Advertisement

ನಂದಿಗಿರಿಧಾಮಕ್ಕೆ ಪಾರಂಪರಿಕ ಸ್ಥಾನ

11:30 AM May 21, 2018 | Team Udayavani |

ಚಿಕ್ಕಬಳ್ಳಾಪುರ: ದಕ್ಷಿಣ ಕರ್ನಾಟಕದ ಊಟಿ ಎಂದೇ ಖ್ಯಾತಿ ಪಡೆದಿರುವ ವಿಶ್ವ ವಿಖ್ಯಾತ ನಂದಿ ಗಿರಿಧಾಮಕ್ಕೆ ಕಾನೂನಾತ್ಮಕ ವಿಶೇಷ ಸ್ಥಾನಮಾನ  ಕಲ್ಪಿಸುವ ಮೂಲಕ ಗಿರಿಧಾಮದ ಪ್ರಾಕೃತಿ ಸೊಬಗನ್ನು ಭವಿಷ್ಯದ ಪೀಳಿ ಗೆಗೆ ಉಳಿಸುವ ನಿಟ್ಟಿನಲ್ಲಿ ಪರಿಸರ ಚಿಂತಕರ ತಂಡವೊಂದು ಅಧ್ಯಯನ ನಡೆಸುವ ಮೂಲಕ ಕಾನೂನು ಸಮರಕ್ಕೆ ಸಜ್ಜಾಗುತ್ತಿದೆ ಸಮುದ್ರ ಮಟ್ಟದಿಂದ 4,851 ಅಡಿಗಳಷ್ಟು ಗಗನಮುಖೀಯಾಗಿ

Advertisement

ಏಕಶಿಲೆಯಿಂದ  ರೂಪಗೊಂಡಿರುವ ನಂದಿಬೆಟ್ಟದ ರಮಣೀಯ ಪ್ರಕೃತಿಯ ಸೌಂದರ್ಯದ ಸೊಬಗು ಚಿಕ್ಕಬಳ್ಳಾಪುರ ಜಿಲ್ಲೆಗೆ ಮುಕುಟ ಪ್ರಾಯವಾಗಿದ್ದರೂ ಇತ್ತೀಚೆಗೆ  ಗಿರಿಧಾಮಕ್ಕೆ ಪೆಟ್ಟು ಕೊಡುವ ನಿಟ್ಟಿನಲ್ಲಿ ಬೆಟ್ಟದ ಸುತ್ತಮುತ್ತ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬೆಟ್ಟದ ಸೌಂದರ್ಯಕ್ಕೆ ಘಾಸಿ ಮಾಡುತ್ತಿದೆ.  ಜೊತೆಗೆ ಬೆಟ್ಟದ ಸುತ್ತಮುತ್ತ ಖಾಸಗಿ ರೆಸಾರ್ಟ್‌ಗಳು ತಲೆ ಎತ್ತಿ ಇಡೀ ಗಿರಿಧಾಮದ ಪರಿಸರವನ್ನು ಹಾಳು ಮಾಡುತ್ತಿರುವುದು ಇದೀಗ ಪರಿಸರ   ವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. 

ಗಿರಿಧಾಮ ಸಮಗ್ರ ಅಧ್ಯಯನ: ನಂದಿ ಗಿರಿಧಾಮದಲ್ಲಿ ಮನರಂಜನೆ ಹಾಗೂ ಪ್ರವಾಸೋದ್ಯಮದ ಹೆಸರಲ್ಲಿ ನಡೆಯುವ ಎಲ್ಲಾ ರೀತಿಯ ಅಕ್ರಮ, ಅನೈತಿಕ  ಚಟುವಟಿಕೆಗಳಿಗೆ ಬ್ರೇಕ್‌ ಹಾಕಿ ಇಡೀ ಗಿರಿಧಾಮವನ್ನು ಹಸಿರು ವಲಯ ವಾಗಿ ಘೋಷಿಸಿ ವಿಶೇಷ ಪಾರಂಪರಿಕ ಸ್ಥಾನಮಾನ ಕಲ್ಪಿಸಬೇಕೆಂದು  ಪಣ ತೊಟ್ಟು ಖ್ಯಾತ ಪರಿಸರವಾದಿ ಡಾ.ಯಲ್ಲಪ್ಪರೆಡ್ಡಿ ಅಧ್ಯಕ್ಷ ರಾಗಿರುವ ಬೆಂಗಳೂರಿನ ಎನ್ವರಾನ್ಮೆಂಟ್‌ ಟ್ರಸ್ಟ್‌ ಗಿರಿ ಧಾಮದ ಸಮಗ್ರ ಅಧ್ಯಯನಕ್ಕೆ ಮುಂದಾಗಿದೆ.

ಅಧ್ಯಯನಕ್ಕಾಗಿ ಬಿಇಟಿ ಸಂಸ್ಥೆ ನ್ಯಾಷನಲ್‌ ಲಾ-ಸ್ಕೂಲ್‌ ಆಫ್ ಇಂಡಿ ಯಾ ಯೂನಿರ್ವಸಿಟಿಯ 80 ಕ್ಕೂ ಹೆಚ್ಚು ಕಾನೂನು  ವಿದ್ಯಾರ್ಥಿಗಳನ್ನು ಬಳಸಿಕೊಂಡು ಭೂಗರ್ಭ ಶಾಸ್ತ್ರಜ್ಞರು, ಜಲತಜ್ಞರು, ಜೀವ ಶಾಸ್ತ್ರಜ್ಞರು, ಪರಿಸರ ತಜ್ಞರು ಸೇರಿ 100ಕ್ಕೂ ಹೆಚ್ಚು ಅಧ್ಯಯನ ತಂಡ  ಗಿರಿಧಾಮಕ್ಕೆ ಭೇಟಿ ನೀಡಿ ಅಲ್ಲಿನ ಜೀವ ವೈವಿಧ್ಯ, ಪರಿಸರ ಸೊಗಬು, ಗಿರಿಧಾಮದ ಸುತ್ತ ನಡೆಯು  ತ್ತಿರುವ ಗಣಿಗಾರಿಕೆ, ಖಾಸಗಿ ರೆಸಾರ್ಟ್‌ ಸೇರಿ  ಅನೈತಿಕ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಕೆಲ ಹಾಕಿದೆ. ಸುಮಾರು 90 ಎಕರೆ ವಿಸ್ತೀಣದಲ್ಲಿರುವ ನಂದಿಗಿರಿಧಾಮ ಐತಿಹಾಸಿಕ ವೈಶಿಷ್ಯತೆಯ  ಅನೇಕ ಕುರುಹಗಳಿಗೆ ಸಾಕ್ಷಿಯಾಗಿ ನಿಂತಿದೆ. 

ಸ್ಪಂದಿಸದಿದ್ದರೆ ಕಾನೂನು ಹೋರಾಟ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆಯ ದೂರದಲ್ಲಿರುವ ನಂದಿಗಿರಿಧಾಮ ಬೆಂಗಳೂರಿಗೆ ಹತ್ತಿರವಾಗಿದೆ. ಆದರೆ ಪ್ರತಿ ನಿತ್ಯ  ಹಾರಾಡುವ 400, 500 ವಿಮಾನಗಳು ಹೊರ ಸೂಸುವ ಗಾಳಿ ಹಾಗೂ ಶಬ್ದದಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ  ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಇದನ್ನು ತಡೆಯಬೇಕಾದರೆ 4,800 ಅಡಿಗಳ ಮೇಲೆ ಇರುವ ನಂದಿಬೆಟ್ಟದಿಂದ ಮಾತ್ರ ಸಾಧ್ಯ,

Advertisement

ಬೆಟ್ಟದಲ್ಲಿ ಹೆಚ್ಚಿನ  ಪರಿಸರ ಉಳಿಸಿ ಬೆಳೆಸುವುದರಿಂದ ವಿಮಾನಗಳು ಹೊರ ಸೂಸುವ ವಿಷದ ಗಾಳಿ ಮರ, ಗಿಡಗಳ ಎಲೆಗಳೇ ಎಳೆದುಕೊಳ್ಳುತ್ತದೆ. ಇದರಿಂದ  ನಂದಿಗಿರಿಧಾಮ ದುರ್ಬಳಕೆ ಆಗದಂತೆ ಹಸಿರು ವಲಯವಾಗಿ ವಿಶೇಷ ಪಾರಂಪರಿಕ ತಾಣವಾಗಿಯೇ ಉಳಿಯಲಿ ಎಂಬ ಉದ್ದೇಶದಿಂದ ಅಧ್ಯಯನಕ್ಕಾಗಿ  ಮುಂದಾಗಿದ್ದೇವೆಂದು ಅಧ್ಯಯನದ ನೇತೃತ್ವ ವಹಿಸಿರುವ ಪರಿಸರವಾದಿ ಡಾ.ಯಲ್ಲಪ್ಪರೆಡ್ಡಿ “ಉದಯವಾಣಿ’ಗೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next