Advertisement

6ನೇ ಸ್ಥಾನಕ್ಕೆ ಜಿಗಿದ ಹರ್ಮನ್‌ಪ್ರೀತ್‌ 

06:50 AM Jul 26, 2017 | Team Udayavani |

ದುಬಾೖ: ಮಹಿಳಾ ಏಕದಿನ ಕ್ರಿಕೆಟಿಗರ ನೂತನ ರ್‍ಯಾಂಕಿಂಗ್‌ ಯಾದಿ ಬಿಡುಗಡೆಯಾಗಿದ್ದು, ಭಾರತ ತಂಡದ ಸ್ಫೋಟಕ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನಾಯಕಿ ಮಿಥಾಲಿ ರಾಜ್‌ 2ನೇ ಸ್ಥಾನದಲ್ಲಿದ್ದಾರೆ. 

Advertisement

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ನಲ್ಲಿ ಕೌರ್‌ 115 ಎಸೆತದಲ್ಲಿ 171 ರನ್‌ ಬಾರಿಸಿದ್ದರು. ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 51 ರನ್‌ ದಾಖಲಿಸಿದ್ದರು. ಹೀಗಾಗಿ ಕೌರ್‌ ರ್‍ಯಾಂಕಿಂಗ್‌ನಲ್ಲಿ 7 ಸ್ಥಾನಗಳ ಜಿಗಿತ ಕಂಡರು. ಈ ಮೂಲಕ ಅಗ್ರ 10ರಲ್ಲಿ ಸ್ಥಾನ ಪಡೆದ ಭಾರತದ 2ನೇ ಆಟಗಾರ್ತಿಯಾಗಿದ್ದಾರೆ. 

ಭಾರತದ ಮತ್ತೂಬ್ಬ ಆಟಗಾರ್ತಿ ಪೂನಂ ರಾವತ್‌ 14ನೇ ಸ್ಥಾನದಲ್ಲಿದ್ದಾರೆ. 
ತಂಡದ ವಿಭಾಗದ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ಭಾರತ 4ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next