ಏಪ್ರಿಲ್ 2021 ರಲ್ಲಿ ಕಂಪನಿಯು ತನ್ನ ವಾಹನಗಳ ಬೆಲೆಯನ್ನು, 2,500 ವರೆಗೆ ಹೆಚ್ಚಿಸಿತ್ತು.

Advertisement

ವಾಹನದ ಮೇಲಿನ ಬೆಲೆಯನ್ನು 3,000 ರೂ ವರೆಗೆ ಹೆಚ್ಚಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಈ ಬಾರಿ ಕೋವಿಡ್ ಸೋಂಕಿನ ಕಾರಣದಿಂದಾಗಿ ದೇಶದಲ್ಲಿ ಎಲ್ಲಾ ಉದ್ಯಮ ಕ್ಷೇತ್ರಗಳಿಗೂ ಭಾರಿ ಹೊಡೆತ ಬಿದ್ದಿತ್ತು, ಹೀರೋ ಮೊಟೊಕಾರ್ಪ್ ಲಾಕ್ ಡೌನ್ ಪರಿಣಾಮವನ್ನು ಅನುಭವಿಸಿದ್ದು,  ಮೇ 2021 ರಲ್ಲಿ, ಕಂಪನಿಯ ಮಾಸಿಕ ಮಾರಾಟವು 50.83 ಪ್ರತಿಶತದಷ್ಟು ಕುಸಿದಿದೆ.

ಇದನ್ನೂ ಓದಿ :  ಲಸಿಕೆಯೊಂದರಿಂದಲೇ ಕೊರೊನಾದಿಂದ ದೂರವಿರಲು ಸಾಧ್ಯ : ಸಚಿವ ಡಾ.ಕೆ.ಸುಧಾಕರ್

ಬರುವ ತಿಂಗಳಿನಿಂದ ಆಗುತ್ತಿರುವ ಬೆಲೆ ಹೆಚ್ಚಳ ಕೂಡಾ ಮಾರಾಟದ ಮೇಲೆ ಮತ್ತಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆಯಾದರೂ, ಜುಲೈ ಮತ್ತು ಆಗಸ್ಟ್ ಸಂದರ್ಭದಲ್ಲಿ ವಾಹನಗಳ ಬೇಡಿಕೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

Advertisement

ಬೆಲೆ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಥೆ, ಕಚ್ಚಾ ವಸ್ತುಗಳು ಮತ್ತು ಸರಕುಗಳ ಬೆಲೆಯಲ್ಲಿ ನಿರಂತರ ಹೆಚ್ಚಳದಿಂದಾಗಿ ಕಂಪನಿಯ ಮೇಲಾಗುವ ಪರಿಣಾಮವನ್ನು ಸರಿದೂಗಿಸಲು ಬೆಲೆ ಏರಿಕೆ ಅಗತ್ಯವಾಗಿದೆ. ಇದು ಅನಿವಾರ್ಯವಾಗಿದೆ ಎಂದು ಹೇಳಿದೆ.

ಮೇ 2021 ರಲ್ಲಿ ದೇಶದಲ್ಲಿ ಕೊರೊನಾವೈರಸ್ ಹರಡುವುದನ್ನು ಗಮನದಲ್ಲಿಟ್ಟುಕೊಂಡು ಪ್ಲಾಂಟ್ ನಲ್ಲಿ ಕೆಲಸ ಸ್ಥಗಿತಗೊಳಿಸಿದ್ದರಿಂದ ಮಾರಾಟದಲ್ಲೂ ಬಹಳ ಕೆಟ್ಟ ಪರಿಣಾಮ ಬೀರಿದೆ.

ಇದನ್ನೂ ಓದಿ :  ಕಾರವಾರದ ನೌಕಾ ನೆಲೆಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

Advertisement

Udayavani is now on Telegram. Click here to join our channel and stay updated with the latest news.

Next