Advertisement

ಹೆಚ್ಚುವರಿ ನೀರು ಹರಿಸಿದ್ದಕ್ಕೆ ಆಕ್ಷೇಪ

05:55 PM Apr 29, 2020 | Naveen |

ಹಿರಿಯೂರು: ವಿವಿ ಸಾಗರದಿಂದ ಚಳ್ಳಕೆರೆ ತಾಲೂಕಿಗೆ ಹೆಚ್ಚುವರಿಯಾಗಿ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿ ವಿವಿ ಸಾಗರ ನೀರಾವರಿ ಹೋರಾಟ ಸಮಿತಿ ಹಾಗೂ ರೈತ ಸಂಘದ ಮುಖಂಡರು ವಾಣಿವಿಲಾಸ ಜಲಾಶಯ ಆಣೆಕಟ್ಟಿನ ಮುಂಭಾಗದ ಕಣಿವೆ ಮಾರಮ್ಮ ದೇವಿ ದೇವಸ್ಥಾನದ ಮುಂದೆ ಧರಣಿ ಆರಂಭಿಸಿದ್ದಾರೆ.

Advertisement

ಚಳ್ಳಕೆರೆ ತಾಲೂಕಿನ ರೈತರಿಗೆ ಕುಡಿಯಲು ನೀರು ಒದಗಿಸಲು ತಾಲೂಕಿನ ವಿವಿ ಸಾಗರ ಜಲಾಶಯದಿಂದ ವೇದಾವತಿ ನದಿ ಮೂಲಕ 0.25 ಟಿಎಂಸಿ ನೀರು ಬಿಡುವಂಯೆ ಸರ್ಕಾರ ಆದೇಶ
ಹೊರಡಿಸಿದೆ. ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ ಜಾರಕಿಹೊಳಿ ಅವರು ಏ. 23 ರಂದು ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಮಂಗಳವಾರ ಮಧ್ಯಾಹ್ನದ ವೇಳೆಗೆ 0.25
ಟಿಎಂಸಿ ನೀರು ಹರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಹಾಗಾಗಿ ತಕ್ಷಣ ಅಧಿಕಾರಿಗಳು ನೀರು ಹರಿಸುವುದನ್ನು ನಿಲ್ಲಿಸಿದ್ದಾರೆ. ನೀರು ಹರಿಸಿ ಆರು ದಿನ ಕಳೆದರೂ ನೀರು ಚಳ್ಳಕೆರೆ ತಾಲೂಕನ್ನು
ತಲುಪಿಲ್ಲ. ಹಾಗಾಗಿ ನೀರು ಹರಿಸುವಂತೆ ಜಲಸಂಪನ್ಮೂಲ ಇಲಾಖೆ ಸಚಿವರು ಅಧಿಕಾರಿಗಳಿಗೆ ಮೌಖೀಕ ಸೂಚನೆ ನೀಡಿದ್ದಾರೆ.

ಅದರಂತೆ ಅಧಿಕಾರಿಗಳು ಮತ್ತೆ ನೀರು ಬಿಟ್ಟಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು. ವೇದಾವತಿ ನದಿಗೆ ಹೆಚ್ಚು ನೀರು ಹರಿಸದಂತೆ ಸ್ಥಳಕ್ಕೆ ಆಗಮಿಸಿದ ಶಾಸಕಿ
ಪೂರ್ಣಿಮಾ ಶ್ರೀನಿವಾಸ್‌ ಅವರಲ್ಲೂ ಮನವಿ ಮಾಡಿದರು. ಹೋರಾಟ ಸಮಿತಿಯ ಎಚ್‌.ಆರ್‌. ತಿಮ್ಮಯ್ಯ, ಸುರೇಶ್‌, ಸಿದ್ದರಾಮಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಡಿ.ಟಿ. ಶ್ರೀನಿವಾಸ್‌, ನಗರಸಭೆ ಸದಸ್ಯರಾದ ಬಾಲು ಆಚಾರ್‌, ಚಿರಂಜೀವಿ, ಸ್ಥಳಿಯ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next