Advertisement

ಹರ್ಮನ್‌ಪ್ರೀತ್‌ ಡಿಎಸ್‌ಪಿಯಾಗಿ ನೇಮಕ

07:35 AM Aug 03, 2017 | Team Udayavani |

ಚಂಡೀಗಢ: ಐಸಿಸಿ ವನಿತಾ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ಅಮೋಘ ಶತಕ ಸಿಡಿಸಿದ್ದ ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ ಡಿಎಸ್‌ಪಿ ಹುದ್ದೆ ನೀಡಲು ಪಂಜಾಬ್‌ ಸರಕಾರ ನಿರ್ಧರಿಸಿದೆ. 

Advertisement

ಕೌರ್‌ ಬುಧವಾರ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರನ್ನು ಭೇಟಿ ಮಾಡಿದರು. ಕೌರ್‌ ಅವರನ್ನು ಡೆಪ್ಯೂಟಿ ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್‌ (ಡಿಎಸ್‌ಪಿ) ಆಗಿ ನೇಮಕ ಮಾಡಲು ಅಗತ್ಯವಿರುವ ವಿಧಾನಗಳನ್ನು ಪೂರ್ತಿಗೊಳಿಸುವಂತೆ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಸುರೇಶ್‌ ಅರೋರ ಅವರಿಗೆ ಮುಖ್ಯಮಂತ್ರಿ ಅಮರಿಂದರ್‌ ನಿರ್ದೇಶ ನೀಡಿದರು. ಪ್ರತಿಭಾನ್ವಿತ ಯುವ ಆಟಗಾರ್ತಿಯಾಗಿರುವ ಕೌರ್‌ ಪಂಜಾಬ್‌ನಲ್ಲಿಯೇ ಇರಬೇಕೆನ್ನುವುದು ನಮ್ಮ ಬಯಕೆ ಎಂದವರು ಹೇಳಿದರು. ಕೌರ್‌ ಸದ್ಯ ರೈಲ್ವೇಸ್‌ನಲ್ಲಿ ಉದ್ಯೋಗದಲ್ಲಿದ್ದಾರೆ. 

ಕೌರ್‌ ಅವರ ಸಾಧನೆಯನ್ನು ಕೊಂಡಾಡಿದ ಅಮರಿಂದರ್‌ ಅವರು ಈ ಸಂದರ್ಭದಲ್ಲಿ 5 ಲಕ್ಷ ರೂ.ಗಳ ಚೆಕ್‌ ಅನ್ನು ಕೌರ್‌ಗೆ ನೀಡಿದರು. ವಿಶ್ವಕಪ್‌ ಕೂಟದ ಸೆಮಿಫೈನಲ್‌ನಲ್ಲಿ ಕೌರ್‌ 115 ಎಸೆತಗಳಲ್ಲಿ ಅಜೇಯ 171 ರನ್‌ ಸಿಡಿಸಿದ್ದರು. ಅವರ ಈ ಸಾಧನೆಯಿಂದ ಭಾರತ ಫೈನಲ್‌ ತಲುಪುವಂತಾಯಿತು.

ಕೌರ್‌ ಅವರನ್ನು ಪೊಲೀಸ್‌ ಇಲಾಖೆಗೆ ಸೇರ್ಪಡೆ ಮಾಡಿದ ಬಳಿಕ ಕ್ರಿಕೆಟ್‌ ತಂಡವೊಂದನ್ನು ರಚಿಸಲಾಗುವುದು ಎಂದು ಅರೋರ ಈ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next