Advertisement

ಹೆರಿಟೇಜ್‌ ವಿಲೇಜ್‌: ಮತ್ತೆ ಕಟ್ಟಡಗಳ ಒಳವೀಕ್ಷಣೆ

11:53 PM Oct 12, 2019 | Sriram |

ಉಡುಪಿ: ಮಣಿಪಾಲದ ಹಸ್ತಶಿಲ್ಪ ಹೆರಿಟೇಜ್‌ ವಿಲೇಜ್‌ ಮ್ಯೂಸಿಯಂನಲ್ಲಿ ಮಳೆಗಾಲದ ಅನಂತರ ಮತ್ತೆ ಕಟ್ಟಡಗಳ ಒಳವೀಕ್ಷಣೆ ಆರಂಭಗೊಂಡಿದೆ.

Advertisement

ವೀಕ್ಷಕರಿಗೆ ಅನುಕೂಲಕರವಾದ ರೀತಿಯಲ್ಲಿ ಪ್ರವಾಸಗಳು ಪುನಃ ರೂಪಿಸಲಾಗಿದೆ. ಈಗ ಇಡೀ ಸಂಸ್ಕೃತಿ ಗ್ರಾಮವನ್ನುಒಮ್ಮೆಲೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಪ್ರತಿದಿನ ಸಂಸ್ಕೃತಿ ಗ್ರಾಮದ ಕೇವಲ ಒಂದು ಭಾಗವನ್ನು ಮಾತ್ರ ವೀಕ್ಷಣೆಗೆ ಲಭ್ಯವಿದ್ದು ಇದರಲ್ಲಿ 6 ರಿಂದ 7 ಕಟ್ಟಡಗಳನ್ನು ವೀಕ್ಷಿಸಲು ಮಾತ್ರ ಸಾಧ್ಯವಿತ್ತು. ಈಗಿನ ಪುನಾರೂಪಿತ ವ್ಯವಸ್ಥೆಯಲ್ಲಿ ಸುಮಾರು 14 ರಿಂದ 15 ಕಟ್ಟಡಗಳನ್ನು ವೀಕ್ಷಿಸಬಹುದಾಗಿದೆ. ಇದರಲ್ಲಿ 12ನೇ ಶತಮಾನದ ಮತ್ತು 19ನೇ ಶತಮಾನದ ಕಟ್ಟಡಗಳನ್ನುವಿಶೇಷವಾಗಿ ಈ ಬಾರಿ ಹೊಸದಾಗಿ ಪರಿಚಯಿಸಲಾಗುತ್ತಿದೆ. ಪ್ರವಾಸದ ಸಮಯವನ್ನು ಹೆಚ್ಚಿಸಿದ್ದು ವೀಕ್ಷಕರಿಗೆ ಈಗ ದಿನವಹಿ ಬೆಳಗ್ಗೆ 10 ಗಂಟೆ, 11.30 ಮತ್ತು ಮಧ್ಯಾಹ್ನ 2 ಗಂಟೆಗೆ ಮೂರು ಬಾರಿ ವೀಕ್ಷಿಸಬಹುದಾಗಿದೆ.

ಇದಲ್ಲದೆ ಸಂಸ್ಕೃತಿ ಗ್ರಾಮದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಬೇರೆ ಬೇರೆಯಾಗಿ ನೋಡುವ ಸೌಲಭ್ಯವೂ ಇದೆ. ಪ್ರತಿದಿನ ಬೆಳಗ್ಗೆ 10 ಗಂಟೆ ಮತ್ತು ಮಧ್ಯಾಹ್ನ 2 ಗಂಟೆಗೆ ಉತ್ತರಭಾಗ ಹಾಗೂ ಬೆಳಗ್ಗೆ 11.30 ಮತು ¤ಸಂಜೆ 4 ಗಂಟೆಗೆ ದಕ್ಷಿಣ ಭಾಗವನ್ನುವೀಕ್ಷಿಸುವ ಅನುಕೂಲವೂ ಇದೆ. ಶಾಲಾ ಪ್ರವಾಸಗಳಿಗೆ ವಿಶೇಷ ರಿಯಾಯಿತಿಗಳಿದ್ದು ಮಕ್ಕಳಿಗೆ ವಿಶೇಷವಾಗಿ ಐತಿಹಾಸಿಕ ಮತ್ತು ನಮ್ಮ ಪೂರ್ವಜರ ಮನೆಗಳನ್ನು ನೋಡುವ ಸದಾವಕಾಶವಿದೆ.ಈ ಎಲ್ಲ ಪ್ರವಾಸಗಳು ಸೋಮವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನ ತೆರೆದಿರುತ್ತವೆ. ಹೆಚ್ಚಿನ ಮಾಹಿತಿಗೆ ಜಾಲತಾಣ www.indiaheritagevillage.org ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next